ಚಾರ್ಲಿ ಚಿತ್ರವೂ ಯಶಸ್ವೀ ಪ್ರದರ್ಶನವನ್ನ ಕಾಣುತ್ತಿದೆ, ಇದೆ ಸಂದರ್ಭದಲ್ಲಿ ಚಾರ್ಲಿ ಚಿತ್ರವೂ 25 ದಿನಗಳ ಸಂಭ್ರಮಾಚರಣೆಯಲ್ಲಿ ಚಾರ್ಲಿ ಚಿತ್ರದ ನಾಯಕ ಹಾಗು ನಿರ್ಮಾಪಕರಾದ ರಕ್ಷಿತ್ ಶೆಟ್ಟಿಯವರು ಕೆಲವೊಂದು ವಿಚಾರಗಳನ್ನು ಹಂಚಿಕೊಂಡರು.
ಚಾರ್ಲಿ ಚಿತ್ರದ ಯಶಸ್ವೀ ಪ್ರದರ್ಶನದ ನಡುವೆ ಚಿತ್ರವೂ 150 ಕೋಟಿಯ ಕಲೆಕ್ಷನ್ ಮಾಡಿರುವುದು ಸಂತಸ ತಂದಿದೆ. ಚಿತ್ರದ ಲಾಭದಲ್ಲಿ ಶೇ 5 % ಹಣವನ್ನು ಚಾರ್ಲಿ ಹೆಸರಿನಲ್ಲಿ ಭಾರತದಾದ್ಯಂತ ಇರುವ ಸಂಘ ಸಂಸ್ಥೆಗಳ ಮುಖಾಂತರ ಬೀದಿ ನಾಯಿಗಳ ಆರೈಕೆ ಮತ್ತು ಸಂರಕ್ಷಣೆ ಮಾಡಲು ಈ ಹಣವನ್ನು ವಿನಿಯೋಗಿಸಲಾಗುತ್ತದೆ, ಎಂದು ಚಿತ್ರದ ನಾಯಕ ಕಮ್ ನಿರ್ಮಾಪಕರಾದ ರಕ್ಷಿತ್ ಶೆಟ್ಟಿಯವರು ತಿಳಿಸಿದರು..
ಹಾಗು 10 % ಹಣವನ್ನು ಈ ಚಿತ್ರದಲ್ಲಿ ದುಡಿದ ಎಲ್ಲ ಕಲಾವಿದರು, ತಂತ್ರಜ್ಞರಿಗೆ ಲಾಭಾಂಶದಲ್ಲಿ ಪಾಲನ್ನು ಕೊಡಲು ನಿರ್ಧರಿಸಿದ್ದಾರೆ. ಚಿತ್ರದ ಯಶಸ್ಸಿಗೆ ಎಲ್ಲ ಕಲಾವಿದರು, ಹಾಗು ತಂತ್ರಜ್ಞರು ಕಾರಣರಾಗಿದ್ದಾರೆ. ಆದ್ದರಿಂದ ಎಲ್ಲರಿಗು ಈ ಪಾಲನ್ನು ಕೊಡಲು ನಿರ್ಧರಿಸಿದ್ದಾರೆ. ಅವರ ಈ ನಿರ್ಧಾರವು ಬಹಳ ಶ್ಲಾಘನೀಯವಾಗಿದೆ.
ಸ್ವಯಂ ಮುಖ್ಯಮಂತ್ರಿಗಳು ಈ ಚಿತ್ರವನ್ನು ನೋಡಿ ಮೆಚ್ಚುಗೆಯನ್ನು ಸೂಚಿಸಿ 100 % ತೆರಿಗೆ ವಿನಾಯ್ತಿಯನ್ನು ಘೋಷಿಸಿದ್ದರು, ಎಂಬುದನ್ನು ನಾವು ಇಲ್ಲಿ ಸ್ಮರಿಸಬಹುದು. ಒಟ್ಟಿನಲ್ಲಿ ಚಿತ್ರವೂ ಇನ್ನಷ್ಟ್ಟು ದೊಡ್ಡ ಮಟ್ಟದಲ್ಲಿ ಹೆಸರು ಮಾಡಲಿ ಎಂದು ಚಿತ್ರೋದ್ಯಮ.ಕಾಂ ಆಶಿಸುತ್ತದೆ.