30/01/2023

CHITRODYAMA.COM

SUPER MARKET OF CINEMA NEWS

ಕನಾ೯ಟಕದ ಕೋಗಿಲೆ ಅನುರಾಧ ಭಟ್

( ಮುಂದುವರೆದ ಭಾಗ )

ಮೊದಲ ಪೂಣ೯ ಪ್ರಮಾಣದ ಗಾಯಕಿ ಆಗಿ ಹೊರಹೊಮ್ಮಿದ ಚಿತ್ರ “ಮೀರಾ ಮಾಧವ ರಾಘವ ” ವಸಂತ ವಸಂತ ಗೀತ.

“ಎಲ್ಲೆಲ್ಲು ಓಡುವ ಮನಸೆ, ಯಾಕಿಂತ ಹುಚ್ಚುಚ್ಚು ಮನಸೆ

ಇಲ್ಲದ ಸಲ್ಲದ ತರಲೆ, ಹೋ ಹೋದಲ್ಲಿ ಬಂದಲ್ಲಿ ತರವೆ “

ತಮ್ಮ ಮಾಧುರ್ಯ ತುಂಬಿದ ಹಾಡಿನಿಂದ ಹೆಸರಾದ ಇವರು ಎಲ್ಲರ ಮನೆಮಾತಾಗಿದ್ದಾರೆ, ಸವಾರಿ (ಮರಳಿ ಮರೆಯಾಗಿ ), ಝುಮ್ ಝುಮ್ ಮಾಯಾ (ವೀರ ಮದಕರಿ). ಜಂಗ್ಲೀ ಶಿವಲಿಂಗು (ಜಂಗ್ಲಿ), ಶ್ರೀಕೃಷ್ಣ (ಭಜರಂಗಿ), ಚಂದಚಂದ (ಅಂಜನೀಪುತ್ರ),  ಜರಾಸಂಧ, ಬಚ್ಚನ್, ಪ್ರೇಮ್ ಅಡ್ಡ, ಯಾರೋ ಇವನು ಜೋಕುಮಾರ (ಯಾರೇ ಕೂಗಾಡಲಿ), ಕಟಾರಿವೀರ ಸುರಸುಂದರಾಂಗ, ವರದನಾಯಕ, ಅಂದರ್ ಬಾಹರ್, ವೀರಪರಂಪರೆ, ಪಂಚರಂಗಿ, ಏನೋ ಒಂಥರ, ಚಿರು, ಕೃಷ್ಣನ್ ಲವ್ ಸ್ಟೋರಿ, ದುಬಾಯ್ ಬಾಬು, ಅಭಯ್, ಪರಮೇಶ ಪಾನುವಾಲ, ಸೌಂದರ್ಯ, ಗುಣವಂತ, ಚೌಕ, ಸಿದ್ಲಿಂಗು, ಮೊದಲಸಲ, ಗಣಪ ಇನ್ನೂ ಮುಂತಾದ ಚಿತ್ರಗಳಲ್ಲಿ ಹಾಡಿದ್ದಾರೆ.

ಇವರು ಸಂಗೀತ ನಿದೇ೯ಶಕರಾದ ಹಂಸಲೇಖ, ಗುರುಕಿರಣ್, ವಿ. ಹರಿಕೃಷ್ಣ, ಅಜು೯ನ್ ಜನ್ಯ, ರವಿ ಬಸ್ರೂರು, ಎಂ ಎಂ ಕೀರವಾಣಿ, ಮಣಿಶಮ೯, ತಮನ್, ಮನೋಮೂತಿ೯,ಶ್ರೀಧರ್ ಸಂಭ್ರಮ್, ವಿ. ಮನೋಹರ್, ಸಾಧು ಕೋಕಿಲ, ರಾಜೇಶ್ ರಾಮನಾಥ್ ಮುಂತಾದ ನಿದೇ೯ಶಕರ ಜೊತೆ ಕೆಲಸ ಮಾಡಿದ್ದಾರೆ.

ಹಿನ್ನೆಲೆ ಗಾಯಕಿಯಾಗಿ 5000 ಕ್ಕೂ ಹೆಚ್ಚು ಹಾಡುಗಳನ್ನು 15 ಭಾಷೆಯಲ್ಲಿ ಹಾಡಿರೋದು ಗಮನಾರ್ಹ. ಕನ್ನಡವಲ್ಲದೆ ತುಸು, ಕೊಂಕಣಿ, ಹಿಂದಿ, ತಮಿಳು, ತೆಲುಗು, ಮಲಯಾಳಂ, ಮರಾಠಿ, ಬೆಂಗಾಳಿ,  ಸಂಸ್ಕೃತ,  ಕೊಡವ, ಇಂಗ್ಲಿಷ್ ಹೀಗೆ… ಚಿತ್ರಗೀತೆಗಳಲ್ಲದೆ ಜಾನಪದ, ಭಾವಗೀತೆ, ಪಾಪ್ ಸಂಗೀತ, ಮಕ್ಕಳ ಗೀತೆಗಳು, ಟಿವಿ ಸೀರಿಯಲ್ “ಚಿನ್ನು” ಭಾಗ 1 2 3 ಬಹಳ ಜನಪ್ರಿಯವಾದವು.

ಕಾಟೂ೯ನ್ ಕ್ಯಾರೆಕ್ಟರ್ ಗಳಿಗೆ ಡಬ್ ಮಾಡಿರೋದು, ಜಿಂಗಲ್ ಗಳಿಗೆ, ಡಾಕುಮೆಂಟರಿಗಳಿಗೆ ಧ್ವನಿ ನೀಡಿರೋದು ವಿಶೇಷ.

ದೂರದಶ೯ನ ದಲ್ಲಿ ಪ್ರಸಾರವಾದ “ಬೆಳಗು” ,ಹಲವಾರು ವಾಹಿನಿಯಲ್ಲಿ ಸಂಗೀತ ಕಾಯ೯ಕ್ರಮ ನಡೆಸಿಕೊಟ್ಟಿದ್ದಾರೆ, ಈ ಟಿವಿ ಯಲ್ಲಿ  “ಎಂದೂ ಮರೆಯದ ಹಾಡು ” ಜನಶ್ರೀಯಲ್ಲಿ “ನಕ್ಷತ್ರ ಮಂಥನ “, ಉದಯ ವಾಹಿನಿಯಲ್ಲಿ “ಅಕ್ಷರಮಾಲೆ ” ಶೋ ನಡೆಸಿಕೊಟ್ಟಿರೋದು,  ಕಸ್ತೂರಿ ವಾಹಿನಿಯಲ್ಲಿ “ಸಪ್ತಸ್ವರ 3 ನಲ್ಲಿ ಮಾಗ೯ದಶಿ೯ಯಾಗಿರೋದು ನೋಡಬಹುದು.

6 ನೇ ವಯಸ್ಸಿನಲ್ಲಿ ಆಲ್ ಇಂಡಿಯಾ ರೇಡಿಯೋದ ನೇರ ಪ್ರಸಾರ, ಗಾಯಕಿಯಾದ ನಂತರ ಅಮೇರಿಕಾ, ಆಸ್ಟ್ರೇಲಿಯ, ಯೂರೋಪ್, ಸಿಂಗಾಪುರ, ಹಾಂಗ್ ಕಾಂಗ್, ದುಬೈ, ಮಸ್ಕತ್, ಖತರ್, ಕುವೈತ್ ಮತ್ತು ಬೆಹ್ರಿನ್ ನಲ್ಲಿ ಶೋ ನೀಡಿದ್ದಾರೆ, ಹೆಸರಾಂತ ಗಾಯಕರಾದ ಎಸ್ ಪಿ ಬಾಲಸುಬ್ರಹ್ಮಣ್ಯಂ, ಶಂಕರ್ ಮಹದೇವನ್, ಸುರೇಶ್ ವಾಡೇಕರ್, ಉದಿತ್ ನಾರಾಯಣ್, ರಾಜೇಶ್ ಕೃಷ್ಣನ್, ವಿಜಯ್ ಪ್ರಕಾಶ್‌, ವಿಜಯ್ ಯೇಸುದಾಸ್ ಇನ್ನೂ ಗಾಯಕರ ಜೊತೆ ಹಾಡಿರೋದು ಪ್ರಶಂಸನೀಯ.

( ಮುಂದುವರೆಯುವುದು )

Leave a Reply

Copyright © All rights reserved. | Newsphere by AF themes.