ವಿಶ್ವದಾದ್ಯಂತ ಸಿನಿ ಪ್ರಿಯರು ಕಾತುರದಿಂದ ಕಾಯುತ್ತಿರುವ KGF-2 ಸಿನಿಮಾದ ಚಿತ್ರೀಕರಣ ಮುಗಿದಿದ್ದು ಪೋಸ್ಟ್ ಪ್ರೊಡಕ್ಷನ್ ಕೆಲಸ ಕೆಲಸ ಸಾಗುತ್ತಿದೆ ಅದರ ಜೊತೆಗೆ ಸಿನಿಮಾದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ ಕಲಾವಿದರು ಅವರ ಪಾತ್ರಕ್ಕೆ ಡಬ್ಬಿಂಗ್ ಮಾಡುವಲ್ಲಿ ನಿರತರಾಗಿದ್ದಾರೆ. ಸಿನಿಮಾದಲ್ಲಿ ಅಧೀರನ ಪಾತ್ರ ನಿರ್ವಹಿಸ್ತಿರೋ ಸಂಜಯ ದತ್ತ್ ಇಂದಷ್ಟೇ ಹಿಂದಿಯಲ್ಲಿ ಡಬ್ಬಿಂಗ್ ಮುಗಿಸಿದ್ದಾರೆ, 3 ನೆ ಹಂತದ ಸ್ವಾಶಕೊಶದ ಕ್ಯಾನ್ಸರನ್ನ ಗೆದ್ದು ಚೇತರಿಸಿಕೊಂಡು ಇದೀಗ ಮೊದಲ ಬಾರಿಗೆ ಸಂಜಯ್ ದತ್ ಡಬ್ಬಿಂಗ್ ಮಾಡಿರುವುದು ” ಅಧೀರನ” ಪಾತ್ರಕ್ಕೆ. ಡಬ್ಬಿಂಗ್ ಮುಗಿದ ನಂತರ, ನೇರ ಬಾಂಬೆಯ ಸ್ಟುಡಿಯೋದಿಂದ ನಿರ್ದೇಶಕ ಪ್ರಶಾಂತ್ ನೀಲ್ ಸಂಜಯ್ ದತ್ ಜೊತೆ ಫೋಟೋ ಕ್ಲಿಕ್ಕಿಸಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಏಕಕಾಲಕ್ಕೆ 5 ಭಾಷೆಗಳಲ್ಲಿ ಸಿನಿಮಾ ಬಿಡುಗಡೆಯಾಗ್ತಿರೋದು ಗೊತ್ತೇ ಇದೆ ಮೊದಲ ಬಾರಿ ಕನ್ನಡದಲ್ಲಿ ನಟಸ್ತಿರೋ ಸಂಜಯ್ ದತ್ ಅವರಿಗೆ ಯಾರು ಧ್ವನಿಯಾಗಲಿದ್ದಾರೆ ಅನ್ನೋ ಕಾತುರವು ಇದೆ.
ಅಧೀರ ಮಾತಾಡಿದ್ದಾಯ್ತು