ಲಾಕ್ಡೌನ್ತೆರವುಗೊಳಿಸಿದ ನಂತರ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿರುವ ಮೊದಲ ಕನ್ನಡ ಸಿನಿಮಾ ” ಆಕ್ಟ್ 1978″. ಈ ತಿಂಗಳ 20ನೆ ತಾರೀಖಿನಿಂದ ರಾಜ್ಯಾದ್ಯಂತ ತೆರೆಕಾಣಲಿದೆ, ಸಮಾಜದ ಅಸ್ವಸ್ಥ್ಯತೆ ಹಾಗೂ ಶೋಷಿತ ವರ್ಗದ ದುಗಡದ ಕಥೆ ಸಿನಿಮಾದ ಆಧಾರಾ. ನಾತಿಚರಾಮಿ ಖ್ಯಾತಿಯ ಮಂಸೊರೆ(ಮಂಜುನಾಥ್ಸೋಮಶೇಖರ್) ಸಿನಿಮಾದ ಸಾರಥಿಯಾಗಿದ್ದರೆ. ತಾರಾಗಣದಲ್ಲಿ ಯಜ್ಞಾ ಶೆಟ್ಟಿ , ಶ್ರುತಿ, ದತ್ತಣ್ಣ, ಪ್ರಮೊದ್ ಶೆಟ್ಟಿ ಮತ್ತು ಬಿ. ಸುರೇಶ್ ಕಾಣಲಿದ್ದಾರೆ, ಸತ್ಯಹಗ್ಗಡೆ ಅವರ ಛಾಯಾಗ್ರಹಣವಿದ್ದು ಸಿನಿಮಾಗೆ ದೇವರಾಜ್ ಎಂಬ ಉದ್ಯಮಿ ಹಣ ಹೂಡಿದ್ದಾರೆ.
ಅಂದಾಜು 15 ದೊಡ್ಡ ಸಿನಿಮಾಗಳು ಬಿಡುಗಡೆಗೆ ಸಿದ್ದವಿದೆ ಆದ್ರೆ ಸಮಸ್ಯೆಗಳ ಪಟ್ಟಿ ಅದಕ್ಕಿಂತಲುಬೃಹತ್ತಾಗಿರುವ ಕಾರಣ, ನಿರ್ಮಾಪಕರು ತಮ್ಮ ಸಿನಿಮಾವನ್ನ ಚಿತ್ರಮಂದಿರಕ್ಕೆ ತರಲು ಹಿಂದೇಟು ಹಾಕಿದ್ದಾರೆ. ACT 1978 ಸಿನಿಮಾ ದಿಟ್ಟ ನಿರ್ಣಯ ತೆಗೆದುಕೊಂಡ ಸಿನಿಮಾ ಪ್ರಸ್ತುತ ಪಡಿಸುವುದರಲ್ಲಿ ಮೊದಲಿಗರಾಗಿದ್ದಾರೆ.