“Jua” ಎಂದರೆ ಆಫ್ರಿಕನ್ ಭಾಷೆಯಲ್ಲಿ ಸೂರ್ಯ.
ಮನುಷ್ಯ ಸಂಘಜೀವಿ. ಭೂಮಿಯ ಮೇಲಿನ ಉಳಿದ ಜೀವಿಗಳೊಡನೆ ಹೊಂದಿಕೊಂಡು ಬದುಕಿ ಬಾಳಬೇಕಾದದ್ದು ಅವನ ಕರ್ತವ್ಯ. ಆದರೆ ಮನುಷ್ಯ ಹಾಗೆ ಮಾಡದೇ ತೀರಾ ಸ್ವಾರ್ಥಿ ಆಗಿಬಿಟ್ಟರೆ ಏನಾಗುತ್ತದೆ? ಇಡೀ ಭೂಮಿ್ಗೆಗೇ ಕಂಟಕ ಎದುರಾಗುತ್ತದೆ.
ಹೌದು.
ಗ್ರಹಣದ ಸಮಯದಲ್ಲಿ ಸೂರ್ಯನಿಂದ ಬರುವ ಅತಿನೇರಳೆ ಕಿರಣಗಳಿಂದ ಭೂಮಿಯನ್ನು ರಕ್ಷಿಸಲು ಕೆಲವು ಋಷಿಮುನಿಗಳು ಒಂದು ವಸ್ತುವನ್ನು ತಯಾರಿಸಿ (ಅದೇ jua) ಆಫ್ರಿಕಾದ ಆದಿವಾಸಿಗಳಿಗೆ ಕೊಟ್ಟಿರುತ್ತಾರೆ. ಆ ವಸ್ತು ಗ್ರಹಣದ ನಂತರದ ಅತಿನೇರಳೆ ಕಿರಣಗಳಿಂದ ಭೂಮಿಯನ್ನು ರಕ್ಷಿಸುತ್ತಿರುತ್ತದೆ.
ಇಂತಹಾ jua ಮೇಲೆ ಅಂಡರ್ ವರ್ಲ್ಡ್ ಡಾನ್ ಒಬ್ಬನ ಕಣ್ಣು ಬೀಳುತ್ತದೆ. ಅವನ ಕಡೆಯವರು ಅದನ್ನು ಅಪಹರಿಸಲು ಯತ್ನಿಸುತ್ತಾರೆ. ಆ jua ಅವರ ಕೈಗೆ ಸಿಗದೇ ನಾಯಕನ ಕೈಗೆ ಸಿಗುತ್ತದೆ. ಅದು ಹೇಗೆ ಎನ್ನುವುದೇ ಇಡೀ ಸಿನೆಮಾದ ಕಥೆ.
ಇಡೀ ಸಿನೆಮಾ ಹಾಸ್ಯಮಯವಾಗಿದೆ.
ನಗಲು ಪುರಸೊತ್ತೇ ಇಲ್ಲದಂತೆ ನಗಿಸುತ್ತದೆ ಸಿನೆಮಾ. ಮನಸೋ ಇಚ್ಛೆ ನಕ್ಕು ಹಗುರಾಗಲು ಈ ಸಿನೆಮಾ ನೋಡಿ. ನಾಯಕ ಮತ್ತು ಆತನ ಮಿತ್ರ ಮಾಡುವ ಯಡವಟ್ಟುಗಳು, ನಾಯಕಿಯ ಹುಸಿಕೋಪ, ನಾಯಕಿಯ ತಂದೆಯ ಹಠ ಎಲ್ಲವೂ ನಗೆಗಡಲಿನಲ್ಲಿ ತೇಲುವಂತೆ ಮಾಡುತ್ತದೆ.