bullet prakash ಪುತ್ರ ರಕ್ಷಕ್ ಬುಲೆಟ್ (Rakshak Bullet) ಅವರು ಮೂರನೇ ಸ್ಪರ್ಧಿಯಾಗಿ ಬಿಗ್ ಬಾಸ್ (Bigg Boss Kannada 10) ಮನೆಯಿಂದ ಔಟ್ (Eliminate) ಆಗಿದ್ದಾರೆ. ಸದಾ ಖಡಕ್ ಡೈಲಾಗ್ ಮೂಲಕ ಗಮನ ಸೆಳೆದಿದ್ದ ಯುವ ನಟ ರಕ್ಷಕ್‌ಗೆ ದೊಡ್ಮನೆಯ ಆಟ ಅಂತ್ಯವಾಗಿದೆ
ಸ್ನೇಕ್ ಶ್ಯಾಮ್, ಗೌರೀಶ್ ಬಳಿಕ ರಕ್ಷಕ್ ಬುಲೆಟ್ ದೊಡ್ಮನೆಯ ಆಟಕ್ಕೆ ವಿದಾಯ ಹೇಳಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ (Bigg Boss House) 2ನೇ ವಾರದ ಕ್ಯಾಪ್ಟನ್ ಆಗಿ ಗಮನ ಸೆಳೆದಿದ್ದರು. ಮನೆಯ ಉತ್ತಮ ಆಟಗಾರ ಎಂದು ಕೂಡ ಗುರುತಿಸಿಕೊಂಡಿದ್ದರು.
ಇತ್ತೀಚೆಗೆ ಡ್ರೋನ್ ಪ್ರತಾಪ್ (Drone Prathap) ಗೂಬೆ ಎಂದಿದ್ದಕ್ಕೆ ಕಿಚ್ಚ (Sudeep) ರಕ್ಷಕ್‌ಗೆ ಖಡಕ್ ಕ್ಲಾಸ್ ಕೂಡ ತೆಗೆದುಕೊಂಡಿದ್ದರು. ಟಾಸ್ಕ್, ಪಂಚಿಂಗ್ ಡೈಲಾಗ್ ಹೇಳೋದ್ರಲ್ಲಿ ರಕ್ಷಕ್ ಸದಾ ಮುಂದಿದ್ದರು. ರಕ್ಷಕ್ ಮನರಂಜನೆ ಕೂಡ ಫ್ಯಾನ್ಸ್‌ಗೆ ಖುಷಿಕೊಟ್ಟಿತ್ತು.
ರಕ್ಷಕ್ ಬುಲೆಟ್ ಎಲಿಮಿನೇಟ್ ಆಗಿರೋದು ಅವರ ಫ್ಯಾನ್ಸ್ ಬೇಸರಯುಂಟು ಮಾಡಿದೆ. ಆದರೆ ಮುಂಬರುವ ಸಿನಿಮಾಗಳಲ್ಲಿ ನಟನೆಯ ಮೂಲಕ ರಕ್ಷಕ್ ಮೋಡಿ ಮಾಡಲಿ ಎಂಬುದೇ ಅಭಿಮಾನಿಗಳ ಆಶಯ