“funtoosh” (ಹಿಂದಿ)

fun2ssh

ಪ್ರಸ್ತುತ ಕಾಲದಿಂದ ಭೂತಕಾಲಕ್ಕೆ ಹೋಗುವ ಸಿನೆಮಾ ಇದು.

ಮೂವರು ಯುವಕರು ತಮ್ಮ ಮೇಲೆ ಬಂದಿರುವ ಕಳ್ಳತನದ ಆರೋಪದಿಂದ ಪಾರಾಗಲು ಪೊಲೀಸರಿಂದ ತಪ್ಪಿಸಿಕೊಂಡು ಓಡಿಹೋಗುತ್ತಿರುತ್ತಾರೆ. ಇದ್ದಕ್ಕಿದ್ದಂತೆ ಅವರು ಹೋಗುತ್ತಿದ್ದ ಕಾರು ಬ್ರೇಕ್ ಫೇಲ್ ಆಗಿ ಬಿಡುತ್ತದೆ. ನೋಡಿದರೆ ಎದುರಿಗೆ ದೊಡ್ಡದೊಂದು ಗೋಡೆ. ಇಲ್ಲಿ ನೋಡಿದರೆ ಕಾರಿನ ಬ್ರೇಕ್ ಹಿಡಿಯಲು ಬರುತ್ತಿಲ್ಲ.

ಇನ್ನು ಮುಗೀತು ನಮ್ಮ ಕಥೆ ಅಂತ ಸಾಯಲು ಸಿದ್ಧವಾಗಿ ಕಣ್ಮುಚ್ಚಿ ಕುಳಿತುಕೊಳ್ಳುತ್ತಾರೆ.

ಆದರೆ ಆ ಕಾರು ಗೋಡೆಗೆ ಢಿಕ್ಕಿಯಾಗುವ ಬದಲು ಗೋಡೆಯೊಳಗೆ ತೂರಿ ಹೋಗಿ ಬಿಡುತ್ತದೆ.‌… ಅದೂ ಎಲ್ಲಿಗೆ?? ಹತ್ತನೇ ಶತಮಾನಕ್ಕೆ !!! ಇಪ್ಪತ್ತೊಂದನೇ ಶತಮಾನದಿಂದ ಸೀದಾ ಹತ್ತನೇ ಶತಮಾನಕ್ಕೆ ಆ ಗೋಡೆ ಮೂಲಕ ಟೈಮ್ ಟ್ರಾವೆಲ್ ಮಾಡಿರುತ್ತಾರೆ ಆ ಮೂವರು.

ಆದರೆ ತಾವು ಭೂತಕಾಲಕ್ಕೆ ಬಂದಿದ್ದೀವಿ ಅನ್ನುವ ಅರಿವು ಅವರಿಗೆ ಇರುವುದಿಲ್ಲ. ಯಾವುದೋ ಸಿನೆಮಾ ಸೆಟ್ ಒಳಗೆ ಬಂದಿದ್ದೀವಿ ಅಂತಲೇ ಅಂದುಕೊಂಡಿರುತ್ತಾರೆ. ಇಪ್ಪತ್ತೊಂದನೇ ಶತಮಾನದ ಜನಾಂಗ ಹತ್ತನೇ ಶತಮಾನದ ಜನರ ನಡುವೆ ಭಿನ್ನಾಭಿಪ್ರಾಯಗಳು ಶುರುವಾಗುತ್ತದೆ. ಇದು ಅತಿರೇಕಕ್ಕೆ ಹೋಗಿ ಈ ಮೂವರನ್ನು ಬಂಧಿಸಿ ಸೆರೆಮನೆಗೆ ಹಾಕಲಾಗುತ್ತದೆ.

ಆಗವರಿ್ಗೆಗೆ ತಮ್ಮ ಸುತ್ತ ನಡೆಯುತ್ತಿದ್ದ ವಿಚಿತ್ರ ಘಟನೆಗಳು ಯಾಕೆ ಅಂತ ಅರ್ಥವಾಗುತ್ತದೆ.

‘ತಾವು ಹತ್ತನೇ ಶತಮಾನಕ್ಕೆ ಬಂದುಬಿಟ್ಟಿದ್ದೇವೆ, ಈಗ ತಾವು ವಾಪಸ್ ತಮ್ಮ ಸಮಯಕ್ಕೆ ಹಿಂತಿರುಗಲು ಯಾವ ದಾರಿಯೂ ಇಲ್ಲ’ ಅಂತ ಗೊತ್ತಾದಾಗ ಹತಾಶರಾಗುತ್ತಾರೆ. ಆದರೆ ಅದೃಷ್ಟ ಎಂಬಂತೆ ಆ ರಾಜ್ಯದ ಇಬ್ಬರು ರಾಜಕುಮಾರಿಯರು ಇವರಲ್ಲಿ ಇಬ್ಬರು ಯುವಕರನ್ನು ಪ್ರೀತಿಸತೊಡಗುತ್ತಾರೆ. ಆಗ ಇವರುಗಳಿಗೆ ‘ಲೈಫ್ ಈಸ್ ಬ್ಯೂಟಿಫುಲ್’ ಅನ್ನಿಸಲು ತೊಡಗುತ್ತದೆ.

ಮುಂದೆ ಆ ಹತ್ತನೇ ಶತಮಾನದ ಒಬ್ಬ ಮಾಟಗಾತಿಯ ನೆರವಿನಿಂದ ಮತ್ತೆ ತಮ್ಮ ಲೋಕಕ್ಕೆ ಬರುತ್ತಾರಾದರೂ, ಜೊತೆಯಲ್ಲಿ ಆ ರಾಜಕುಮಾರಿಯರನ್ನೂ ಕರೆದುಕೊಂಡು ಬಂದುಬಿಡುತ್ತಾರೆ. ಆ ರಾಜಕುವರಿಯರನ್ನು ಹುಡುಕಲು ಅವರ ತಂದೆ ಹತ್ತನೇ ಶತಮಾನದ ಪ್ರಸಿದ್ಧ ದೊರೆಯಾದ “ಬಬೂಶಾ” ಇಪ್ಪತ್ತೊಂದನೇ ಶತಮಾನಕ್ಕೆ ಬರುತ್ತಾನೆ. ಆಗ ಮತ್ತೊಮ್ಮೆ ನಾಗರೀಕತೆಗಳ ನಡುವೆ ಸಂಘರ್ಷ ನಡೆಯುತ್ತದೆ.

ಒಟ್ಟಾರೆ ಇಡೀ ಸಿನೆಮ ಹಾಸ್ಯಮಯವಾಗಿದೆ.

ಒಂದೊಂದು ಡೈಲಾಗ್ ಅನ್ನೂ ಕೇಳಿಯೇ ಸವಿಯಬೇಕು. ಹಾಸ್ಯ ಸನ್ನಿವೇಶಗಳು, ಅದಕ್ಕೆ ತಕ್ಕ ಸಂಭಾಷಣೆಗಳು, ಪರೇಶ್ ರಾವಲ್, ಗುಲ್ಶನ್ ಗ್ರೋವರ್, ಫರೀದಾ ಜಲಾಲ್, ಖಾದರ್ ಖಾನ್ ರಂತಹ ನಟರು ಸಿನೆಮಾವನ್ನು ಶ್ರೀಮಂತಗೊಳಿಸಿದ್ದಾರೆ. ಇರುವ ಏಕೈಕ ಹಾಡು ಬಹಳ ವಿಭಿನ್ನವಾಗಿದೆ.

ಸಮಯವಾದಾಗ ನೋಡಿಯೂ ಟ್ಯೂಬಿನಲ್ಲಿದೆ.

Sowmya Murthy K A

Sowmya Murthy K A

ಮೈಸೂರಿನಲ್ಲಿ ವಾಸ. ವಿದ್ಯಾರ್ಹತೆ: ಎಂ ಎ ಕನ್ನಡ. ಕನ್ನಡ ಸಾಹಿತ್ಯದಲ್ಲಿ ವಿಶೇಷ ಆಸಕ್ತಿ. ಬರಹಗಾರರು, ಅಂಕಣಕಾರರು, ಬ್ಲಾಗ್ಗಿಸ್ಟ್, ಪತ್ರಿಕೋದ್ಯಮ ವಿದ್ಯಾರ್ಥಿನಿಯೂ ಹೌದು. ಪಿಜಿ ಡಿಪ್ಲೋಮಾ ಮಾಡಿರುತ್ತೇನೆ. ಹತ್ತಾರು ಲೇಖನಗಳು ಈಗಾಗಲೇ ರಾಜ್ಯದ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಪ್ರಸ್ತುತ ಶ್ರೀರಂಗಪಟ್ಟಣ ತಾಲ್ಲೂಕು ಕೃಷ್ಣರಾಜಸಾಗರ ಗ್ರಾಮ ಪಂಚಾಯಿತಿಯಲ್ಲಿ ಲೆಕ್ಕ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದೇನೆ. ತ್ರಿವಳಿ ಹೆಣ್ಣು ಮಕ್ಕಳಿದ್ದಾರೆ.

Leave a Reply