ಮನುಷ್ಯನಾಗಿ ಹುಟ್ಟಿದ ಮೇಲೆ ಯಾರಿಗೇ ಆಗಲಿ ಒಂದಲ್ಲ ಒಂದು ಕೊರತೆ ಇರುವುದು ಸಾಮಾನ್ಯ ಆದರೆ ಕೊರತೆ ಇದೆ ಎಂದು ಕೊರಗದೆ ತಮ್ಮಲ್ಲಿರುವ ನಟನೆಯ ಚಾತುರ್ಯ ಚಿತ್ರರಂಗಕ್ಕೆ ತೋರಿಸಿ ಎಲ್ಲರ ಮನೆ ಮಾತಾದ ದಿ. ಟಿ ಎನ್ ಬಾಲಕೃಷ್ಣ ರವರ ಜನುಮ ದಿನದ ನೆನಪು ಇಂದು.
ತಮಗೆ ಕಿವಿ ಕೇಳದಿದ್ದರೂ ನಿದೇ೯ಶಕರ / ಸಂಭಾಷಣೆ ಹೇಳುವ ಚಲನವಲನಗಳನ್ನು ಸೂಕ್ಷ್ಮವಾಗಿ ಗಮನಿಸಿ ಪಾತ್ರಕ್ಕೆ ತಕ್ಕ ಹಾಗೆ ನಟಿಸಿದ್ದರು, ಇವರು ಅಂದ ತಕ್ಷಣ ಮೊದಲಿಗೆ ನೆನಪಾಗೋದು ಹಾಸ್ಯ ದೃಶ್ಯಗಳು ಅಣ್ಣಾವ್ರ ಜೊತೆ, ನರಸಿಂಹ ರಾಜ್ ಜೊತೆ, ಕೇವಲ ಹಾಸ್ಯ ಪಾತ್ರವಲ್ಲದೆ ಖಳನಟರಾಗಿ, ಪೋಷಕ ನಟರಾಗಿ ವಿವಿಧ ನಟನೆ ಮಾಡಿ ಸಮಥ೯ ನಟರು ಎಂದೆನಿಸಿಕೊಂಡಿದ್ದರು ತಮ್ಮ ಕನಸಿನ “ಅಭಿಮಾನ್ ಸ್ಟೂಡಿಯೋ ” ನಿಮಾ೯ಣ ಮಾಡಿ ಚಿತ್ರರಂಗದ ಕಾಯ೯ ಚಟುವಟಿಕೆ ಮತ್ತು ಕಲಾವಿದರ ಸಂಘ ಸ್ಥಾಪಿಸಲು ಕಾರಣರಾದವರು, ಬಂಗಾರದ ಮನುಷ್ಯ, ಸಾಕ್ಷಾತ್ಕಾರ, ದೇವತಾ ಮನುಷ್ಯ, ಒಡಹುಟ್ಟಿದವರು, ಶೃತಿ ಸೇರಿದಾಗ ಇನ್ನೂ ಹಲವಾರು.
ಇಂಥ ಮೇರು ಪ್ರತಿಭೆಯುಳ್ಳ ಕಲಾವಿದರಿಗೆ ಚಿತ್ರೋದ್ಯಮ.ಕಾಮ್ ತಂಡದಿಂದ ಜನುಮ ದಿನದ ಶುಭಾಶಯಗಳು
ಶ್ರೀನಿವಾಸ್. ಏ.
ಶ್ರೀನಿವಾಸ್ ಎ
ಶ್ರೀನಿವಾಸ್. ಎ - ಇವರು ಬೆಂಗಳೂರಿನ ಕುರುಬರಹಳ್ಳಿ ನಿವಾಸಿಯಾಗಿದ್ದು ಪ್ರಸ್ತುತ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗ ಮಾಡುತ್ತಿದ್ದಾರೆ, ಬಿ. ಕಾಂ ಪದವೀಧರರಾಗಿದ್ದು, ಕಂಪ್ಯೂಟರೈಸ್ಡ್ ಫೈನಾನ್ಶಿಯಲ್ ಕೋರ್ಸ್ ಜೊತೆಗೆ ಡಿ. ಟಿ. ಪಿ ತರಬೇತಿ ಪಡಿದಿದ್ದಾರೆ, ಹಲವಾರು ಸಂಸ್ಥೆಯಲ್ಲಿ ಕೆಲಸ ಮಾಡಿದ ಅನುಭವ ,ಹುಟ್ಟಿನಿಂದ ಅಣ್ಣಾವ್ರ ಅಭಿಮಾನಿ, ಚಲನಚಿತ್ರಗಳು, ಹಾಡುಗಳೆಂದರೆ ಬಹಳ ಇಷ್ಟವಾದವು, ಗಾಯಕರೂ ಕೂಡ, ರಾಜ್ಯ ಮಟ್ಟದ ಗಾಯನ ಸ್ಪಧೆ೯ಯಲ್ಲಿ ಭಾಗಿ , ಗಾಯನ ಕ್ಷೇತ್ರದಲ್ಲಿ ಹಲವು ಬಾರಿ ಪ್ರಯತ್ನ ಸಫಲವಾಗಿಲ್ಲ, ಹೆಚ್ಚಾಗಿ ರಾಜವಂಶದ ಮೇಲೆ ಅಭಿಮಾನ, ನಾನು ಹಾಗೂ ಹೀಗೂ ಲೇಖನ ಬರೆಯೋದಕ್ಕೆ ಅಪ್ಪಾಜಿ ಆಶೀವಾ೯ದ, ಚಿತ್ರರಂಗದ ಕೆಲವು ವಿಶಿಷ್ಟ ವಿಷಯಗಳ ಬಗ್ಗೆ ತಾನೇ ಅಲ್ಲಿ ಇಲ್ಲಿ ಸಂಶೋಧಿಸಿ, ಕೇಳಿ, ಓದಿ ತಿಳಿದ ವಿಷಯಗಳನ್ನೆಲ್ಲಾ ಒಂದೆಡೆ ಕೂಡಿಟ್ಟು, ಚಿತ್ರೋದ್ಯಮದ ಓದುಗರಿಗೆ ಹಂಚಿಕೊಳ್ಳಲಿದ್ದಾರೆ, ಚಿತ್ರ ಜಗತ್ತಿನ ಬಗ್ಗೆ ಹೆಚ್ಚಿನ ಒಲವು ಜೊತೆಗೆ ಕೈಲಾದ ಸಮಾಜ ಸೇವೆ, ಕನ್ನಡ ನಾಡಿನ ಸಂಘದಲ್ಲಿ ಸದಸ್ಯನಾಗಿ ಸೇವೆ, ಬಿಡುವಿನ ವೇಳೆಯಲ್ಲಿ ಸಮಯ ಸಿಕ್ಕಾಗ ಹಳೇ ಕಲಾವಿದರ ಭೇಟಿ ಮಾಡಿ ಅವರ ಜೀವನ ಕುರಿತು ಮಾಹಿತಿ ಕಲೆ ಹಾಕಿ ಓದುಗರಿಗೆ ತಿಳಿಸುವುದು.
ಚಿತ್ರ ವಿಮರ್ಶೆ ಮಾಡಿ ಜನರಿಗೆ ತಿಳಿಸುವುದು, ಸಿನಿಮಾದಲ್ಲಿ ಹೆಚ್ಚಿನ ಆಸಕ್ತಿ, ಬೆಳ್ಳಿತೆರೆಯ ಮೇಲೆ ಬರುವ ಹಂಬಲ, ಶ್ರೀನಿವಾಸ್ ರವರು ಚಿತ್ರೋದ್ಯಮ.ಕಾಂ ಬರಹಗಾರರ ಬಹು ಮುಖ್ಯ ಸದಸ್ಯ, ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯ ಲೇಖಕರಿಗೆ ಸ್ಪೂರ್ತಿ, ಶ್ರೀನಿವಾಸ್ ರವರ ಲೇಖನಗಳಿಗೆ ನಿಮ್ಮದೊಂದು ಮೆಚ್ಚುಗೆಯಿರಲಿ.
ಜೈ ಕರ್ನಾಟಕ ಜೈ ಕನ್ನಡಿಗ ಜೈ ರಾಜಣ್ಣ 🙏