ಭಾರತೀಯ ಚಿತ್ರರಂಗದಲ್ಲಿ ಹೆಸರುವಾಸಿಯಾದ ನಟರು, ನಿಮಾ೯ಪಕರು, ಟಿವಿ ನಿರೂಪಕರು, ಹವ್ಯಾಸಿ ಗಾಯಕರು, ಎಷ್ಟೋ ಜಾಹಿರಾತಿನಲ್ಲಿ ಭಾಗವಹಿಸಿದವರು ಮಾಜಿ ರಾಜಕಾರಣಿ ಬಾಲಿವುಡ್ ಕಾ ಅಸಲಿ ಆರಡಿ ಕಟೌಟ್, ಡಾ ರಾಜ್ ಕುಮಾರ್ ರವರ ಅಭಿಮಾನಿ
ಶ್ರೀ ಅಮಿತಾಬ್ ಬಚ್ಚನ್ ಸರ್ ರವರಿಗೆ ಜನುಮ ದಿನದ
ಶುಭಾಶಯಗಳು 🌹💐💜
“ಸ್ಯಾಂಡಲ್ವುಡ್ ಗೆ ದೊಡ್ಮನೆ ಫ್ಯಾಮಿಲಿ ಫೇಮಸ್
ಬಾಲಿವುಡ್ ಗೆ ಬಚ್ಚನ್ ಫ್ಯಾಮಿಲಿ ಫೇಮಸ್ “
ನಿಮ್ಮ ವಿಭಿನ್ನ ನಡೆಯ ಧಾಟಿ,ನೃತ್ಯ, ಆ ಕಂಚಿನ ಕಂಠದಿಂದ ವಿಶ್ವದಾದ್ಯಂತ ಅಭಿಮಾನಿಗಳನ್ನು ಸಂಪಾದಿಸಿದ್ದೀರಿ, ವಿಭಿನ್ನ ರೀತಿಯ ಪಾತ್ರಗಳಲ್ಲಿ ನಟಿಸಿ ನಿಮ್ಮ ನಟನೆ ಚತುರತೆಯನ್ನು ಪರಿಚಯಿಸಿದ್ದೀರಿ, ಕೌನ್ ಬನೇಗ ಕರೋಡ್ ಪತಿ ಆಟವನ್ನು ಕಿರುತೆರೆಯಲ್ಲಿ ನಿಮ್ಮಿಂದ ನೋಡೋ ಭಾಗ್ಯ ಮತ್ತು ಕನ್ನಡದಲ್ಲಿ ನಮ್ಮ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರು ನಡೆಸಿಕೊಡುವಾಗ ನಿಮ್ಮನ್ನು ಭೇಟಿ ಮಾಡಿ ಆಶೀವಾ೯ದ ಪಡೆದದ್ದು, ನೀವು ಅಣ್ಣಾವ್ರ ಮೇಲಿಟ್ಟ ಅಭಿಮಾನ ಅನನ್ಯ, ಎಷ್ಟೇ ದೊಡ್ಡ ನಟರಾದರೂ ಅಹಂ ಇಲ್ಲದೆ ಗೌರವ ನೀಡಿದಿರಿ, ಅಣ್ಣಾವ್ರನ್ನು ಭೇಟಿ ಮಾಡಿದಾಗ ನೀವು ಹೊಂದಿಕೊಳ್ಳುವ ರೀತಿ, ಭಕ್ತಪ್ರಹ್ಲಾದ ಚಿತ್ರೀಕರಣ ವೇಳೆ ಅಣ್ಣಾವ್ರನ್ನು ಭೇಟಿ ಮಾಡಿದ ಕ್ಷಣಗಳು. ನಿಮ್ಮ “ಕೂಲಿ ” ಚಿತ್ರದಲ್ಲಿ ಅಣ್ಣಾವ್ರ “ಜೇಡರ ಬಲೆ “ಚಿತ್ರ ಪೋಸ್ಟರ್ ಕಾಣಿಸಿರುವುದು ಅಭಿಮಾನದ ಸಂಕೇತ.
ಪ್ರೀತಿಯ ಶಿವಣ್ಣ ರವರಿಗೆ ಕಲ್ಯಾಣ್ ಜುವೆಲರ್ಸ್ ಜಾಹಿರಾತಿನಲ್ಲಿ ತಂದೆ ಮಗನ ವಾತ್ಸಲ್ಯ ನೋಡಿ ಖುಷಿ ಪಟ್ಟೆವು. ನೀವು ದೊಡ್ಮನೆ ಕುಟುಂಬದ ಮೇಲೆ ಇಟ್ಟಿರುವ ಅಭಿಮಾನಕ್ಕೆ 🌹
ಹಿಂದಿ ಚಿತ್ರರಂಗದಲ್ಲಿ ಬರೋ ಎಷ್ಟೋ ಹೊಸ ಕಲಾವಿದರಿಗೆ ನೀವು ಸ್ಪೂರ್ತಿ ಆದಿರಿ, ನಿಮ್ಮ ಆರೋಗ್ಯದ ಕಡೆ ಹೆಚ್ಚು ಗಮನ ನೀಡಿ ನಿಮ್ಮನ್ನು ಇನ್ನೂ ಹೆಚ್ಚು ಚಿತ್ರಗಳಲ್ಲಿ ನೋಡುವ ಆಸೆ ಇರುವ ಅಭಿಮಾನಿಯಲ್ಲಿ ನಾನೂ ಒಬ್ಬ.
ದೇವರು ನಿಮಗೆ ಆಯಸ್ಸು ಆರೋಗ್ಯ ಭಾಗ್ಯವನ್ನು ಕೊಟ್ಟು ಕಾಪಾಡಲಿ, ಇನ್ನೂ ನೂರು ಕಾಲ ಸುಖವಾಗಿ ಬಾಳಿ 🌹