ಪ್ರಜ್ವಲ್ ದೇವರಾಜ್ (Prajwal Devraj) ಅವರ ಹುಟ್ಟು ಹಬ್ಬದ ಪ್ರಯುಕ್ತ ನಾಳೆ ಅಂದರೆ ಜುಲೈ 4ನೇ ತಾರೀಕು ಬೆಂಗಳೂರಿನ ಬನಶಂಕರಿ 2 ನೆ ಹಂತದಲ್ಲಿರುವ ಅವರ ಮನೆಯ ಮುಂದೆ ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಸೇರುವ ನಿರೀಕ್ಷೆ ಇದೆ. ಸಿಂಪ್ಲಿಸಿಟಿಗೆ ಹೆಸರಾಗಿರುವ ಪ್ರಜ್ವಲ್ ದೇವರಾಜ್ (Prajwal Devraj) ಅವರು ಯಾವತ್ತೂ ಶೋಕಿ ಜೀವನದಿಂದ ಬಹಳ ದೂರ. ಹಾಗಾಗಿಯೇ ತನ್ನ ಹುಟ್ಟಿದ ಹಬ್ಬಕ್ಕಾಗಿ ಯಾವುದೇ ರೀತಿಯ ಹಾರ ತುರಾಯಿಗಳು, ಹೂವಿನ ಬೊಕೆ, ಕೇಕುಗಳನ್ನು ತರದಂತೆ ತಮ್ಮ ಅಭಿಮಾನಿಗಳಿಗೆ ಈಗಾಗಲೇ ಮೆಸೇಜ್ ನೀಡಿದ್ದಾರೆ. ಅಭಿಮಾನಿಗಳ ಹಾರೈಕೆಯೊಂದೇ ನನಗೆ ಬಹಳ ದೊಡ್ಡ ಗಿಫ್ಟ್ ಎಂದು ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ. ಸಹಸ್ರಾರು ಸಂಖ್ಯೆಯಲ್ಲಿ ಬರಬಹುದಾದ ಅಭಿಮಾನಿಗಳು ನಾಳೆ ಹಸಿದ ಹೊಟ್ಟೆಯಿಂದ ಹೋಗಬಾರದೆಂದು ಅನ್ನದಾನದ ವ್ಯವಸ್ಥೆ ಕೂಡ ಆಗಿರುತ್ತದೆ. ಅಭಿಮಾನಿಗಳ ಸಂಘ ಹಾಗು ಲಯನ್ಸ್ ಕ್ಲಬ್ ಸಹಯೋಗದೊಂದಿಗೆ ರಕ್ತದಾನದ ವ್ಯವಸ್ಥೆ ಕೂಡ ಮಾಡಲಾಗಿದೆ.
![](https://chitrodyama.com/wp-content/uploads/2023/07/gana.jpg)
ಇದರ ಜೊತೆಯಲ್ಲೇ ನಾಲ್ಕು ಹೊಸ ಸಿನಿಮಾಗಳನ್ನು ಘೋಷಣೆ ಮಾಡುವ ಸಾಧ್ಯತೆ ಇದೆ. ಅದರ ಜೊತೆಯಲ್ಲೇ ಪ್ಯಾನ್ ಇಂಡಿಯಾ ಸಿನಿಮ ಒಂದು ಕೂಡ ಘೋಷಣೆಯಾಗುವ ನಿರೀಕ್ಷೆ ಇದೆ. ಇದೇ ಸಂದರ್ಭದಲ್ಲಿ ಇಂದು ಸಂಜೆ ಅಂದರೆ ಮೂರನೇ ತಾರೀಕು ಸಂಜೆ 6ಕ್ಕೆ ಮಾಗಡಿ ರಸ್ತೆಯ ಜಿಟಿ ಮಾಲ್ ನಲ್ಲಿ ಪ್ರಜ್ವಲ್ ದೇವರಾಜ್ ಅಭಿನಯದ ಗಣ ಸಿನಿಮಾದ ಟೀಸರ್ ಕೂಡ ಬಿಡುಗಡೆಯಾಗುತ್ತಿದೆ. ಈಗಾಗಲೇ ಗಣ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಕೂಡ ರಿಲೀಸ್ ಆಗಿದ್ದು ಕನ್ನಡದ ಅನೇಕ ಸೆಲೆಬ್ರಿಟಿಗಳು ಈಗಾಗಲೇ ಆ ಫಸ್ಟ್ ಲುಕ್ ಪೋಸ್ಟರ್ ಅನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಆ ಸಿನಿಮಾದ ಕುರಿತಾದ ಹೆಚ್ಚಿನ ವಿವರಗಳನ್ನು ಇಂದು ಸಂಜೆ ನಿರೀಕ್ಷೆ ಮಾಡಬಹುದಾಗಿರುತ್ತದೆ. ಪ್ರಜ್ವಲ್ ದೇವರಾಜ್ ರವರ ಹುಟ್ಟುಹಬ್ಬದ ಜೊತೆ ಜೊತೆಗೆ ಈ ರೀತಿ ಹೊಸ ಸಿನಿಮಾಗಳು ಹೊಸ ಸಿನಿಮಾಗಳು ಘೋಷಣೆಯಾಗುತ್ತಿರುವುದಂತೂ ಅಭಿಮಾನಿಗಳ ಪಾಲಿಗೆ ಡಬಲ್ ಖುಷಿ ತಂದಿದೆ. ಪ್ರಜ್ವಲ್ ದೇವರಾಜ್ ರವರ ಎಲ್ಲಾ ಸಿನಿಮಾಗಳು ಸೂಪರ್ ಹಿಟ್ ಆಗಲಿ ಎಂದು ಹಾರೈಸುತ್ತಾ, ಅವರಿಗೆ ಚಿತ್ರೋದ್ಯಮ ಡಾಟ್ ಕಾಮ್ ತಂಡದಿಂದ ಹುಟ್ಟಿದ ಹಬ್ಬದ ಶುಭಾಶಯಗಳು