1975 ರಲ್ಲಿ, ಮಂಜ್ರಿ ಎಂಬ ಯುವತಿಯು ರಾನ್ ಆಫ್ ಕಚ್‌ನ ಮಧ್ಯದಲ್ಲಿ ಒಂದು ಸಣ್ಣ ಹಳ್ಳಿಗೆ ಮದುವೆಯಾಗಿ ಬರುತ್ತಾಳೆ.
ನೆನಪಿರಲಿ ಇದು
1975 ನೇ ಇಸವಿಯಲ್ಲಿ
ನಡೆಯುವ ಕಥೆ.
ಅದು ಒಂದು ಕರ್ಮಠ ಮೌಡ್ಯದ
ಹೆಣ್ಣು ಮಕ್ಕಳಿಗೆ ಯಾವುದೇ ಸ್ವತಂತ್ರ ಇಲ್ಲದ ವಿಪರೀತ ಕಟ್ಟು ಪಡಿನ
ಊರಿನ.
ಹೆಣ್ಣು ಮಕ್ಕಳು ಕೂಡ ಇದನ್ನು
ಒಪ್ಪಿ ಅನುಸರಿಸುವುದು ಇನ್ನೂ ಇಷ್ಟ
ಮತ್ತು ಮೌಡ್ಯಕ್ಕೆ ಎಲ್ಲರಂತೆ ಒಳಗಾಗುವುದು
ಅಚ್ಚರಿ ಏನಿಸುವುದಿಲ್ಲ
ಅಂತ ಮೌಡ್ಯತುಂಬಿದ ದೌರ್ಜನ್ಯ ದ ನೀರೆ ಇಲ್ಲದ ಮರುಳುಗಾಡಿಗೆ ಮದುವೆ ಅಗಿ ಬರುವವಳೆ ಮಂಜ್ರಿ !
ಎರಡು ಕೊಡ ನೀರಿಗೆ
ದಿನ ಹತ್ತರು ಕೀಲೋ ಮೀಟರ್ ಗಟ್ಟಲೆ ನೀರಿಗಾಗಿ ಹೋಗಬೇಕು
ಚಿಕ್ಕ ಕೆರೆಯಂತ ಕೆಸರು
ತುಂಬಿದ ಒಂದು ಹೊಂಡ
ಇವರಿಗೆ ನೀರಿನ ಅಸರೆ.
ಪುರುಷರು ಹಿರಿಯರು ಮಾಡಿದ ಕಟ್ಟು ಪಾಡು
ನಿಯಮಗಳಿಗೆ ಹೊಂದಿಕೊಂಡೆ ಜೀವನ ಸಾಗಿಸುವ ಇವರಿಗೆ ತಮಗೆ ಸ್ವತಂತ್ರ ವೇ ಇಲ್ಲ
ಎಂಬ ಚಿಕ್ಕ ಸುಳಿವು ಕೂಡ ಇಲ್ಲ
ಇದೇಲ್ಲ ಹಿರಿಯರು ಮತ್ತು ದೇವರ ನಿಯಮ
ಎಂದು ಕಠಿಣವಾಗಿ ನಂಬಿರುತ್ತಾರೆ.
ಇದಕ್ಕೆ ವಿರುದ್ಧವಾಗಿ ಏನದರು ಚಿಕ್ಕ ಅಪಾಚರ ನಡೆದರೆ
ಅ ವರ್ಷ ಮಳೆ
ಬರುವುದಿಲ್ಲ ಊರ ದೇವತೆ ಕೋಪಿಸಿ ಕೊಂಡರೆ ಎಂಬ ಭಯ .
ಹೂಂ ಬಿರು ಬಿಸಿಗೆ ಬೆಂದು ಹೋಗಿರುವ
ಎಷ್ಟೋ ವರ್ಷಗಳಿಂದ ಮಳೆಯ
ಮೂಖವನ್ನೆ ನೋಡದ ಇವರು
ಈ ವರ್ಷವದರು ಮಳೆಯಾಗಲಿ
ಎಂದು ಹಪಹಪಿಸುವ
ಮಳೆಗೆ ಕಾದಿರುವ ಶಬರಿ !
ಮಳೆ ಬರುತ್ತ ? ಸಿನಿಮಾ ನೋಡಿ.
ಇದರಲ್ಲಿ ಜಾತಿ ಪದ್ದತಿಯು ತಾರತಮ್ಯ ಇಲ್ಲ ಎಂದು ಹೇಳಲು ಸಾಧ್ಯವಿಲ್ಲ !
ನಿರ್ದೇಶಕ ಅದನ್ನು ಕೂಡ
ಮನದ ಕಣ್ಣಿಗೆ ಕಟ್ಟಿ ಕೊಟ್ಟಿದ್ದಾರೆ.
ಒಂದು ಚಿಕ್ಕ ನಗರದಿಂದ
ಬರುವವಳೆ ಮಂಜಿರಿ.
ಮಂಜಿರಿಯು ಮತ್ತು
ಹಳ್ಳಿಯ ಹೆಂಗಸರು
ಅಗೇ ನೀರಿಗಾಗಿ ಹೋದಾಗ
ಕಂಡುಕೊಂಡ ಸ್ವತಂತ್ರ ಮತ್ತು ಪರಿಹಾರ ವದರೂ
ಏನು
ಅಲ್ಲಿ ಅವರ ಪಾಲಿನ ಒಂದ್ದಿಷ್ಟು
ಸಂತೋಷ ಕಂಡುಕೊಂಡಿದ್ದು ಹೇಗೆ
ಎಂಬುದು ಚಿತ್ರದಲ್ಲಿ ನೋಡಿ.
ಇಲ್ಲೆ ಕಥೆ ಹೇಳಿದರೆ
ನಿಮಗೆ ಅಸಕ್ತಿ ಹೊರಟು ಹೋಗುತ್ತದೆ
ಕಡೆ ಪಕ್ಷ ಅ ಮರುಭೂಮಿ
ಲಂಬಾಣಿ ಜನಾಂಗದ
ಗರ್ಬ ನೃತ್ಯ ಮೈ ಜುಂ ಎನಿಸುವ ಸಂಗೀತ ನೋಡಲದರು ಒಮ್ಮೆ ನೋಡಿ.
ತುಂಬಾ ಚಂದದ ಸಿನಿಮಾ
ಸಿನಿಮಾ .Hellaro
ಭಾಷೆ…Gujarathi
ವಿವಾದ…
Controversy
ಚಿತ್ರದ ಸಂಭಾಷಣೆಯಲ್ಲಿ ಹರಿಜನ್ ಎಂಬ ಪದವನ್ನು ಬಳಸಿದ್ದಕ್ಕಾಗಿ ಚಿತ್ರದ ನಿರ್ಮಾಪಕ, ನಿರ್ದೇಶಕ ಮತ್ತು ಬರಹಗಾರರ ವಿರುದ್ಧ ದೌರ್ಜನ್ಯ ಕಾಯ್ದೆಯಡಿ ಪೊಲೀಸ್ ದೂರು ದಾಖಲಾಗಿದೆ .
Author: V Ravikumar