ಇಡೀ ಭಾರತೀಯ ಚಿತ್ರರಂಗವನ್ನೇ ತನ್ನತ್ತತಿರುಗಿ ನೋಡುವಂತೆ ಅಬ್ಬರಿಸಿತ್ತು K.G.F. ಸಿನಿಮಾ, ಈ ಅಬ್ಬರದ ಮುಂದುವರಿದ ಭಾಗ, ಅಂದ್ರೆ K. G. F-2! ಅದು ಇನ್ನೆಷ್ಟು ಬೃಹತ್ತಾಗಿರುವುದೋ.
ಧುಮ್ಮಿಕುವ ಜಲಪಾತದರ ಭಸವನ್ನ ಕಣ್ತುಂಬಿಸಿಕೊಳ್ಳುವ ಪ್ರೇಕ್ಷಕನ ಆಸೆ-ಕಾತುರಕ್ಕೆ ಕೊನೆಯೇ ಇಲ್ಲ. ಸಿನಿಮಾ ಬಾಳೆ ಎಲೆ ಊಟ ಆದ್ರೆ ಆ ಸಿನಿಮಾದ ಟೀಸರ್ ಒಂದು ಚಿಕ್ಕ ಮಿಠಾಯಿ ಅನ್ನಬಹುದು ..ಸಧ್ಯಕ್ಕೆ K.G. Fನ ತಂಡ ಸಿನಿಮಾದ 2ನೆ ಭಾಗದ ಟೀಸರ್ ಬಿಡುಗಡೆ ಮಾಡಿ ಚಿಕ್ಕ ಸಂತಸವನ್ನರವಾನಿಸ್ತಿದೆ. ಜನವರಿ 8ನೆ ತಾರಿಖುರಾಕಿಂಗ್ ಸ್ಟಾರ್ ಯಶ್ ಹುಟ್ಟುಹಬ್ಬದ ಅಂಗವಾಗಿ ಅಭಿಮಾನಿಗಳಿಗೆ ಮತ್ತು ರಾಕಿಭಾಯ್ ಇಬ್ಬರಿಗೂ ಸಣ್ಣ ಗಿಫ್ಟ್ನೀಡ್ತಾ ಇದೆ. 5 ಭಾಷೆಗಳಲ್ಲಿ ಏಕ ಕಾಲಕ್ಕೆ ಟೀಸರ್ಬಿಡುಗಡೆಯಾಗಲಿದೆ.
“ಚಿನ್ನದ ಹೊಲದ ಅಧಿಪತಿಯಾಗಲು ಅಧೀರನ ತಂತ್ರ ಮತ್ತು ಆರ್ಭಟ ಅದಕ್ಕೆ ರಾಕಿಯ ತಿರುಗಬಾಣಹೇಗಿರುತ್ತೆ ಅನ್ನುವುದರ ಸಣ್ಣ ಪರಿಚಯ. ಈ ವರ್ಷ ಹುಟ್ಟುಹಬ್ಬಕ್ಕೆ ಬಿಡುಗಡೆ ಆಗಬೇಕಿದ್ದಟೀಸರ್ 2021ಕ್ಕೆ ಬರಲಿದೆ… ಸಿನಿಮಾದ ಬಗ್ಗೆ ಮತ್ತೊಂದು ದೊಡ್ಡ ಖುಷಿಯ ಸುದ್ದಿ ಅತಿ ಶೀಘ್ರದಲ್ಲೇ ಹೊರಬರಲಿದೆ…