ನಾನ್ನೂರಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದರೂ ಅದೆಲ್ಲದರಲ್ಲೂ ಪ್ರಚಂಡ ಅಭಿನಯ ನೀಡಿದ್ದರೂ ಕೆಲವು ಸಿನಿಮಾ ನೋಡುವಾಗ ನನಗೇ ” ಇದು ಬೇಡವಿತ್ತು ಲಾಲೆಟ್ಟನಿಗೆ ” ಎಂದು ಅನಿಸಿತ್ತು.ಅವರು ಕನ್ನಡದ ‘ ಲವ್ ‘ ಸಿನಿಮಾದಲ್ಲಿ ಅಭಿನಯಿಸಲು ಬಂದಾಗ ಯಾವುದೋ ಪತ್ರಿಕೆಯ ಸಿನಿಪುರವಣಿ ಪತ್ರಕರ್ತರೆಲ್ಲ ಲಾಲ್ ಜೊತೆ ಫೋಟೋ ತೆಗೆಸಿಕೊಳ್ಳಲು ನಿಂತದ್ದು ವಿಶೇಷವಾಗಿತ್ತು ಎಂದು ಬರೆದಿತ್ತು. ಬರೆದಿದ್ದ ಜನಕ್ಕೆ ಕನ್ನಡ ಬಿಟ್ಟು ಬೇರೆ ಭಾಷೆಯ ,ಭಾರತೀಯ ಸಿನಿಮಾದ ಬಗ್ಗೆ ಎಷ್ಟು ಗೊತ್ತಿರಬಹುದು ಎಂದು ತೋರಿಸಿದ ಸಾಲುಗಳು ಅವು.
ಈ ‘ಲವ್’ ಸಿನಿಮಾದ ಮೋಹನ್‌ಲಾಲ್ ಅಭಿನಯ ಚೌಕಟ್ಟಿನಲ್ಲಿ ಕೂರದ ಚಿತ್ರ.. ಅದೇ ತರಹ ‘ರಾಮಗೋಪಾಲವರ್ಮಾ ಕೀ ಆಗ್’ , ‘ ಹರಿಹರನ್ ಪಿಳ್ಳೆ ಹ್ಯಾಪಿಯಾಣ್ ‘ ಇತ್ಯಾದಿ ಸಿನಿಮಾಗಳು. ಇದೆಲ್ಲ ನಿರ್ದೇಶಕರ ಸಮಸ್ಯೆ ಹೊರತು ಲಾಲೆಟ್ಟನ್ ಅಭಿನಯದ್ದಲ್ಲ.ಬೇಕಾದರೆ ‘ಇರುವರ್ ‘ ನೋಡಿ. ತನಗೆ ಪರಭಾಷೆಯಾದ ತಮಿಳಲ್ಲಿ ಮಣಿರತ್ನಂ ನಿರ್ದೇಶನದಲ್ಲಿ ಹೇಗೆ ನಟಿಸಿದ್ದಾರೆ ಅಂತ.
ಹಾಗೇ ಅನಿವಾರ್ಯವಾಗಿ ‘ಅಮ್ಮ’ ದ ಮುಖ್ಯಸ್ಥರಾಗಿ, ಕೆಲವು ಸಿನಿಮಾಗಳಲ್ಲಿ ಹಾಡಲು ಹೊರಟಾಗ ಕೂಡ ‘ಬ್ಯಾಡ ಲಾಲೆಟ್ಟ’ ಅಂತ ಹೇಳುವ ಅಂತ.ಎಷ್ಟಾದರೂ ನಮ್ಮ ಲಾಲೆಟ್ಟ.ಹಾಗಾಗಿ ಇಷ್ಟು ಸಲಿಗೆ.ಆ ಸಂಪೂರ್ಣ ಸಂಸ್ಕೃತ ನಾಟಕ ‘ ಕರ್ಣಭಾರಂ’ ಅನ್ನು ಈ ಜನ ರಂಗಭೂಮಿಯಲ್ಲಿ ಕರ್ಣನಾಗಿ ತಂದಾಗ ಹೆಮ್ಮೆ!
ಇಂತಿಪ್ಪ ಮೋಹನ್‌ಲಾಲ್‌ಗೆ ಈಗ ಅರವತ್ತು.
ಈಗಲೂ ವರ್ಷಕ್ಕೆ ನಾಲ್ಕಾರು ಸಿನಿಮಾ, ದಟ್ಟ ದರಿದ್ರ ಸ್ಕ್ರಿಪ್ಟ್ ಅನ್ನು ತನ್ನ ಅಭಿನಯದಿಂದ ಹೊಳೆಯಿಸುವ ಸಾಮರ್ಥ್ಯ, ಇಡೀ ಸಿನಿಮಾವನ್ನು ತನ್ನ ಭುಜದ ಮೇಲೆ ಹೊತ್ತುಕೊಂಡು ಸಾಗುವ ತಾಕತ್ತು, ಮೊದಲಿನ ಬೆಂಕಿಯ ರೋಷಾವೇಶ ಈಗದ ಎಲಿಗೆನ್ಸ್, ಅಭಿನಯಿಸುವಾಗ ಆ ಕೈಗಳ ಬಳಕೆ, ಆ ಕಳ್ಳ ನಗು..
ಒಳ್ಳೆಯ ಸಿನಿಮಾಗಳ ಕೊಡಲಿ; ನೆನಪಿಡುವ ಇನ್ನೂ
ಲೇಖಕರು:
ಪ್ರಶಾಂತ ಭಟ್