Ramesh Aravind ಕೈಲಿ ಲಾಂಗ್ ; ಜೋಗಿ ಪ್ರೇಮ್ ಕೆ ಡಿ ಸಿನಿಮಾದ ‘ಧರ್ಮ’ ಲುಕ್ ರಿವೀಲ್

ಪ್ರೇಮ್ ನಿರ್ದೇಶಿಸುತ್ತಿರುವ ಕೆ.ಡಿ ಸಿನಿಮಾದಲ್ಲಿ ನಟ ರಮೇಶ್ ಅರವಿಂದ್ ಅಭಿನಯಿಸುತ್ತಾರೆ ಎಂಬ ಸುದ್ದಿ ಕಳೆದ ಕೆಲವು ದಿನಗಳಿಂದ ಹರಿದಾಡುತ್ತಲೇ ಇತ್ತು, ಧ್ರುವ ಸರ್ಜಾ ನಾಯಕನಾಗಿ ನಟಿಸುತ್ತಿರುವ ಚಿತ್ರದಲ್ಲಿ ರಮೇಶ್ ಧರ್ಮ ಪಾತ್ರದಲ್ಲಿ ನಟಿಸುತ್ತಿದ್ದಾರೆ.

ಕೆ ಡಿ ಸಿನಿಮಾದಲ್ಲಿನ ಅವರ ಪಾತ್ರದ ಲುಕ್ ರಿವೀಲ್ ಆಗಿದೆ. ಡಿಫರೆಂಟ್ ಆಗಿ ರಮೇಶ್ ಅರವಿಂದ್ ಕಾಣಿಸಿಕೊಳ್ಳುತ್ತಿದ್ದಾರೆ.‌ ರಮೇಶ್‌ ನಟಿಸಿರುವ ಧರ್ಮ ಪಾತ್ರದ ಲುಕ್‌ ಈಗ ರಿವೀಲ್‌ ಆಗಿದೆ. ರಮೇಶ್ ಅರವಿಂದ್‌ಗೆ, ವೈವಿಧ್ಯಮಯ ಪಾತ್ರಗಳಲ್ಲಿ ಕೆಲಸ ಮಾಡುವುದು ಎಂದರೆ ಬಲು ಅಚ್ಚು ಮೆಚ್ಚು, ಆದರೆ ಅವರು ಮಲ್ಟಿ-ಸ್ಟಾರ್‌ನ ಭಾಗವಾಗಿ ಕೆಲಸ ಮಾಡಿ ಸ್ವಲ್ಪ ಸಮಯವಾಗಿದೆ. ಬಹು ತಾರಾಗಣದಲ್ಲಿ ಪಾತ್ರಗಳನ್ನು ಒಪ್ಪಿಕೊಳ್ಳುವುದು ಸ್ವಲ್ಪ ಟ್ರಿಕಿ, ಆದರೆ ನುರಿತ ಕಲಾವಿದರೊಂದಿಗೆ ನಟಿಸುವುದು ಒಂದು ಹೊಸ ಅನುಭವ ನೀಡುತ್ತದೆ ಎಂದಿದ್ದಾರೆ. ಪ್ರೇಮ್ ಅವರ ಚಿತ್ರ ಕೆಡಿ, ರವಿಚಂದ್ರನ್, ಸಂಜಯ್ ದತ್ ಮತ್ತು ಶಿಲ್ಪಾ ಶೆಟ್ಟಿ ಮುಂತಾದವರು ಅಭಿನಯಿಸಿದ್ದಾರೆ.

ನಿರ್ದೇಶಕ ಪ್ರೇಮ್ ಪಾತ್ರದ ಬಗ್ಗೆ ಹೇಳಿದಾಗ ನನಗೆ ಕುತೂಹಲ ಹುಟ್ಟಿತು. ನಾನು ಕೆಲವೇ ದಿನಗಳ ಚಿತ್ರೀಕರಣವನ್ನು ಪೂರ್ಣಗೊಳಿಸಿದ್ದೇನೆ , ಪ್ರೇಮ್ಮ ಎಮೋಶನಲ್ ನಿರ್ದೇಶಕರಾಗಿದ್ದಾರೆ. ಕೆವಿಎನ್ ಉತ್ತಮ ಪ್ರೊಡಕ್ಷನ್ ಹೌಸ್ ಆಗಿದೆ , ಈ ರೀತಿಯ ದೊಡ್ಡ-ಬಜೆಟ್ ಸಿನಿಮಾ ಭಾಗವಾಗಿರುವುದು ಖುಷಿಯ ಸಂಗತಿಯಾಗಿದೆ. ಇದಲ್ಲದೆ, ಎಲ್ಲಾ ಪಾತ್ರಗಳು ಆನ್-ಸ್ಕ್ರೀನ್ ಗೆ ಚೆನ್ನಾಗಿ ಹೊಂದಿಕೊಳ್ಳುತ್ತದೆ.

ಧರ್ಮ ಪಾತ್ರದ ತನ್ನ ರೆಟ್ರೊ ಲುಕ್‌ ಬಗ್ಗೆ ರಮೇಶ್ ಮಾತನಾಡಿದ್ದಾರೆ, ಚಿತ್ರವು 1970 ರ ದಶಕದ ಕತೆ ಹೊಂದಿದೆ. ನಟ ರಮೇಶ್ ಅರವಿಂದ್ ಸಖತ್ ಮಾಸ್ ಆಗಿ ಕಾಣಿಸಿಕೊಂಡಿದ್ದಾರೆ. ಕೈಯಲ್ಲಿ ಲಾಂಗ್ ಹಿಡಿದು ಎಂಟ್ರಿ ಕೊಟ್ಟಿದ್ದಾರೆ. ಈ ಹಿಂದೆ ಎಂದೂ ಅವರು ಲಾಂಗ್ ಹಿಡಿದಿಲ್ಲ. ಆದರೆ ಜೋಗಿ ಪ್ರೇಮ್, ಮೊದಲ ಬಾರಿಗೆ ರಮೇಶ್ ಕೈಯಲ್ಲಿ ಲಾಂಗ್ ಹಿಡಿಸಿದ್ದಾರೆ. ‘ಕೆ.ವಿ.ಎನ್‌. ಪ್ರೊಡಕ್ಷನ್ಸ್ ಮತ್ತು ಪ್ರೇಮ್ ಅವರ ‘K.D’ ಚಿತ್ರದಲ್ಲಿ ‘ಧರ್ಮ’ ಪಾತ್ರದಲ್ಲಿ, ಅನೇಕ ಅದ್ಭುತ ಪ್ರತಿಭೆಗಳೊಂದಿಗೆ ಬೆಳ್ಳಿತೆರೆಯನ್ನು ಹಂಚಿಕೊಳ್ಳಲು ಉತ್ಸುಕನಾಗಿದ್ದೇನೆ’ ಎಂದಿದ್ದಾರೆ

ನನ್ನ ಕಾಲೇಜು ದಿನಗಳಲ್ಲಿ ನನಗೆ ಅಂತಹದ್ದೇ ಒಂದು ಲುಕ್ ಇತ್ತು. ಅದು ರಜನಿಕಾಂತ್ ಮತ್ತು ಕಮಲ್ ಹಾಸನ್ ಅವರು ಆ ದಿನಗಳ ಸಿನಿಮಾಗಳಲ್ಲಿ ಉದ್ದನೆಯ ಕೂದಲು ಮತ್ತು ಬೆಲ್-ಬಾಟಮ್ ಪ್ಯಾಂಟ್ ಹಾಕುತ್ತಿದ್ದರು, ಆ ಯುಗ ಮರುಕಳಿಸುತ್ತಿರುವುದು ನನಗೆ ಸಂತೋಷವಾಗಿದೆ ಎಂದು ರಮೇಶ್ ಹೇಳಿದ್ದಾರೆ.

Chitrodyama Updates

Chitrodyama Updates

Leave a Reply