Bagalakote : ಚಲನಚಿತ್ರ, ಟೆಲಿಫಿಲ್ಮ್, ಕಿರುಚಿತ್ರಗಳ ಹಾಡು ಹಾಗೂ ಟ್ರೈಲರ್ ಬಿಡುಗಡೆಗೆ ಅವಕಾಶ
ಬಾಗಲಕೋಟೆ ( ಸಿದ್ದನಕೊಳ್ಳ) : (Dec_22_2023)
ಸಿದ್ದನಕೊಳ್ಳ: ಬಾಗಲಕೋಟೆ ಜಿಲ್ಲೆಯ ಸಿದ್ದನಕೊಳ್ಳದ ಕಲಾಪೋಷಕರ ಮಠದ ಶ್ರೀ ಸಿದ್ದಪ್ಪಜ್ಜನ ಜಾತ್ರಾ ಮಹೋತ್ಸವವು ಬರುವ ಜನೇವರಿ 14,15,16 ರಂದು ಜರುಗಲಿದ್ದು ಈ ಸಂದರ್ಭದಲ್ಲಿ ಪ್ರತಿ ವರ್ಷದಂತೆ ಸಿದ್ದಶ್ರೀ ಚಲನಚಿತ್ರೋತ್ಸವ ಧರ್ಮಾಧಿಕಾರಿಗಳಾದ ಶ್ರೀ ಡಾ.ಶಿವಕುಮಾರ ಸ್ವಾಮೀಜಿಯವರ ನೇತೃತ್ವ ನಡೆಯಲಿದೆ.ಸಹಸ್ರಾರು ಸದ್ಭಕ್ತರು ಸೇರುವ ಈ ಸಂದರ್ಭದಲ್ಲಿ ತಮ್ಮ ಚಲನಚಿತ್ರ, ಟೆಲಿಫಿಲ್ಮ್, ಕಿರುಚಿತ್ರಗಳ ಹಾಡು ಹಾಗೂ ಟ್ರೈಲರ್ ಬಿಡುಗಡೆ ಮಾಡಲು ಇಚ್ಚಿಸುವವರು ದಿನಾಂಕ 05.01.2024 ರೊಳಗೆ ಈ ಕೆಳಗೆ ಕಾಣಿಸಿದ ಯಾವುದಾದರೊಂದು ಫೋನ್ ನಂಬರ್ ಗೆ ಫೋನ್ ಮಾಡಿ ಹೆಸರು ನೋಂದಾಯಿಸಲು ಕೋರಿದೆ. (ವಿ ಸೂ: ಹಾಡು ಹಾಗೂ ಟ್ರೈಲರ್ ಬಿಡುಗಡೆಗೆ ಯಾವುದೇ ಪ್ರವೇಶ ಶುಲ್ಕವಿರುವದಿಲ್ಲ.ವೇದಿಕೆ ನಮ್ಮದು, ಪ್ರಚಾರ ನಿಮ್ಮ ಚಿತ್ರದ್ದು , ನಿಮ್ಮದೇ ಪೆನ್ ಡ್ರೈವ್, ಅಥವಾ ಎಕ್ಸಟರ್ನಲ್ ಹಾರ್ಡಡಿಸ್ಕ್ನಲ್ಲಿ ತರತಕ್ಕದ್ದು )ಹೆಸರು ನೋಂದಾಯಿಸಲು ಮತ್ತು ಹೆಚ್ಚಿನ ಮಾಹಿತಿಗಾಗಿ ಚಲನಚಿತ್ರೋತ್ಸವ ವಿಭಾಗದ-ಡಾ. ಪ್ರಭು ಗಂಜಿಹಾಳ- ಮೊ.9448775346,ಡಾ. ವೀರೇಶ್ ಹಂಡಿಗಿ-ಮೊ. 9060933596ಶ್ರೀಪಾದ್ ಕುಲಕರ್ಣಿ- 8788319343ವೀರೇಶ್ ಪುರವಂತರ-ಮೊ.7026062364,ಆರ್. ಶೈನ್.ಮೊ-7259497383,ಅರವಿಂದ್ ಮುಳಗುಂದಮೊ-7204543977ಸಿದ್ದುಕೃಷ್ಣ ಢೇಕಣೆ ಮೊ-9108661109,ಸಂಗನಗೌಡ ಕುರುಡಗಿ-8861811128ಈ ನಂಬರಗಳಲ್ಲಿ ನೊಂದಾಯಿಸಬೇಕು.-ವರದಿ:ಡಾ.ಪ್ರಭು ಗಂಜಿಹಾಳಮೊ-9448775346