ಚಿತ್ರವಿಮರ್ಶೆ~~~~~~~~~~~~~~~~~
#The_Wandering_Earth 2019- #NETFLIX
ದಿ ವಾಂಡರಿಂಗ್ ಅರ್ಥ್ 2019
ಒಂದು ಕಾಲವಿತ್ತು ಸಿನೆಮಾಗಳಲ್ಲಿ. ಚೈನೀಸ್ ಫಿಲಂ ಅಂದರೆ ಕರಾಟೆ ಕುಂಗ್ ಫು – ಬರೀ ಡಿಶುಂ ಡಿಶುಮ್, ಬ್ರೂಸ್ ಲೀ ತರಹದ್ದು ಎಂದು…ಅದು ಆ ಕಾಲ.2019 ರಲ್ಲಿ ಚೀನೀಯರು ಜಗತ್ತೇ ಎದ್ದು ಗಮನಿಸುವಂತಾ ವೈಜ್ಞಾನಿಕ ಚಿತ್ರ ಮಾಡಿದ್ದಾರೆ.ಹಳೆಯದೆಲ್ಲವನ್ನೂ ಮರೆಸಿ ಹಾಲಿವುಡ್ ನಾಚಿಕೊಳ್ಳಬೇಕು, ಅಂತಹಾ ಸ್ಪೇಸ್ ಏಜ್ ಚಿತ್ರವನ್ನು ಕೊಟ್ಟಿದ್ದಾರೆ ಚೀನೀಯರು ಇಲ್ಲಿಜಗತ್ತಿನಾದ್ಯಂತ ಇದು ಈಗ ಪ್ರಸಿದ್ಧವೂ ಆಗಿದೆ.ಹೇಗಿದೆ?ಬಹಳ ಬಹಳ ಚೆನ್ನಾಗಿದೆ.ಈ ಕಥೆಯ ಸಂಧರ್ಭವೇ ಹೀಗೆ- ಮುಂದೊಮ್ಮೆ ಸೂರ್ಯ ನಶಿಸಿ ಹೋಗುತ್ತ ಭೂಮಿಯಲ್ಲಿ ಹಿಮಯುಗ ಶುರುವಾಗಿ ಜೀವವೆಲ್ಲ ನಶಿಸಿ ಹೋದರೆ ಎಂಬ ದುರಂತ ಸ್ಥಿತಿಯಲ್ಲಿ ಚಿತ್ರ ಆರಂಭವಾಗುತ್ತದೆ.
ಭೂಮಿಯಲ್ಲಿ ಎಲ್ಲಾ ದೇಶಗಳೂ ಒಗ್ಗಟ್ಟಿನಿಂದ ಯುನೈಟೆಡ್ ಅರ್ಥ್ ಗವರ್ನ್ ಮೆಂಟ್ ಎಂದು ಒಕ್ಕೂಟ ಸ್ಥಾಪಿಸಿ ಭೂಮಿಯ ಪಥವನ್ನೆ ಬದಲಿಸಿ ಅದನ್ನು ತಳ್ಳುತ್ತಾ ಈ ಸೌರಮಂಡಲದಿಂದ ಆಚೆಗೆ ಸಹಸ್ರಾರು ವರ್ಷ ಯಾನ ಹೋಗಿಬಿಡುವಂತಾ ವಲಸೆ ಕಾರ್ಯಕ್ರಮ ಮಾಡುತ್ತಾರೆ.ಕೆಲವರು ಮಾತ್ರ ಒಂದು ನೌಕೆಯಲ್ಲಲ್ಲ!!. ಇಡೀ ಭೂಮಿಯನ್ನೇ ಪಥ ಬದಲಿಸಿ ಕರೆದೊಯ್ಯುವುದು!ಇಂತಹಾ ಅಭೂತಪೂರ್ವ ಸಾಹಸಕ್ಕೆ ಯಾರು ಕೇಳರಿಯದ ಅರ್ಥ್ ಎಂಜಿನ್ಸ್ ತಯಾರು ಮಾಡಿ ಅದನ್ನು ಕಕ್ಷೆಯಿಂದ ದೂರದ ಆಲ್ಫಾ ಸೆಂಟುರಿ ಸೌರಮಂಡಲಕ್ಕೆ ಕರೆದೊಯ್ಯುವ ಯೋಜನೆಯಲ್ಲಿ ಯಶಸ್ವಿಯಾಗಿದ್ದಾರೆ.ಆಗ ಸೂರ್ಯನಿಂದ ದೂರ ದೂರಕ್ಕೆ ಭೂಮಿಯನ್ನು ಹೊತ್ತೊಯ್ಯುವಾಗ ಅತ್ಯಂತ ಶಕ್ತಿಶಾಲಿ ಬೃಹದಾಕಾರದ ಬೃಹಸ್ಪತಿ ಅಥವಾ ಗುರು ಗ್ರಹದ ವಲಯಕ್ಕೆ ಅಚಾನಕ್ಕಾಗಿ ಸರಿದುಬಿಟ್ಟಿದ್ದಾರೆ.
ಅದರ ಶಕ್ತಿಶಾಲಿ ಗ್ರಾವಿಟಿ- ಗುರುತ್ವ ಶಕ್ತಿ ಭೂಮಿಯಲ್ಲಿ ಹವಾಮಾನ ವೈಪರೀತ್ಯ ಮಾಡಿ ಕೊನೆಗೆ ಭೂಮಿ ಅದಕ್ಕೆ ಅಪ್ಪಳಿಸಿ ನಾಶವಾಗಬಲ್ಲ ಭಯಂಕರ ಪರಿಸ್ಥಿತಿ ತಂದೊಡ್ದಿದೆ.ನುಂಗಲು ಎರಗುತ್ತಿರುವ ಗುರು ಗ್ರಹದಿಂದ ತಪ್ಪಿಸಿಕೊಂಡು ದೂರದ ಆ ಹೊಸ ಗ್ರಹಮಂಡಲಕ್ಕೆ ಭೂಮಿಯನ್ನು ಕೊಂಡೊಯ್ದು ತಲುಪುವುದೆಂತು? ಅದೇ ಈ ಚಿತ್ರದ ಉಳಿದ ಭಾಗ!.ಅದರಲ್ಲಿ ಒಂದು ಸಾಮಾಜಿಕ ಕಥೆ, ಪಾತ್ರಧಾರಿಗಳ ಕುಟುಂಬದ ಭಾವನಾತ್ಮಕ ಜೀವನದ ಹೊಯ್ದಾಟ, ದ್ವಂದ್ವ ಮತ್ತು ಸವಾಲುಗಳು ಎಲ್ಲಾ ಪೂರಕವಾಗಿ ಬರುತ್ತವೆ…ಅಪ್ರತಿಮ ಸ್ಪೆಶಲ್ ಎಫೆಕ್ಟ್ಸ್ ಭರಪೂರವಾಗಿ ಉಪಯೋಗಿಸಿದ್ದಾರೆ.ಕನಿಷ್ಟ ಪಕ್ಷ ಎರಡು ಸಲವಾದರೂ ನೋಡಲೇಬೇಕು ಅರ್ಥಮಾಡಿಕೊಳ್ಳಲು ಮತ್ತು ವೈಭವದ ದೃಶ್ಯಾವಳಿಯನು ಸವಿಯಲು.ನೆಟ್ ಫ್ಗಿಕ್ಸ್ ನಲ್ಲಿ ಸ್ಟ್ರೀಮಿಂಗ್ ಇದೆ. ಅದರಲ್ಲಿ ವೀಕ್ಷಿಸಿ ನೋಡಿಈಗಿನ ತಂತ್ರಜ್ಞಾನದಲ್ಲಿ ಇದಕ್ಕಿಂತಾ ಹೆಚ್ಚಿನದು ಇನ್ನೇನು ಬಯಸುವುದೋ ಎನ್ನುವಷ್ಟು ಇಷ್ಟವಾಗುತ್ತದೆ ಚಿತ್ರ!ತಾರಾಗಣ ನಮಗೆ ಹೊಸದು ಆದರೆ ಚೆನ್ನಾಗಿ ಅಭಿನಯಿಸಿದ್ದಾರೆನಿರ್ದೇಶನ ಫ಼್ರಾಂಟ್ ಗ್ವೋ ಎಂಬವರದು
ನನ್ನ ರೇಟಿಂಗ್ 4/5