ಕೋಪ ಒಳ್ಳೆಯದೇ ಅಥವಾ ಕೆಟ್ಟದೇ? ಪ್ರತೀಕಾರವೂ ಒಳ್ಳೆಯ ಪರಿಣಾಮ ಕೊಡಬಹುದೇ?…
6 ವಿಭಿನ್ನಸಣ್ಣಕತೆಗಳಪ್ರಯೋಗ ” Wild Tales(2014)”.
ನಮ್ಮಲ್ಲೂ ಈ ತರಹಾ ಪ್ರಯೋಗ ನಡೆದಿದೆ.. ಉದಾ: ಕಥಾಸಂಗಮ. ಕಥಾ ಸಂಗಮ ಕನ್ನಡದಲ್ಲಿ ಹೊಸ ಪ್ರಯೋಗ ಎಂದು ಬೀಗ ಬಹುದೇ ಹೊರತು.. ಪ್ರತಿಕತೆಗಳ ನಡುವೆ ಯಾವುದೇ ಕೊಂಡಿ ಇರದೆ ಸೊರಗುತ್ತದೆ.. ಹಾಗೆಯೇ ನೋಡ ಬಹುದೇ ವಿನಹಾ ತಾರ್ಕಿಕ ಅಂತ್ಯ ಇಲ್ಲದೆ ನಿರಾಶೆಯಾಗುತ್ತದೆ…
ಆದರೆ Wild Tales ಹಾಗಲ್ಲ… ಪ್ರತೀ ಕತೆಯ ಅಂತ್ಯ ಬೆಚ್ಚಿ ಬೀಳಿಸುತ್ತಲ್ಲದೆ… ಇನ್ನೊಮ್ಮೆ.. ಮಗದೊಮ್ಮೆ ನೋಡಲು ಪ್ರೇರೇಪಿಸುತ್ತದೆ. ಚಕ್ರ ತೀರ್ಥರ ಯಾವುದೋ ಅಂಕಣದಲ್ಲಿ ಪ್ರಸ್ತಾಪಿತವಾದ ಈ ಚಿತ್ರ ನೋಡಿದ ಮೇಲೆ.. ನಾನು ರಿಕಾರ್ಡೋಡೆರಿನ್( ಒಂದು ಕತೆಯ ನಾಯಕ)ರ ಎಷ್ಟು ಚಿತ್ರ ನೋಡಿದೆನೋ ನೆನಪಿಲ್ಲ.. Road Rage ನಮೊದಲ ಕತೆಯಂತೂ…ಕೋಪ ಒಳ್ಳೆಯದಲ್ಲ ಎಂದು ಅನಿಸಿದರೂ…little bomber ಸಾತ್ತ್ವಿಕ ಕೋಪ ಒಳ್ಳೆಯದೇ ಅಂತ ನಿರೂಪಿಸುತ್ತದೆ.
ಕೊನೆಯ ಕತೆ ನೀವೇ ನೋಡಬೇಕು. ಇದರ ಅಂತ್ಯ ಖುಷಿಕೊಡುತ್ತದೆ. TELEGRAM APP ನಲ್ಲಿದೆ. Netflix ನಲ್ಲಿತ್ತು..ಈಗಇಲ್ಲ. Telegram ನಲ್ಲಿ Spanish Movies ಅಂತ ಒಂದು group ಇದೆ..sub’s ಅಲ್ಲೇ ಇರುತ್ತದೆ..ಇಲ್ಲದಿದ್ದರೆ MX player ಮುಖಾಂತರ ನೋಡಿದರೆ online sub’s download ಮಾಡಬಹುದು. .. Ricardo Darinರ ಒಂದು ಕ್ಲಾಸ್ಚಿತ್ರ ಇದೆ… The secret in their eyes… ಪುರುಸೊತ್ತಾದಾಗ ಒಮ್ಮೆ ನೋಡಿ ಬನ್ನಿ..