ವಿಶ್ವದಾದ್ಯಂತ ಸಿನಿ ಪ್ರಿಯರು ಕಾತುರದಿಂದ ಕಾಯುತ್ತಿರುವ KGF-2 ಸಿನಿಮಾದ ಚಿತ್ರೀಕರಣ ಮುಗಿದಿದ್ದು ಪೋಸ್ಟ್ ಪ್ರೊಡಕ್ಷನ್ ಕೆಲಸ ಕೆಲಸ ಸಾಗುತ್ತಿದೆ ಅದರ ಜೊತೆಗೆ ಸಿನಿಮಾದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ ಕಲಾವಿದರು ಅವರ ಪಾತ್ರಕ್ಕೆ ಡಬ್ಬಿಂಗ್ ಮಾಡುವಲ್ಲಿ ನಿರತರಾಗಿದ್ದಾರೆ. ಸಿನಿಮಾದಲ್ಲಿ ಅಧೀರನ ಪಾತ್ರ ನಿರ್ವಹಿಸ್ತಿರೋ ಸಂಜಯ ದತ್ತ್ ಇಂದಷ್ಟೇ ಹಿಂದಿಯಲ್ಲಿ ಡಬ್ಬಿಂಗ್ ಮುಗಿಸಿದ್ದಾರೆ, 3 ನೆ ಹಂತದ ಸ್ವಾಶಕೊಶದ ಕ್ಯಾನ್ಸರನ್ನ ಗೆದ್ದು ಚೇತರಿಸಿಕೊಂಡು ಇದೀಗ ಮೊದಲ ಬಾರಿಗೆ ಸಂಜಯ್ ದತ್ ಡಬ್ಬಿಂಗ್ ಮಾಡಿರುವುದು ” ಅಧೀರನ” ಪಾತ್ರಕ್ಕೆ. ಡಬ್ಬಿಂಗ್ ಮುಗಿದ ನಂತರ, ನೇರ ಬಾಂಬೆಯ ಸ್ಟುಡಿಯೋದಿಂದ ನಿರ್ದೇಶಕ ಪ್ರಶಾಂತ್ ನೀಲ್ ಸಂಜಯ್ ದತ್ ಜೊತೆ ಫೋಟೋ ಕ್ಲಿಕ್ಕಿಸಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಏಕಕಾಲಕ್ಕೆ 5 ಭಾಷೆಗಳಲ್ಲಿ ಸಿನಿಮಾ ಬಿಡುಗಡೆಯಾಗ್ತಿರೋದು ಗೊತ್ತೇ ಇದೆ ಮೊದಲ ಬಾರಿ ಕನ್ನಡದಲ್ಲಿ ನಟಸ್ತಿರೋ ಸಂಜಯ್ ದತ್ ಅವರಿಗೆ ಯಾರು ಧ್ವನಿಯಾಗಲಿದ್ದಾರೆ ಅನ್ನೋ ಕಾತುರವು ಇದೆ.
Related Posts
ಕೋಮಲ್ ಸಿನಿಮಾಗೆ ಮೋದಿ ಶುಭಕೋರಿದ್ದಾರೆ
ಅಕ್ಟೊಬರ್ 30ನೆ ತಾರಿಕಿನ0ದು , ಕೋಮಲ ನಾಯಕನಾಗಿ ಅಭಿನಯಿಸುತ್ತಿರುವ ಹೊಸ ಸಿನಿಮಾದ ಶೀರ್ಷಿಕೆ ಅನಾವರಣಗೊಳ್ಳಲಿದೆ, ಈಸಂಧರ್ಭದಲ್ಲಿ ಸಿನಿಮಾ ತಂಡದವರು ನೂತನ ಪ್ರಯತ್ನವೊಂದನ್ನ ಮಾಡಿದ್ದಾರೆ. ಅದೇನಂದ್ರೆ ಕರ್ನಾಟಕದ ಮಾಜಿ…
ಹ್ಯಾಪಿ ಬರ್ತ್ಡೇ ವಿನಯ್ ರಾಜ್ ಕುಮಾರ್ 💐💜💐
ಪದ್ಮಭೂಷಣ ಡಾ ರಾಜ್ ಕುಮಾರ್ ರವರ ಮುದ್ದಿನ ಮೊಮ್ಮಗ, ರಾಜವಂಶದ ಕುಡಿ ಹೃದಯವಂತ ರಾಘಣ್ಣ ರವರ ಮಗ ಹೆಸರಿನಲ್ಲೇ ವಿನಯ ತುಂಬಿರೋ “ವಿನಯ್ ರಾಜ್ ” ಕುಮಾರ್…
ತಂದೆ ತಾಯಿಯ ಪರ ನಿಂತರು ರಾಕಿ ಭಾಯ್
ಹಾಸನ ಜಿಲ್ಲೆಯ ದುದ್ದ ಗ್ರಾಮದಲ್ಲಿ ಯಶ್ ಅವರು ಸ್ವಲ್ಪ ದಿನಗಳ ಹಿಂದೆ 10 ಎಕರೆ ಕೃಷಿ ಭೂಮಿಯನ್ನ ಖರೀದಿಸಿ, ವಿನೂತನ ಮಾದರಿಯ ಕೃಷಿ ಮಾಡಲು ಮುಂದಾಗಿದ್ದಾರೆ, ಅದರ…