1978ರ ಈ ದೊರೆ ಭಗವಾನ್ ಜೋಡಿಯ ಕಥೆ ಚಿತ್ರಕಥೆ ನಿರ್ಮಾಣ ಮತ್ತು ನಿರ್ದೇಶನದ ಚಿತ್ರ ಬಾಂಡ್ ಶೈಲಿಯ ಚಿತ್ರಗಳಲ್ಲಿ ನಾಲ್ಕನೆಯದು. ಜೇಡರಬಲೆ, ಗೋವಾದಲ್ಲಿ ಸಿಐಡಿ 999,ಆಪರೇಷನ್ ಜ್ಯಾಕ್‌ಪಾಟ್‌ನಲ್ಲಿ ಸಿಐಡಿ 999 – ಹಿಂದಿನ ಈ ಮೂರು ಸಿನಿಮಾಗಳು ಕಪ್ಪು ಬಿಳುಪು. ಇದು ವರ್ಣಮಯ. ಆ ಮೂರರಲ್ಲಿ ಇದ್ದ ಒಂದು ಪಾತ್ರ ಇಲ್ಲದ್ದು ತಿಳಿಯುತ್ತದೆ. ಆ ಪಾತ್ರ ಟ್ಯಾಕ್ಸಿ ಡ್ರೈವರ್ ಬೇಬಿ (ನರಸಿಂಹರಾಜು).
ಜಯಂತಿ ಲಕ್ಷ್ಮಿ ರೇಖಾ (ಹಿಂದೀ ನಟಿ) ನಂತರ ಇಲ್ಲಿ ನಾಯಕಿ ಪದ್ಮಪ್ರಿಯ.
ರೂಥ್‌ಲೆಸ್ ಕೊಲೆಗಳು, ಕ್ಲಬ್ ಡ್ಯಾನ್ಸ್‌ಗಳು, ಬಾಸ್, ಸ್ಲೈಡಿಂಗ್ ಬಾಗಿಲುಗಳು, ಡೆಥ್ ಛೇಂಬರ್, ಕಾರ್ ಛೇಸ್, ಬಾಂಡ್ ಸ್ಟೈಲಿನ ಛೇಸ್ ಮಾಡೋ ಕಾರ್ ಟಯರ್ ಬರ್ಸ್ಟ್ ಆಗಕ್ಕೆ ಮೊಳೆಗಳೆಸೆಯೋದು, ಪೆಟ್ರೋಲ್ ಸುರಿದು ಬೆಂಕಿ ಹಚ್ಚೋದು, ಮೋಟರ್ ಬೋಟ್ ಛೇಸ್, ನಾವಿಕ ಇಲ್ಲದ ಮೋಟರ್ ಬೋಟಿನಲ್ಲಿ ಫೈಟು… ಜೊತೆಗೆ ಹಾಡುಗಳು…
ಅಣ್ಣಾವ್ರು ಪೂರ್ಣ ಆಂಗ್ಲ ಹಾಡು If you come today it’s too early… ವಾಣಿ ಜಯರಾಂ ಹಾಡು ಸೀಮಾ ಕಪೂರ್ ಕ್ಯಾಬರೆಗೆ ನೋಡಿದೆಯಾ ನೀ ಚೆಲುವ ತನುವ… ಅಣ್ಣಾವ್ರು ಜಾನಕಿಯಮ್ಮನವರ ಯುಗಳಗೀತೆ ಅಲ್ಲಿ ಇಲ್ಲಿ ನೋಡುವೆ ಏಕೆ. ಇದರಲ್ಲಿ ನೇಪಾಳದ ಕಠ್ಮಂಡು ದರ್ಶನ. ಬಿಸಿ ಬಿಸಿ ಕಜ್ಜಾಯ (ಹಾವಿನ ಹೆಡೆ) ಥರದ ಹಾಡಿನ ಮಧ್ಯೆ ಫೈಟಿಂಗ್ ನೀ ನಡುಗುವೆ ಏಕೇ… ಅಣ್ಣಾವ್ರ ಅಭಯ ಮತ್ತು ಜಾನಕಿಯಮ್ಮನವರ ಹಮ್ಮಿಂಗ್…
ಜಿ ಕೆ ವೆಂಕಟೇಶ್ ಅವರ ನೇಪಥ್ಯ ಸಂಗೀತ ಮತ್ತು ಬೇಕಾದ ಕಡೆ ಸೈಲೆನ್ಸ್ ಎರಡೂ ಚೆನ್ನ.
ನೀಗ್ರೋ ಜಾನಿ, ವಜ್ರಮುನಿ, ತೂಗುದೀಪ ಶ್ರೀನಿವಾಸ್, ಟೈಗರ್ ಪ್ರಭಾಕರ್, ರಾಜಾನಂದ್, ಚೇತನ್ ರಾಮರಾವ್ ನಾನು ಗುರುತಿಸಿದ ಕೆಲವರು.
ಅಣ್ಣಾವ್ರು ವೆರೀ suave. ಈಜುಕೊಳ ಮತ್ತು ಬೆಡ್ ಬಿಟ್ಟರೆ ಮಿಕ್ಕೆಲ್ಲಾ ಕಡೆ ಸೂಟ್‌ಗಳಲ್ಲಿ ಮಿಂಚಿದ್ದಾರೆ. ಅವರ ಕಂಗಳಲ್ಲಿನ ಕೆಚ್ಚು ಬ್ಯೂಟಿಫುಲ್!