2018 ರ ಜೂನ್ ನಲ್ಲಿ ಬಿಡುಗಡೆಯಾದ ಒಂದು ವಿಭಿನ್ನ ಶೈಲಿಯ ಅಪರೂಪದ ಚಿತ್ರ
“ಆ ಕರಾಳ ರಾತ್ರಿಯಲ್ಲಿ”. ಮೋಹನ್ ಹಬ್ಬು ಅವರ 20 ನಿಮಿಷದ ನಾಟಕವನ್ನು ಅತ್ಯದ್ಭುತವಾಗಿ ನಿರ್ದೇಶಿಸಿ ತೆರೆಗೆ ತಂದವರು ದಯಾಳ್ ಪದ್ಮನಾಭನ್ ಮತ್ತು ನವೀನ್ ಕೃಷ್ಣ ಅವರು.ಈ ಚಿತ್ರ ನಿಜಕ್ಕೂ ಅಮೋಘ ಗುಣಮಟ್ಟ. ಪ್ರೌಢ ,ಚುರುಕು ಅಭಿನಯದಿಂದ ನೋಡುಗರ ಮನಸೆಳೆಯುತ್ತದೆ.
ಕಾರ್ತಿಕ್ ಜಯರಾಮ್, ಅನುಪಮ, ರಂಗಾಯಣ ರಘು ಮತ್ತು ವೀಣಾ ಸುಂದರ್ ಮುಖ್ಯ ಪಾತ್ರದಲ್ಲಿದ್ದಾರೆ.ಇಲ್ಲಿ ಯಾವುದೇ ಪ್ರಖ್ಯಾತ ಸ್ಟಾರ್ ನಟರಿಲ್ಲದಿದ್ದರು ಪಾತ್ರಕ್ಕೆ ಜೀವತುಂಬಿದ್ದಾರೆ ಈ ಮೇಲಿನ ನಟರು. ಮುತ್ತಪ್ಪನ ಕಡು ಬಡತನದ ಕುಟುಂಬ ಒಬ್ಬ ಅಪರಿಚಿತ ಶ್ರೀಮಂತ ವ್ಯಕ್ತಿ ಅಚಾನಕ್ ಆಗಿ ಮನೆಗೆ ಬಂದಾಗ ಅವನಲ್ಲಿದ್ದ ಹಣ,ಒಡವೆಗಳ ಆಸೆಗೆ ಅವನನ್ನು ಕೊಲ್ಲುವ ಪ್ರಯತ್ನದಲ್ಲಿ ಅವರುಗಳು ಒಳಮನಸ್ಸಿನ ತೊಳಲಾಟ ತುಂಬಾ ಹೃದಯಸ್ಪರ್ಶಿಯಾಗಿ ಮೂಡಿಬಂದಿದೆ. ಆ ಅಪರಿಚಿತ ವ್ಯಕ್ತಿಯ ಕೊಲೆಯಾದ ನಂತರ ಆತ ಈ ಹಿಂದೆ ಚಿಕ್ಕ ವಯಸ್ಸಿನಲ್ಲಿ ಮನೆಬಿಟ್ಟುಹೋದ ತಮ್ಮ ಮನೆಮಗ ಎಂದು ತಿಳಿಯುತ್ತದೆ. ಆ ತಳಮಳ ಮತ್ತು ಅವನಿಗಾಗಿ ತಯಾರಿಸಿದ ವಿಷಬೇರೆಸಿದ ಆಹಾರ ಸೇವಿಸುವ ತಾಯಿ ಮಗಳು ಮತ್ತು ಮನೆಗೆ ಬೆಂಕಿ ಇಟ್ಟುಕೊಂಡು ಕುಟುಂಬ ಆಹುತಿಯಾಗುವ ದೃಶ್ಯ ಮನಕಲಕುತ್ತದೆ.
ಈ ಚಲನ ಚಿತ್ರ ಪ್ರಸ್ತುತ ಮತ್ತೆ ಸುದ್ದಿಗೆ ಬಂದಿದ್ದು ಏಕೆ ಗೊತ್ತೇ?
ಈ ಚಿತ್ರವು ರಷ್ಯನ್ ನಾಟಕ “The returns of the soldier” 2 ನೇ ಮಹಾಯುದ್ಧದ ನಂತರ ನಡೆದ ಒಂದು ಘಟನೆ ಆಧರಿಸಿದ ಕಥೆ.ಇದನ್ನು ಕನ್ನಡಕ್ಕೆ ಮೋಹನ್ ಹಬ್ಬು 20 ನಿಮಿಷದ ನಾಟಕವಾಗಿ ಸ್ಕ್ರಿಪ್ಟ್ ತಯಾರಿಸಿದರು . ಇದನ್ನು 1978ರಲ್ಲಿ ಖ್ಯಾತ ನಿರ್ದೇಶಕ ಎಸ್ ಕೆ ಭಗವಾನ್ ಅವರು ಡಾ.ರಾಜಕುಮಾರ್ ಅವರಿಗೆ ಈ ನಾಟಕವನ್ನೇ ಚಲನಚಿತ್ರವಾಗಿಸಿ ಅದರಲ್ಲಿ ಪಾತ್ರವಹಿಸಲು ಕೇಳಿಕೊಂಡರು. ಮೊದಲಿಗೆ ಡಾ.ರಾಜ್ ಅವರೂ ಸಹ ಒಪ್ಪಿಗೆ ಸೂಚಿಸಿದ್ದರು. ಈ ವಿಷಯ ಚರ್ಚೆಯಾಗಿದ್ದು ಡಾ. ರಾಜ್ ಅವರ ಶಂಕರ್ ಗುರು ಚಲನ ಚಿತ್ರದ ಚಿತ್ರೀಕರಣದ ಸಮಯದಲ್ಲಿ.
ಡಾ. ರಾಜ್ ಅವರ ತಮ್ಮ ವರದಾರಾಜ್ ಅವರು ಈ ಚಲನ ಚಿತ್ರದ ಮುಖ್ಯ ಪಾತ್ರ ಹೆಚ್ಚು ಧನಾತ್ಮಕ ಅಂಶಗಳನ್ನು ಹೊಂದಿದೆ (negative shades) ಎನ್ನುವ ಕಾರಣಕ್ಕಾಗಿ, ಡಾ. ರಾಜ್ ಅವರ image ಹಾಳಾಗಬಹುದೆಂದು ಈ ಚಿತ್ರ ಮಾಡುವುದು ಬೇಡ ಎಂಬ ನಿರ್ಧಾರಕ್ಕೆ ಬಂದರು .ಲಢಾಕ್ ಹಲವು ಭಾಗಗಳಲ್ಲಿ ಚಿತ್ರೀಕರಣವನ್ನು ಮಾಡಲು ತಯಾರಿಯೂ ನಡೆದಿತ್ತು ಎಂದು ತಿಳಿದು ಬಂದಿದೆ.
ಲೇಖಕರು: ಮಮತಾ ಭಾಮಾ
ವೃತ್ತಿ-ಒಳಾಂಗಣ ವಿನ್ಯಾಸಕಿ
ಪ್ರವೃತ್ತಿ- ಹವ್ಯಾಸಿ ಬರಹಗಾರ್ತಿ,ಹಾಡುಗಾರ್ತಿ
ಕವನ ಸಂಕಲನ:ಚಿಗುರು