ಸಿದ್ಧಾರ್ಥ್ ಮಲ್ಹೋತ್ರಾ, ಅಕ್ಷಯ್ ಖನ್ನಾ ಹಾಗೂ ಸೋನಾಕ್ಷಿ ಸಿನ್ಹಾ ಪ್ರಮುಖ ಪಾತ್ರದಲ್ಲಿ ಅಭಿನಯಿಸಿರುವ ಸಸ್ಪೆನ್ಸ್ ಮರ್ಡರ್ ಮಿಸ್ಟರಿ. ಅಭಯ್ ಚೋಪ್ರಾರವರ ಸಸ್ಪೆನ್ಸ್ ಚಿತ್ರಕಥೆ ವಿಶಿಷ್ಠ ನಿರೂಪಣಾ ಶೈಲಿಯಿಂದ ಕೂತೂಹಲ ಕೆರಳಿಸಿ ನೋಡಿಸಿಕೊಂಡು ಹೋಗುತ್ತದೆ.
ಜೋಡಿಕೊಲೆಯ ಆರೋಪದ ಮೇಲೆ ಬಂಧಿಯಾಗುವ ನಾಯಕ ವಿಕ್ರಮ್ ಸೇಠಿಯ ವಿಚಾರಣೆಯಿಂದ ಪ್ರಾರಂಭವಾಗುವ ಸಿನೆಮಾ ನಿಮಿಷಕ್ಕೊಂದು ತಿರುವು ಪಡೆದುಕೊಳ್ಳುತ್ತ ಸಾಗುತ್ತದೆ.
ಸಸ್ಪೆನ್ಸ್ ಥ್ರಿಲ್ಲರ್ ನಂತೆ ಕುತೂಹಲ ಕೆರಳಿಸುತ್ತ ಸಾಗುವ ಕಥೆ ಸಿನೆಮಾ ಮುಗಿಯಲು 15 ನಿಮಿಷ ಬಾಕಿಯಿರುವಾಗ ತನ್ನೆಲ್ಲ ಗೋಜಲುಗಳನ್ನು ಕಳೆದುಕೊಂಡು ಅಂತ್ಯಕ್ಕೆ ಬರುತ್ತದೆ. ಅದರ ನಂತರವೂ ಚಿತ್ರಕಥೆಯನ್ನು ಮುಂದುವರೆಸಿ ತಾರ್ಕಿಕ ಅಂತ್ಯವನ್ನು ನೀಡಿರುವ ಪರಿ ಸಿನೆಮಾದ ತಿರುಳು. ತನಿಖಾಧಿಕಾರಿಯಾಗಿ ಅಕ್ಷಯ್ ಖನ್ನಾರವರ ಅಭಿನಯ ಚಿತ್ರದ ಪ್ಲಸ್ ಪಾಯಿಂಟ್.
ಸಸ್ಪೆನ್ಸ್ ಚಿತ್ರಗಳನ್ನು ಇಷ್ಟಪಡುವ ಸಿನೆಮಾಪ್ರೇಮಿಗಳಿಗೆ ಇದು ರಸದೌತಣದಂತಿದೆ. ಇತ್ತೆಫಾಕ್
ಲೇಖಕರು : ಸಂತೋಷ್ ಖಾರ್ವಿ (ಸ.Kha.)