ಇನ್ಸ್ಪೆಕ್ಟರ್ ವಿಕ್ರಂ – ಪಕ್ಕಾ ಎಂಟರ್ಟೈನ್ಮೆಂಟ್

ತಾರಾಗಣ- ಪ್ರಜ್ವಲ್ ದೇವರಾಜ್, ದರ್ಶನ್ ತೂಗುದೀಪ್(ವಿಶೇಷ ಪಾತ್ರ) ಭಾವನಾ ಮೆನನ್, ರಘು ಮುಖರ್ಜಿ, ಅವಿನಾಶ್ ಹಾಗೂ ಧರ್ಮಣ್ಣ ಕಡೂರ್.

ನಿರ್ದೇಶನ – ಶ್ರೀ ನರಸಿಂಹ.
ಸಂಗೀತ – ಅನೂಪ್ ಸೀಳಿನ್.
ನಿರ್ಮಾಪಕರು – ಎ. ಆರ್. ವಿಖ್ಯಾತ.

ಇನ್ಸ್ಪೆಕ್ಟರ್ ವಿಕ್ರಂ1989ರಲ್ಲಿ ಬಿಡುಗಡೆಯಾದ ಹ್ಯಾಟ್ರಿಕ್ ಹೀರೋ ಶಿವರಾಜ ಕುಮಾರ್ ಅವರ ವೃತ್ತಿ ಬದುಕಲ್ಲಿ ಮೈಲಿಗಲ್ಲಾಗಿ ನಿಂತಿರುವ ಹಲವು ಸಿನಿಮಾಗಳಲ್ಲಿ ಇದು ಕೂಡ ಒಂದು. ಶಿವಣ್ಣ ಅವರ ಮೇಲಿನ ಅಪಾರವದ ಪ್ರೀತಿ ಗೌರವದಿಂದ ಚಿತ್ರತಂಡ ಈಗ ಅದೇ ಶೀರ್ಷಿಕೆಯನ್ನ ಬಳಸಿ ಹೊಸ ಸಿನಿಮಾ ಮಾಡಿದ್ದಾರೆ. ಕಥವಸ್ತುವಿನಲ್ಲಿ ಯಾವುದೇ ಹೋಲಿಕೆ ಇಲ್ಲಾವಾದ್ರೂ ಸಿನಿಮಾದ ಟೈಟಲ್ ಹೇಳುವಂತೆ ಏರಡರಲ್ಲು ನಾಯಕ ಪೊಲೀಸ್ ಅಧಿಕಾರಿ.

ಇನ್ಸ್ಪೆಕ್ಟರ್ ವಿಕ್ರಂ(ಪ್ರಜ್ವಲ್ ದೇವರಾಜ್) ಓರ್ವ ದಕ್ಷ ಅಧಿಕಾರಿ, ಲವರ್ ಬಾಯ್ ಜೊತೆಗೆ ಹುಡುಗಾಟದ ಸ್ವಭಾವದವ. ರಘು ಮುಖರ್ಜಿ( ಪ್ರತಾಪ) ಪೊಲೀಸ್ ಅಧಿಕಾರಿಯಾಗಿದ್ದು, ಕಾನೂನಿನ ಸುವ್ಯವಸ್ಥೆಗೆ ಧಕ್ಕೇ ತರೊ ವಿಲ್ಲನ್, ಕಥೆಯ ಪ್ರಾರಂಭದಲ್ಲೇ ಒಂದು ಕೊಲೆ ಮಾಡಿ, ಹಾವು ಹತ್ತು ಜನರ ಕೈಯಿಂದ ತಪ್ಪಿಸಿಕೊಳ್ಳ ಬಹುದು ಆದ್ರೆ ಹದ್ದಿನ ಕಣ್ಣಿನಿಂದಲ್ಲ ಅಂತ ಹೇಳ್ತಾನೆ.ಕೋಲ್ಡ್ ಬ್ಲಡ್ ಖಳನಟನಾಗಿ ರಘು ಬಹಳ ಸಮರ್ಥವಾಗಿದ್ದಾರೆ. ಕೊಲೆಯಯಾದವ ಯಾರು??

ಮತ್ತೊ0ದೆಡೆ ಮಾದಕ ವಸ್ತು ಮತ್ತು ಡ್ರಗ್ಸ ಹಾವಳಿ ಹೆಚ್ಚಾಗಿ ಸಮಾಜದ ದಿಕ್ಕು ತಪ್ತಾ ಇದೆ, ಅದಕ್ಕೆ ಕಾರಣವಾದ ದೊಡ್ಡ ಕೈಯನ್ನ ಬಂಧಿಸಿ ಸೆರೆ ಹಿಡಿಯುವ ಜವಾಬ್ದಾರಿ ಇನ್ಸ್ಪೆಕ್ಟರ್ ವಿಕ್ರಂಗೆ ಕಮಿಷನರ್ (ಅವನಾಶ್) ಒಪ್ಪಿಸುತ್ತಾರೆ, ಕಳ್ಳ ಪೊಲೀಸ್ ಆಟದಲ್ಲಿ, ಪೊಲೀಸ್ ತನ್ನ ತೋಳಿನ ಬಲ ಬುದ್ದಿ ಶಕ್ತಿ ಬಳಸಿ ಅಪರಾಧಿಯನ್ನು ಸೆರೆ ಹಾಕುವುದು ವಾಸ್ತವ , ಆದ್ರೆ ಇಲ್ಲಿ ಓರ್ವ ಚಾಣಾಕ್ಷ ಪೊಲೀಸ್ ಅಧಿಕಾರಿಯೇ ಕಳ್ಳ.. ವ್ಯೂಹದೊಳಗೊಂದು ವ್ಯೂಹ ಎಂಬಂತೆ ಕಥೆ ಸಾಗುತ್ತೆ. ನಟಿ ಭವಾನ ಎಂದಿನಂತೆ ಬಹಳ ಕ್ಯೂಟ್ ಆಗಿ, ಲವಲವಿಕೆಯಿಂದ ಕಂಡು, ಅವರ ಪಾತ್ರಕ್ಕೆ ಸಾಕಷ್ಟು ನ್ಯಾಯ ಒದಗಿಸಿದ್ದಾರೆ. ವ್ಯಾಘ್ರ ಪ್ರತಾಪನನ್ನು ಸಾಕ್ಷ್ಯಾಧಾರ ಸಮೇತವಾಗಿ ಬಂಧಿಸಲು ಮತ್ತೊಂದು ಹೊಸ ಕೈ ಸೇರುತ್ತೆ ಅದು ಕೂಡ ಸಿನಿಮಾದಲ್ಲಿನ ಒಂದು ಸಸ್ಪೆನ್ಸ್. ಆಕ್ಷನ್ ಹಾಗೂ ರೋಮ್ಯಾಂಟಿಕ್ ಸನ್ನಿವೇಶಗಳಲ್ಲಿ ಪ್ರಜ್ವಲ್ ಅಭಿನಯ ಬಹಳ ಚುರುಕಾಗಿದೆ, ಬಿರುಸಾಗಿದೆ.

“ಆನೆ ನಡೆದಿದ್ದೆ ದಾರಿ”… ಸಿನಿಮಾದಲ್ಲಿನ ಮತ್ತೊಂದು ಹೈಲೈಟ್ ಅಂದ್ರೆ ಡಿ- ಬಾಸ್ ಅವರ ಹಾಜರಿ. ಅವರು ಯಾವುದೇ ಪಾತ್ರವಾಗಿ ಅಭಿನಯಿಸದೆ ಖುದ್ದು ದರ್ಶನ ಆಗಿಯೇ ಕಾಣಿಸಿದ್ದಾರೆ. ಚಾಲ್ಲೆಂಜಿಂಗ್ ಸ್ಟಾರ್ ದರ್ಶನ್ ಬಂದಮೇಲ್ ಎಲ್ಲೆನೋ ಒಂದು ವಿಶೇಷ ಇರಲೇ ಬೇಕು, ಖಂಡಿತ ಇದೇ. ಬಿಳಿ ಶರ್ಟು ,ಬ್ಲಾಕ್ ಪ್ಯಾಂಟ್, ನುಣುಪಾದ ಮೀಸೆ ಬಿಟ್ಟು,ಕುದ್ರೆ ಹಿಡ್ಕೊಂಡು ಭಗತ್ ಸಿಂಗ್ ತರ ಟೋಪಿ ಹಾಕೊಂಡು ಬರ್ತಾ ಇದ್ರೆ ಅದರ ಮಜಾನೆ ಬೇರೆ.. ಅದನ್ನ ದೊಡ್ಡ ಪರದೆಯಲ್ಲೇ ನೋಡಬೇಕು.

ಧರ್ಮಣ್ಣ ಕಡೂರ್, ಶೋಭರಾಜ್ ಅವರ ಹಾಸ್ಯ ಮತ್ತು ಅಭಿನಯ ನಗುವಿಗೆ ಕಾರಣವಾದ್ರೆ,ಪ್ರಜ್ವಲ್ ದೇವರಾಜ್ ಅವರ ಕೆಲವು ಪಂಚ್ ಸಾಲುಗಳು ಕಿಕ್ಕೇರಿಸುತ್ತೇ..ಆದ್ರೆ ವಿಷಯಕ್ಕಿಂತ ಪ್ರಾಸಾನೆ ಹೆಚ್ಚು ಅನ್ಸುತ್ತೆ. ಸಂಗೀತ ನಿರ್ದೇಶಕರಾದ ಅನೂಪ್ ಸೀಳಿನ್ 3 ಅದ್ಭುತವಾದ ಹಾಡುಗಳನ್ನ ಸಂಯೋಜಿಸುವುದರ ಜೊತೆಗೆ ಬೊಂಬಾಟ್ ಹಿನ್ನಲೆ ಸಂಗೀತವನ್ನ ಅಂಟಿಸಿ ಸಿನಿಮಾನ ಉಯ್ಯಾಲೆಯಂತೆ ತೂಗಿಸಿದ್ದಾರೆ.
ಇನ್ನು ಸಿನಿಮಾದ ನಾವಿಕ ನಿರ್ದೇಶಕ ಶ್ರೀ ನರಸಿಂಹ ಯಾವ ಹಂತದಲ್ಲು ನೋಡುಗನಿಗೆ ಬೋರ್ ಹೊಡೆಯದಂತೆ, ಮನೋರಂಜನೆಗೆ ಕೊರತೆಯಾಗದಂತೆ ಲಾಜಿಕ್ ಗಿಂತ ಮಾಜಿಕ್ಕೆ ಲೇಸು ಅನ್ನೋ ಪರಿಯಲ್ಲಿ ಕೆಲಸ ನಿರ್ವಹಿಸಿ, ಪಕ್ಕ ಎಂಟರಟೈನ್ಮೆಂಟ್ ಸಿನಿಮಾ ತಯಾರಿಸಿ ಗೆದ್ದಿದ್ದಾರೆ.

ಚಿತ್ರೋದ್ಯಮ.ಕಾ0 ರೇಟಿಂಗ್- 7/10.

P. Ghanashyam

P. Ghanashyam

ಘನಶ್ಯಾಮ್ - ಪತ್ರಿಕೋದ್ಯಮ ವಿದ್ಯಾರ್ಥಿ. ಸಿನಿಮಾ ರಂಗದ ಬಗ್ಗೆ ಬಹಳ ಒಲವು. ಅದರಲ್ಲೂ ಕನ್ನಡ ಚಿತ್ರರಂಗದ ಬಗ್ಗೆ ತುಸು ಹೆಚ್ಚೇ ಅಭಿಮಾನ. ಚಿತ್ರರಂಗದ ಕೆಲವು ವಿಶಿಷ್ಟ ವಿಷಯಗಳ ಬಗ್ಗೆ ತಾನೇ ಅಲ್ಲಿ ಇಲ್ಲಿ ಸಂಶೋಧಿಸಿ, ಕೇಳಿ, ಓದಿ ತಿಳಿದ ವಿಷಯಗಳನ್ನೆಲ್ಲಾ ಒಂದೆಡೆ ಕೂಡಿಟ್ಟು, ಚಿತ್ರೋದ್ಯಮ.ಕಾಂ ನ ಓದುಗರೊಂದಿಗೆ ಹಂಚಿಕೊಳ್ಳಲಿದ್ದಾರೆ. ಘನಶ್ಯಾಮ್ ಚಿತ್ರೋದ್ಯಮ.ಕಾಂ ನ ಲೇಖಕರೆಂಬುವುದಕ್ಕಿಂತ ಒಂದರ್ಥದಲ್ಲಿ ಸಂಪಾದಕರೇ ಎಂದರೂ ತಪ್ಪಿಲ್ಲ. ಇತರ ಲೇಖಕರ ಲೇಖನಗಳನ್ನು ಪರಿಶೀಲಿಸಿ, ಪಬ್ಲಿಷ್ ಮಾಡುವುದು, ಚಿತ್ರರಂಗದ ತಂಡಗಳ ಜೊತೆ ಸಂದರ್ಶನ ಮಾಡುವುದು... ಇತ್ಯಾದಿ ಎಲ್ಲದರಲ್ಲೂ ಚಿತ್ರೋದ್ಯಮ.ಕಾಂ ತಂಡದ ಬಹು ಮುಖ್ಯ ಸದಸ್ಯ. ತೀಕ್ಷ್ಣ ನೇತ್ರ ಎಂಬ ಹೆಸರಲ್ಲೂ ಕೆಲವು ಲೇಖನಗಳನ್ನು ಬರೆದಿದ್ದಾರೆ, ಬರೆಯಲಿದ್ದಾರೆ. ಘನಶ್ಯಾಮ್ ರ ಲೇಖನಗಳಿಗೆ ನಿಮ್ಮದೊಂದು ಮೆಚ್ಚುಗೆಯಿರಲಿ

Leave a Reply