ಒಡಹುಟ್ಟಿದವರು 27 ವಷ೯ ಸಂಭ್ರಮ 💐💙💐

“ಸೋಲೆ ಗೆಲುವೆಂದು ಬಾಳಲಿ
ಅರಿತಾದ ಮೇಲೆ
ಎಲ್ಲ ಅಪನಿಂದೆ ಅಪಮಾನ ಬಹುಮಾನದಂತೆ
ಈ ಸುಖ ದುಖ್ಖವೂ ಅಳುವು ನಗುವು
ಎಲ್ಲ ಆ ದೇವನಾ ಕೊಡುಗೇ “

ಈ ಗೀತೆಗಳ ಸಾಲುಗಳನ್ನು ಒಮ್ಮೆ ನೆನಪಿಸಿಕೊಳ್ಳಿ, ಕಾರಣ ವರನಟ ಪದ್ಮಭೂಷಣ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ವಿಜೇತರಾದ ನಮ್ಮ ಆಣ್ಣಾವೃ ಮತ್ತು ರೆಬಲ್ ಸ್ಟಾರ್ ಅಂಬರೀಷ್ ರವರು ತಮ್ಮ ಕನಸನ್ನು ಈಡೇರಿಸಿಕೊಂಡ ದೊರೈ ಭಗವಾನ್ ನಿದೇ೯ಶನದ ಅದ್ಧೂರಿ ತಾರಾಗಣದ ಮಹೋನ್ನತ ಚಿತ್ರ ಅದುವೇ “ಒಡಹುಟ್ಟಿದವರು ” ಬಿಡುಗಡೆಯಾಗಿ 17.02.2020 ಕ್ಕೆ 27ವಷ೯ಗಳ ಸವಿನೆನಪು 🌹

ಅಪ್ಪಾಜಿ (ಅಣ್ಣ ಪಾತ್ರ) ಮಾಧವಿ (ಮಡದಿ ಪಾತ್ರ) , ಅಂಬರೀಷ್ , ಕೆ. ಎಸ್ ಅಶ್ವಥ್ (ತಂದೆ ಪಾತ್ರ) ಸುಖೀ ಕುಟುಂಬ, ಊರ ಪಂಚಾಯ್ತಿ ಮುಖ್ಯಸ್ಥರು (ಕೆ. ಎಸ್ ಅಶ್ವಥ್), ನಟಭಯಂಕರ ವಜ್ರಮುನಿ (ಶ್ರೀಶಾಂತಿ ತಂದೆ), ಶ್ರೀಶಾಂತಿ (ವಜ್ರಮುನಿ ಮಗಳು), ಬಾಲಕೃಷ್ಣ, ಸುಧೀರ್, ಮತ್ತಿತರ ಕಲಾವಿದರ ಬಳಗ.

ಅಣ್ಣಾವ್ರ ಸುಖೀ ಕುಟುಂಬ, ಪ್ರಾರಂಭದಲ್ಲಿ ಎತ್ತಿನ ಗಾಡಿ ಪಂದ್ಯದಲ್ಲಿ ಖಳನಾಯಕ ವಜ್ರಮುನಿ ಚೇಸಿಂಗ್ ಆಟದಲ್ಲಿ ಮೋಸ ಮಾಡಿದರೂ ಅಣ್ಣನ ಗೆಲುವು, ಖಳನಟನಿಗೆ ಮುಖಭಂಗ. ತಮ್ಮನೀಗೆ ಅಣ್ಣನೆಂದರೆ ಪಂಚಪ್ರಾಣ, ತಂದೆಗೆ ತಕ್ಕ ಮಗ, ತಂದೆ ಹೇಳಿದಂತೆ ಮನೆ ನಡೆಸಿಕೊಂಡು ಹೋಗುವ ಅಣ್ಣಾವೃ, ಕುಟುಂಬದ ಸೊಸೆ ನೆಚ್ಚಿನ ಮಡದಿಯಾಗಿ ಮಾಧವಿ ಪಾತ್ರ ತುಂಬಾ ಚೆನ್ನಾಗಿ ಮಾಡಿದ್ದಾರೆ, ತಮ್ಮನಿಗೆ ಬೇರೆ ಕಡೆ ಕೆಲಸ ಸಿಕ್ಕಾಗ ಅಣ್ಣನಿಗೆ ತಿಳಿಸುವಾಗ ಮಣ್ಣಿನ ಮಹತ್ವದ ಹಾಡು ಮತ್ತು ನಿಜವಾದ ಜೀವನದ ಶೈಲಿ ತಿಳಿಸುವಿಕೆಯಿಂದ ಅಣ್ಣನಂತೆ ತಮ್ಮನೂ ಕೂಡ ರೈತರಾಗಿ ಬದಲಾಗುವುದು, ಜಾತ್ರೆಯಲ್ಲಿ ನಾಯಕಿ ಶ್ರೀಶಾಂತಿ ಪ್ರೇಮದ ಬಲೆಯಲ್ಲಿ ಬೀಳುವುದು, ಅತ್ತಿಗೆ ಹತ್ತಿರ ತಿಳಿಸಿ ನಂತರ ಅಣ್ಣರು ನಾಯಕಿಯ ಮನೆಗೆ ಹೋದಾಗ ಖಳನಾಯಕ ವಜ್ರಮುನಿ ಜೊತೆ ಹೊಡೆದಾಟ, ನಂತರ ಇಬ್ಬರಿಗೂ ಮದುವೆ ಮಾಡಿಸುವುದು,

ಜೊತೆಯಲ್ಲಿ ಇಬ್ಬರೂ ಕೂಡಿ ಹಾಡುವ “ನಾನು ನಾನು ನೀನು ಹಾಲು ಜೇನು “ ಸುಂದರ ಹಾಡಿನ ಜೊತೆ ಅಮೋಘ ನೃತ್ಯ. ಮಾಧವಿ ರವರಿಗೆ ಮಕ್ಕಳಿರುತ್ತೆ ಆದರೆ ಎರಡನೇ ನಾಯಕಿಗೆ ಕಾರಣಾಂತರದಿಂದ ಮಕ್ಕಳಿರುವುದಿಲ್ಲ, ಶ್ರೀಮಂತ ಮನೆತನದವರು ಸಾಮಾನ್ಯರಾಗಿ ಜೀವಲು ಇಷ್ಟವಿರುವುದಿಲ್ಲ.

ಇದೇ ಸಂಧಭ೯ದಲ್ಲಿ ಬಾಲಣ್ಣರವರು ಇವರ ಸಂಸಾರದಲ್ಲಿ ಹುಳಿ ಹಿಂಡುವ ಯತ್ನ ನಂತರ ಅಂಬರೀಷ್ ರವರಿಗೆ ತಾನು ಶ್ರೀಮಂತ ಮನೆತನದವಳು ತನಗೆ ಬೇಕಾದನ್ನು ಕೊಡಿಸಬೇಕೆಂದು ಒತ್ತಾಯ ಮಾಡಿ ತಮಗೆ ಬೇಕಾದ್ದನ್ನು ಪಡೆದುಕೊಳ್ಳಲು ಆಡುವ ನಾಟಕ ಸನ್ನಿವೇಶ. ತಂದೆಗೆ ಮನೆಯ ಸಂಸಾರ ಯಾವುದೇ ಕಾರಣಕ್ಕೂ ಒಡೆಯಬಾರದು, ಇಬ್ಬಾಗವಾಗಬಾರದು ಎಂದು ಅಣ್ಣಾವ್ರ ಹತ್ತಿರ ಭಾಷೆ ಪಡೆದು ತೀರಿಹೋಗುವ ಪ್ರಸಂಗ. ತಂದೆಗೆ ಕೊಟ್ಟ ಮಾತಿನಂತೆ ಸಂಸಾರ ಯಾವುದೇ ರೀತಿಯಲ್ಲಿ ಬೇರಾಗದಂತೆ ನೋಡಿಕೊಳ್ಳುವ ಮಾತನ್ನು ಕಾಪಾಡಿಕೊಳ್ಳಲು ಮಾಡಿದ ತ್ಯಾಗದ ಮನೋಘ್ನ ಅಭಿನಯ ನಮ್ಮ ದೇವ್ರದು.

ನಂಬಿ ಕೆಟ್ಟವರಿಲ್ಲವೋ ಮಣ್ಣನ್ನು
ನಂಬಿ ಕೆಟ್ಟವರಿಲ್ಲವೋ
ಮಣ್ಣಿಂದ ಬಂದ ನಾವು
ಮಣ್ಣಲ್ಲೆ ಇರಬೇಕು ಮಣ್ಣ
ಸೇರೋ ತನಕ ಮಣ್ಣಿನ ಮಗನಾಗು

ಹೀಗೆ ತಮ್ಮ ಕೆಲಸದ ನಿಮಿತ್ತ ಹೊರಗೆ ಹೋದಾಗ ಹೆಂಡತಿ ಶ್ರೀಶಾಂತಿ ಹೇಗಾದರೂ ಮಾಡಿ ತಾನು ಶ್ರೀಮಂತದ ಮನೆಯವಳು ಹಾಗೆಯೇ ಇರಬೇಕೆಂದು ಭಾಗ ಕೇಳಿದಾಗ ಅಣ್ಣಾವೃ ಒಪ್ಪದೆ ನಂತರ ಪಂಚಾಯ್ತಿ ಯಲ್ಲಿ ನಿಧಾ೯ರ ಮಾಡಲು ಬಂದಾಗ ಕೂಡ ಅವರ ಆಣತಿಯಂತೆ ತಮ್ಮ ಇಡೀ ಕುಟುಂಬದವರ ಜೊತೆ ಮನೆ ಬಿಟ್ಟು ಹೋಗೋ ಪ್ರಸಂಗ. ತಮ್ಮ ಬಂದಾಗ ವಿಷಯ ತಿಳಿದು ತನ್ನ ಹೆಂಡತಿ ಮಾಡಿದ ನೀಚ ಕೃತ್ಯಕ್ಕೆ ಬಂದು ಹೊಡೆದು ತನ್ನ ಅಣ್ಣ ಅತ್ತಿಗೆ ಮತ್ತು ಮಕ್ಕಳನ್ನು ಹುಡುಕಿಕೊಂಡು ಕೊನೆಯಲ್ಲಿ ಮನೆಗೆ ಕರೆಯುವ ಪ್ರಸಂಗ ಕೆಟ್ಟ ಸನ್ನಿವೇಶ ನಿಮಾ೯ಣ ಮಾಡಿದ ಬಾಲಣ್ಣ ರವರಿಗೆ ಊರಿನ ಜನರು ಸರಿಯಾದ ಶಾಸ್ತಿ ಮಾಡುವ ಸನ್ನಿವೇಶ ಕೊನೆಯಲ್ಲಿ ಊರಿನ ಜನರು ತಮ್ಮ ಆಸೆ ಅಣ್ಣಾವೃ ಊರಿಗೆ ಬರಲು ಒಪ್ಪುವುದು.

ಇನ್ನೂ ಎಲ್ಲಾ ಹಾಡುಗಳೂ ಕೇಳೋಕೆ ಇಂಪಾಗಿದೆ, ಅಣ್ಣಾವ್ರ ವಸ್ತ್ರ ವಿನ್ಯಾಸ ನೋಡುಗರಿಗೆ ತುಂಬಾ ಇಷ್ಟವಾಗುವುದು, ಅವರ ಆ ಗಾಂಭೀಯ೯ ಆ ನಡೆ ನೋಡುತ್ತಿದ್ದರೆ ಅಭಿಮಾನಿಗಳು ಮೈ ಮರೆಯುತ್ತಿದ್ದರು, “ಮಧುರ ಈ ಕ್ಷಣ ನಡುಗುತಿದೆ ಛಳಿಗೆ ಮೈಮನ ” ಹಾಡಿನಲ್ಲಿ ತುಂಬಾ ಸುಂದರವಾಗಿ ಕಾಣುತ್ತಾರೆ ಮತ್ತು ಮಾಧವಿ ಕೂಡ, ಅಂಬರೀಷ್ ರವರು ಕೂಡ ಅಷ್ಟೇ ಚೆನ್ನಾಗಿ ಅಭಿನಯ ಮಾಡಿದ್ದಾರೆ.

ಮತ್ತೊಂದು ವಿಷಯ ನಿಮಗೆ ಹೇಳಬೇಕು ಡಾ. ಎಸ್ ಪಿ ಬಾಲಸುಬ್ರಹ್ಮಣ್ಯಂ ರವರು “ಜನಕನ ಮಾತ ಶಿರದಲಿ ಧರಿಸಿದ ” ಹಾಡು ಅಣ್ಣಾವ್ರಿಗಾಗಿ ಹಾಡಿರೋದು, ಹೇಗೆ ರಾಮನನ್ನು ಲಕ್ಷ್ಮಣ ಹುಡುಕುವ ಹಾಗೆ ಮತ್ತು ಅಣ್ಣಾವ್ರ ಮಗನಾಗಿ ರಾಘವೇಂದ್ರ ರಾಜ್ ಕುಮಾರ್ ರವರ ಮಗ “ವಿನಯ್ ರಾಜ್ ಕುಮಾರ್ ” ನಟಿಸಿರೋದು.

ಬಹಳ ವಷ೯ಗಳ ಅಂಬರೀಷ್ ರವರ ಕನಸು ನನಸಾಗಿದ್ದು ಈ ಚಿತ್ರ ನಟನೆಯ ಮೂಲಕ ಎಂದರೆ ತಪ್ಪಾಗಲಾರದು, ನಟಿಸುವ ಮೊದಲು ಕೆಲ ಶರತ್ತು ವಿಧಿಸಿದ್ದರು ಏನೆಂದರೆ ಯಾವುದೇ ದೃಶ್ಯದಲ್ಲಿ ಜಗಳವಾಡೋದು, ಹೊಡೆದಾಟ, ನೋವುಂಟು ಮಾಡುವ ದೃಶ್ಯ ಇರಬಾರದೆಂದು, ಹಾಗೇ ಅಣ್ಣಾವೃ ಕೂಡ ಶರತ್ತು ನೀಡಿದ್ದು ಕಟೌಟು ನಿಲ್ಲಿಸುವಾಗ ಯಾವುದೇ ತಾರತಮ್ಯ ಇರಬಾರದು , ಅವರ ದೊಡ್ಡ ಗುಣವೇನೆಂದರೆ ಅವರಿಗಿಂತ ಒಂದು ಅಡಿ ಜಾಸ್ತಿ ಕಟೌಟು ಇರಬೇಕು ಅನ್ನೋದು ಎಷ್ಟು ಕಲಾವಿದರಿಗೆ ಬರುತ್ತೆ ನೀವೇ ಹೇಳಿ…

ಕನ್ನಡ ಚಿತ್ರರಂಗದಲ್ಲಿ ಸೋದರ ಸಂಬಂಧದ ಚಿತ್ರಗಳು ಹಲವಾರು ಬಂದಿದ್ದರೂ ಈ ಚಿತ್ರ ವಿಭಿನ್ನವಾಗಿ ಪ್ರೇಕ್ಷಕರ ಮನಸ್ಸನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ.

ಮತ್ತೊಮ್ಮೆ ಹುಟ್ಟಿ ಬನ್ನಿ ಕರುನಾಡ ಧೃವತಾರೆ ಮತ್ತು ಕಲಿಯುಗ ಕಣ೯ 🙏

ಶ್ರೀನಿವಾಸ್ ಎ

ಶ್ರೀನಿವಾಸ್ ಎ

ಶ್ರೀನಿವಾಸ್. ಎ - ಇವರು ಬೆಂಗಳೂರಿನ ಕುರುಬರಹಳ್ಳಿ ನಿವಾಸಿಯಾಗಿದ್ದು ಪ್ರಸ್ತುತ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗ ಮಾಡುತ್ತಿದ್ದಾರೆ, ಬಿ. ಕಾಂ ಪದವೀಧರರಾಗಿದ್ದು, ಕಂಪ್ಯೂಟರೈಸ್ಡ್ ಫೈನಾನ್ಶಿಯಲ್ ಕೋರ್ಸ್ ಜೊತೆಗೆ ಡಿ. ಟಿ. ಪಿ ತರಬೇತಿ ಪಡಿದಿದ್ದಾರೆ, ಹಲವಾರು ಸಂಸ್ಥೆಯಲ್ಲಿ ಕೆಲಸ ಮಾಡಿದ ಅನುಭವ ,ಹುಟ್ಟಿನಿಂದ ಅಣ್ಣಾವ್ರ ಅಭಿಮಾನಿ, ಚಲನಚಿತ್ರಗಳು, ಹಾಡುಗಳೆಂದರೆ ಬಹಳ ಇಷ್ಟವಾದವು, ಗಾಯಕರೂ ಕೂಡ, ರಾಜ್ಯ ಮಟ್ಟದ ಗಾಯನ ಸ್ಪಧೆ೯ಯಲ್ಲಿ ಭಾಗಿ , ಗಾಯನ ಕ್ಷೇತ್ರದಲ್ಲಿ ಹಲವು ಬಾರಿ ಪ್ರಯತ್ನ ಸಫಲವಾಗಿಲ್ಲ, ಹೆಚ್ಚಾಗಿ ರಾಜವಂಶದ ಮೇಲೆ ಅಭಿಮಾನ, ನಾನು ಹಾಗೂ ಹೀಗೂ ಲೇಖನ ಬರೆಯೋದಕ್ಕೆ ಅಪ್ಪಾಜಿ ಆಶೀವಾ೯ದ, ಚಿತ್ರರಂಗದ ಕೆಲವು ವಿಶಿಷ್ಟ ವಿಷಯಗಳ ಬಗ್ಗೆ ತಾನೇ ಅಲ್ಲಿ ಇಲ್ಲಿ ಸಂಶೋಧಿಸಿ, ಕೇಳಿ, ಓದಿ ತಿಳಿದ ವಿಷಯಗಳನ್ನೆಲ್ಲಾ ಒಂದೆಡೆ ಕೂಡಿಟ್ಟು, ಚಿತ್ರೋದ್ಯಮದ ಓದುಗರಿಗೆ ಹಂಚಿಕೊಳ್ಳಲಿದ್ದಾರೆ, ಚಿತ್ರ ಜಗತ್ತಿನ ಬಗ್ಗೆ ಹೆಚ್ಚಿನ ಒಲವು ಜೊತೆಗೆ ಕೈಲಾದ ಸಮಾಜ ಸೇವೆ, ಕನ್ನಡ ನಾಡಿನ ಸಂಘದಲ್ಲಿ ಸದಸ್ಯನಾಗಿ ಸೇವೆ, ಬಿಡುವಿನ ವೇಳೆಯಲ್ಲಿ ಸಮಯ ಸಿಕ್ಕಾಗ ಹಳೇ ಕಲಾವಿದರ ಭೇಟಿ ಮಾಡಿ ಅವರ ಜೀವನ ಕುರಿತು ಮಾಹಿತಿ ಕಲೆ ಹಾಕಿ ಓದುಗರಿಗೆ ತಿಳಿಸುವುದು. ಚಿತ್ರ ವಿಮರ್ಶೆ ಮಾಡಿ ಜನರಿಗೆ ತಿಳಿಸುವುದು, ಸಿನಿಮಾದಲ್ಲಿ ಹೆಚ್ಚಿನ ಆಸಕ್ತಿ, ಬೆಳ್ಳಿತೆರೆಯ ಮೇಲೆ ಬರುವ ಹಂಬಲ, ಶ್ರೀನಿವಾಸ್ ರವರು ಚಿತ್ರೋದ್ಯಮ.ಕಾಂ ಬರಹಗಾರರ ಬಹು ಮುಖ್ಯ ಸದಸ್ಯ, ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯ ಲೇಖಕರಿಗೆ ಸ್ಪೂರ್ತಿ, ಶ್ರೀನಿವಾಸ್ ರವರ ಲೇಖನಗಳಿಗೆ ನಿಮ್ಮದೊಂದು ಮೆಚ್ಚುಗೆಯಿರಲಿ. ಜೈ ಕರ್ನಾಟಕ ಜೈ ಕನ್ನಡಿಗ ಜೈ ರಾಜಣ್ಣ 🙏

Leave a Reply