ಓಂ – 26 ಶಿವಣ್ಣ- 35 ರ ವಿಶೇಷ

ಐ ಲವ್ ಯೂ ಯೂ ಮಸ್ಟ್ ಲವ್ ಮಿ ‘ ಈ ಸಾಲುಗಳು ಕೇಳಿದಾಗ ನಮ್ಮ ನೆನಪಿಗೆ ಬರೋದು ರಿಯಲ್ ಸ್ಟಾರ್ ಉಪೇಂದ್ರ ರವರ ಅಧ್ಭುತ ನಿದೇ೯ಶನದಲ್ಲಿ ಭೂಗತ ಜಗತ್ತಿನ ಅಸಲಿ ಮುಖವಾಡ ತೋರಿಸಿದ “ಓಂ” ಚಿತ್ರ ಇಂದಿಗೆ ಬಿಡುಗಡೆಯಾಗಿ 26 ವಷ೯ಗಳು.

ಒಬ್ಬ ಸಾಮಾನ್ಯ ಬ್ರಾಹ್ಮಣ ಯುವಕ ಎಲ್ಲರಂತೆ ಕಾಲೇಜಿಗೆ ಹೋಗಿ ಬಂದು ತಮ್ಮ ತಂದೆ ತಾಯಿ ತಂಗಿ ಜೊತೆ ಖುಷಿಯಲ್ಲಿರುವ ಸಂದಭ೯ ಇದ್ದಕ್ಕಿದ್ದ ಹಾಗೆ ಕಾಲೇಜಿನಲ್ಲಿ ಕೆಲ ಗುಂಪು “ಸತ್ಯಮೂತಿ೯” ರನ್ನು ರೇಗಿಸುವುದು, ತೊಂದರೆ ಕೊಡುವುದು ಹೀಗಿರುವಾಗ ನಾಯಕಿ ಮಧು ಆ ಗುಂಪಿನವರ ಜೊತೆ ತಮಾಷೆಗೆ ಇದ್ದದ್ದನ್ನು ನಿಜ ಎಂದು ತಿಳಿದು ಅವರ ಮನಸಲ್ಲಿ ಪ್ರೇಮ ಶುರುವಾಗಿದೆ ಎಂದು ತಿಳಿದು ಸತ್ಯ ಗೆ ಹೊಡೆಯುವ ಸನ್ನಿವೇಶ ಮಧ್ಯದಲ್ಲಿ ನಾಯಕಿ ಬಂದು ಬಿಡಿಸುವುದು ಮುಗ್ಧ ಯುವಕನಿಗೆ ಪ್ರೀತಿಯ ಹುಚ್ಚೆಬ್ಬಿಸಿ ನಾಟಕವಾಡಿ ಅವನ ಮನಸ್ಸಲ್ಲಿ ಪ್ರೇಮದ ಕೋಟೆ ಕಟ್ಟಿಸುವುದು, ನಾಯಕಿ ಪ್ರೀತಿಯ ನಾಟವಾಡಲು ಕಾರಣ ಅವರ ತಮ್ಮನನ್ನು ಕೊಲೆ ಮಾಡಿರುವ ಸೇಡನ್ನು ತೀರಿಸಿಕೊಳ್ಳಲು ಈ ಪ್ಲಾನ್ ಮಾಡಿ ನಾಯಕನಿಗೆ ಮೋಸ ಮಾಡುತ್ತಾರೆ,
ಮೊಟ್ಟ ಮೊದಲ ಬಾರಿಗೆ ಬ್ರಾಹ್ಮಣ ರಾದವರು ಲಾಂಗ್ ಹಿಡಿಯುವ ಹಾಗೆ ಮಾಡೋದು, ಅವರ ಮನೆಯವರಿಂದ ಎಲ್ಲರನ್ನೂ ದೂರ ಮಾಡುವುದು, ನಂತರ ನೀನಂದ್ರೆ ನನಗೆ ಇಷ್ಟ ಇಲ್ಲ, ನಿನ್ನನ್ನು ನಾನು ಪ್ರೀತಿ ಮಾಡಿಲ್ಲ, ನಿನ್ ಮೇಲೆ ಆ ರೀತಿ ಭಾವನೆ ಬರಲ್ಲ ಎನ್ನುವುದು.

ಈ ಚಿತ್ರದಲ್ಲಿ ಭೂಗತ ದೊರೆಗಳಿಗೂ ತಲೆಕೆಡಿಸುತ್ತೆ ಈ ಕಥೆ, ನಿಜವಾದ ಪ್ರೇಮ ಹೇಗಾಗೋದು ಅನ್ನೋದಕ್ಕೆ ಈ ಚಿತ್ರ ಉದಾಹರಣೆ, ಬೆಕ್ಕಿನ ಕಣ್ಣು ರಾಜೇಂದ್ರ, ಕೊರಂಗು ಕೃಷ್ಣ, ತನ್ವೀರ್ ಅಹಮದ್ ಮತ್ತು ಜೇಡರಹಳ್ಳಿ ಕೃಷ್ಣ ರವರಿಗೂ ಸಮನಾಗಿ ನಿದೇ೯ಶಕರು ಪಾತ್ರ ನೀಡಿದ್ದಾರೆ,

ಕೊನೆಯಲ್ಲಿ ತನ್ನ ಪ್ರೀತಿಯನ್ನು ಪಡೆಯಲು ಹೇಗೆಲ್ಲಾ ಪ್ರಯತ್ನ ಮಾಡುತ್ತಾರೆ ಅನ್ನೋದು ಇದಕ್ಕಾಗಿ ಎಷ್ಟು ತೊಂದರೆ ಅನುಭವಿಸುತ್ತಾರೆ ಮತ್ತು ಕೇವಲ ಸೇಡಿಗಾಗಿ ಪ್ರೀತಿಸೋದನ್ನ ಮರೆತು ನಿಜಕ್ಕೂ ಸತ್ಯ ನನ್ನ ಪ್ರೀತಿಸುವ ಬಗೆ, ಎಷ್ಟೇ ತೊಂದರೆಯಾದರೂ ಮತ್ತೆ ಪಾತಕ ಲೋಕಕ್ಕೆ ಕಳಿಸದೆ ಎಲ್ಲರ ತರಹ ಬದುಕಲು ಮತ್ತು ಸತ್ಯನನ್ನು ಹೊಸ ಮನುಷ್ಯನನ್ನಾಗಿ ಮಾಡಲು ಪ್ರಯತ್ನ ಕೊನೆಗೂ ಸಫಲವಾಗುವುದು.

ಈ ಕಥೆ ಕೇಳಿ ನಿಜವಾದ ಭೂಗತ ದೊರೆಗಳೂ ಕೂಡ ತಾವು ಎಲ್ಲರಂತೆ ಬದುಕಬೇಕೆಂಬ ಆಶಯ ಹುಟ್ಟುವುದು.

ಇನ್ನೂ ಈ ಚಿತ್ರ ಮಾಡಿದ ದಾಖಲೆ ಅಷ್ಟಿಷ್ಟಲ್ಲ.

ಭಾರತ ಚಿತ್ರರಂಗದಲ್ಲಿ 632 ಬಾರಿ ಬಿಡುಗಡೆಯಾದ ಏಕೈಕ ಕನ್ನಡ ಚಿತ್ರ.
ಅಣ್ಣಾವೃ ಚಿತ್ರಕ್ಕೆ ಹೆಸರಿಟ್ಟಿರುವುದು
ಬಿಡುಗಡೆಯಾಗಿ ಅಮೋಘ ಯಶಸ್ಸು ಕಂಡಿರುವುದು.
ಮೊಟ್ಟ ಮೊದಲ ಬಾರಿಗೆ ನಿಜವಾದ ಭೂಗತ ಲೋಕ ಪರಿಚಯ ಮಾಡಿಕಟ್ಟಿರುವುದು.
ಉಪೇಂದ್ರ ರವರು ಕಾಲೇಜು ದಿನಗಳಲ್ಲಿ ಬರೆದ ಈ ಕಥೆ ಅವರ ಕನಸು ನನಸಾಗಿದ್ದು.
ತೆಲುಗು ಮತ್ತು ಹಿಂದಿಯಲ್ಲಿ ರೀಮೇಕ್ ಆದ ಚಿತ್ರ.

ಇಂಥ ವಿಶಿಷ್ಟ ರೀತಿಯ ಚಿತ್ರ ನೀಡಿದ ನಿದೇ೯ಶಕರಾದ ಉಪೇಂದ್ರ, ನಟರಾದ ಶಿವಣ್ಣ, ಪ್ರೇಮ ಮತ್ತು ಇಡೀ ತಂಡಕ್ಕೆ, ಸಂಗೀತ ಮತ್ತು ಸಾಹಿತ್ಯ ನೀಡಿದ ಹಂಸಲೇಖ, ನಿಮಾ೯ಪಕರಾದ ಪಾವ೯ತಮ್ಮ ರಾಜ್ ಕುಮಾರ್ ಹಾಗೂ ಹೆಸರಿಟ್ಟ ಬಿಗ್ ಬಾಸ್ ರವರಿಗೆ ಅನಂತ ಅನಂತ ಧನ್ಯವಾದಗಳು ಇಂಥ ಚಿತ್ರ ಮತ್ತೊಮ್ಮೆ ಬರಲಿ.

ಇನ್ನೊಂದು ವಿಷಯ ಇದೇ ಸಂದರ್ಭದಲ್ಲಿ

ಮೇ ತಿಂಗಳ 19 ನೇ ತಾರೀಖು ಎರಡು ಸ್ವೀಟ್ ನ್ಯೂಸ್ ಒಂದು ಶಿವಣ್ಣ ರವರ ಓಂ ಚಿತ್ರ ಬಿಡುಗಡೆಯಾದ ದಿನ ಮತ್ತೊಂದು

“ಜನುಮದ ಜೋಡಿ” ದೊಡ್ಮನೆ ಆದಶ೯ ದಂಪತಿಗಳು ಕರುನಾಡ ಚಕ್ರವರ್ತಿ, ಎವರ್ ಗ್ರೀನ್ ಚಾಮಿ೯ಂಗ್ ಹೀರೋ ಡಾ ಶಿವರಾಜ್ ಕುಮಾರ್ ಮತ್ತು ಗೀತ ಮೇಡಂ ರವರು ವಿವಾಹವಾಗಿ ಇಂದಿಗೆ 35 ವಷ೯ಗಳು, “ರಾಮನಿಗಾಗಿ ಗೀತ, ಶಿವುಗಾಗಿ ಗೀತ ” ಸಾಲುಗಳು ಇವರಿಗೆ ಹೇಳಿ ಮಾಡಿಸಿದ ಹಾಗಿದೆ. ಮಕ್ಕಳ ಉತ್ತಮ ಭವಿಷ್ಯವನ್ನು ರೂಪಿಸುವಲ್ಲಿ ಇವರ ಪಾತ್ರ ಬಹಳ ದೊಡ್ಡದು, ಶಿವಣ್ಣ ರವರ ಆರೋಗ್ಯ ಕಾಳಜಿ, ಸಮಾಜ ಸೇವೆ ಸಹ ಮಾಡ್ತಿರೋದು ಅಭಿಮಾನಿಗಳಿಗೆ ಹೆಮ್ಮೆಯ ವಿಚಾರ. ಅವರ ದಾಂಪತ್ಯ ಜೀವನ ಸುಖಕರವಾಗಿರಲಿ ಎಂದು ಆಶಿಸೋಣ 💐💜🙏

ಶ್ರೀನಿವಾಸ್ ಎ

ಶ್ರೀನಿವಾಸ್ ಎ

ಶ್ರೀನಿವಾಸ್. ಎ - ಇವರು ಬೆಂಗಳೂರಿನ ಕುರುಬರಹಳ್ಳಿ ನಿವಾಸಿಯಾಗಿದ್ದು ಪ್ರಸ್ತುತ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗ ಮಾಡುತ್ತಿದ್ದಾರೆ, ಬಿ. ಕಾಂ ಪದವೀಧರರಾಗಿದ್ದು, ಕಂಪ್ಯೂಟರೈಸ್ಡ್ ಫೈನಾನ್ಶಿಯಲ್ ಕೋರ್ಸ್ ಜೊತೆಗೆ ಡಿ. ಟಿ. ಪಿ ತರಬೇತಿ ಪಡಿದಿದ್ದಾರೆ, ಹಲವಾರು ಸಂಸ್ಥೆಯಲ್ಲಿ ಕೆಲಸ ಮಾಡಿದ ಅನುಭವ ,ಹುಟ್ಟಿನಿಂದ ಅಣ್ಣಾವ್ರ ಅಭಿಮಾನಿ, ಚಲನಚಿತ್ರಗಳು, ಹಾಡುಗಳೆಂದರೆ ಬಹಳ ಇಷ್ಟವಾದವು, ಗಾಯಕರೂ ಕೂಡ, ರಾಜ್ಯ ಮಟ್ಟದ ಗಾಯನ ಸ್ಪಧೆ೯ಯಲ್ಲಿ ಭಾಗಿ , ಗಾಯನ ಕ್ಷೇತ್ರದಲ್ಲಿ ಹಲವು ಬಾರಿ ಪ್ರಯತ್ನ ಸಫಲವಾಗಿಲ್ಲ, ಹೆಚ್ಚಾಗಿ ರಾಜವಂಶದ ಮೇಲೆ ಅಭಿಮಾನ, ನಾನು ಹಾಗೂ ಹೀಗೂ ಲೇಖನ ಬರೆಯೋದಕ್ಕೆ ಅಪ್ಪಾಜಿ ಆಶೀವಾ೯ದ, ಚಿತ್ರರಂಗದ ಕೆಲವು ವಿಶಿಷ್ಟ ವಿಷಯಗಳ ಬಗ್ಗೆ ತಾನೇ ಅಲ್ಲಿ ಇಲ್ಲಿ ಸಂಶೋಧಿಸಿ, ಕೇಳಿ, ಓದಿ ತಿಳಿದ ವಿಷಯಗಳನ್ನೆಲ್ಲಾ ಒಂದೆಡೆ ಕೂಡಿಟ್ಟು, ಚಿತ್ರೋದ್ಯಮದ ಓದುಗರಿಗೆ ಹಂಚಿಕೊಳ್ಳಲಿದ್ದಾರೆ, ಚಿತ್ರ ಜಗತ್ತಿನ ಬಗ್ಗೆ ಹೆಚ್ಚಿನ ಒಲವು ಜೊತೆಗೆ ಕೈಲಾದ ಸಮಾಜ ಸೇವೆ, ಕನ್ನಡ ನಾಡಿನ ಸಂಘದಲ್ಲಿ ಸದಸ್ಯನಾಗಿ ಸೇವೆ, ಬಿಡುವಿನ ವೇಳೆಯಲ್ಲಿ ಸಮಯ ಸಿಕ್ಕಾಗ ಹಳೇ ಕಲಾವಿದರ ಭೇಟಿ ಮಾಡಿ ಅವರ ಜೀವನ ಕುರಿತು ಮಾಹಿತಿ ಕಲೆ ಹಾಕಿ ಓದುಗರಿಗೆ ತಿಳಿಸುವುದು. ಚಿತ್ರ ವಿಮರ್ಶೆ ಮಾಡಿ ಜನರಿಗೆ ತಿಳಿಸುವುದು, ಸಿನಿಮಾದಲ್ಲಿ ಹೆಚ್ಚಿನ ಆಸಕ್ತಿ, ಬೆಳ್ಳಿತೆರೆಯ ಮೇಲೆ ಬರುವ ಹಂಬಲ, ಶ್ರೀನಿವಾಸ್ ರವರು ಚಿತ್ರೋದ್ಯಮ.ಕಾಂ ಬರಹಗಾರರ ಬಹು ಮುಖ್ಯ ಸದಸ್ಯ, ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯ ಲೇಖಕರಿಗೆ ಸ್ಪೂರ್ತಿ, ಶ್ರೀನಿವಾಸ್ ರವರ ಲೇಖನಗಳಿಗೆ ನಿಮ್ಮದೊಂದು ಮೆಚ್ಚುಗೆಯಿರಲಿ. ಜೈ ಕರ್ನಾಟಕ ಜೈ ಕನ್ನಡಿಗ ಜೈ ರಾಜಣ್ಣ 🙏

Leave a Reply