ಕನ್ನಡ ಚಿತ್ರರಂಗದ ಶೋ ಮ್ಯಾನ್ ಕನಸುಗಾರ ಕ್ರೇಜಿಸ್ಟಾರ್ ರವಿಚಂದ್ರನ್

ವಿ.ರವಿಚಂದ್ರನ್  ಕನ್ನಡ ಚಿತ್ರರಂಗ ಕಂಡ ಬಹುಮುಖ ಪ್ರತಿಭೆ ಹೊಂದಿರುವ ಜನಪ್ರಿಯ ನಟರು. ಇವರಲ್ಲಿ ಒಂದು ಅಥವಾ ಎರಡು ಪ್ರತಿಭೆ ಇದ್ದರೆ ವರ್ಣಿಸಲು ಸಾಧ್ಯವಿತ್ತು. ಆದರೆ ಇವರಲ್ಲಿ ಪ್ರತಿಭೆಯ ಸಾಗರವೇ ಇದ್ದು ಒಬ್ಬ ಸಾಮಾನ್ಯ ಮಾನವನಾದ ನಾನು ಈ ಸಾಗರವನ್ನು ಹೇಗೆ ವರ್ಣಿಸಬೇಕೆಂದು  ನನಗೆ ತಿಳಿಯುತ್ತಿಲ್ಲ. ಕನಸುಗಾರ, ಚಿತ್ರ ಬ್ರಹ್ಮ, ತಾಂತ್ರಿಕತೆಯ ಮಾಂತ್ರಿಕ, ರವಿಮಾಮ, ಕನ್ನಡದ ಶೋ ಮ್ಯಾನ್ ಇವರಿಗಿರುವ ಒಂದೇ,ಎರಡೇ. ಅಭಿಮಾನಿಗಳು ನೀಡಿರುವ ಬಿರುದುಗಳೇ ಕನ್ನಡ ಚಿತ್ರರಂಗದಲ್ಲಿ ಇವರು ಮಾಡಿದ ಸಾಧನೆಗಳೇ ಸಾಕ್ಷಿಯಾಗಿವೆ.

ಕನ್ನಡ ಚಿತ್ರರಂಗಕ್ಕೆ ಶ್ರೀಮಂತಿಕೆ ಮತ್ತು ಬೆಳ್ಳಿ ತೆರೆಗೆ ಹೊಸ ಕಳೆಯನ್ನು ತಂದು ಕೊಟ್ಟ ಖ್ಯಾತಿಯನ್ನು ಹೊಂದಿದ್ದು ಕನ್ನಡ ಚಿತ್ರರಂಗವೇ ಇವರ ಉಸಿರಾಗಿದೆ. ಮುಖ್ಯವಾಗಿ ಇವರು ಅಪ್ಪಟ ಕನ್ನಡ ಪ್ರೇಮಿ ಕೂಡ ಆಗಿರುವರು. ಮತ್ತು  ಮುಖ್ಯವಾದ ಇನ್ನೊಂದು ವಿಷಯವೇನೆಂದರೆ ಇದು ನನ್ನ ರಚನೆಯ ೫೦ ನೇ ಲೇಖನವಾಗಿದೆ.

       ಈಶ್ವರಿ ಸಂಸ್ಥೆಯ ಸ್ಥಾಪಕರಾದ ಎನ್.ವೀರಸ್ವಾಮಿ  ಮತ್ತು  ಪಟ್ಟಮ್ಮ್ ಲ್ ದಂಪತಿಯ ಮಗನಾಗಿ ರವಿಚಂದ್ರನ್ ಮೇ ೩೦, ೧೯೬೧ ರಂದು ಬೆಂಗಳೂರಿನಲ್ಲಿ ಜನಿಸಿದರು. ಇವರ ತಂದೆಯ ಹೆಸರು ಎನ್.ವೀರಸ್ವಾಮಿ. ಕನ್ನಡ ಚಿತ್ರರಂಗದ ಹೆಸರಾಂತ ನಿರ್ಮಾಪಕರಾಗಿದ್ದರು. ಆದರೆ ನನಗೆ ಇವರ ಶಿಕ್ಷಣದ ಕುರಿತು ಯಾವುದೇ ಮಾಹಿತಿ ಲಭ್ಯವಾಗಗದಿದ್ದರಿಂದ ಇಲ್ಲಿ ಬರೆಯಲು ಸಾಧ್ಯವಾಗಲಿಲ್ಲ.

ಸತತವಾಗಿ ೩೮ ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ನಟ, ನಿರ್ಮಾಪಕ, ನಿರ್ದೇಶಕ, ಚಿತ್ರ ಕಥೆಗಾರ, ಸಂಭಾಷಣೆ, ಸಂಗೀತ, ಸಾಹಿತ್ಯ ಈ ರೀತಿಯಾಗಿ ಎಲ್ಲ ವಿಭಾಗಗಳಲ್ಲೂ ಇಂದಿಗೂ ಸಕ್ರೀಯವಾಗಿದ್ದಾರೆಂದರೆ ಸಾಧಾರಣವಾದ ವಿಷಯವಲ್ಲ. ಇವರು ಪ್ರಯೋಗ ಶೀಲರು ಕೂಡ ಆಗಿರುವರು. ನಾನು ಕೂಡ ಇವರ ಅಭಿಮಾನಿಯಾಗಿದ್ದು ಕನ್ನಡ ಚಿತ್ರರಂಗದಲ್ಲಿ ಇದುವರೆಗೂ ಇವರು ಮಾಡಿದ ಸಾಧನೆಯನ್ನು ನನ್ನದೇ ಆದ ರೀತಿಯಲ್ಲಿ ವಿಶ್ಲೇಷಣೆ ಮಾಡಿ ಇಲ್ಲಿ ದಾಖಲಿಸಿದ್ದೇನೆ.       

ಇವರು ೧೯೭೧ ರಲ್ಲಿ ಬಿಡುಗಡೆಯಾದ ನಟ ಸಾರ್ವಭೌಮ ವರನಟ ಡಾ.ರಾಜಕುಮಾರ್ ಮುಖ್ಯ ಪಾತ್ರದಲ್ಲಿ ನಟಿಸಿದ್ದ ಕುಲಗೌರವ ಚಿತ್ರದಲ್ಲಿ ಬಾಲ ಕಲಾವಿದನ ಪಾತ್ರವನ್ನು ನಿರ್ವಹಿಸುವುದರ ಮೂಲಕ ಕನ್ನಡ ಚಿತ್ರರಂಗವನ್ನು ಪ್ರವೇಶಿಸಿದರು. ಈ ಚಿತ್ರ ತೆರೆ ಕಂಡ ಹನ್ನೊಂದು ವರ್ಷಗಳ ನಂತರ ೧೯೮೨ ರಲ್ಲಿ ಬಹು ತಾರಾಗಣ ಹೊಂದಿದ ಖದೀಮ ಕಳ್ಳರು ಎಂಬ ಚಿತ್ರವನ್ನು ಮೊದಲ ಬಾರಿಗೆ ನಿರ್ಮಿಸಿ ಖಳನ ಪಾತ್ರವನ್ನು ನಿರ್ವಹಿಸಿದರು. ಅಲ್ಲದೇ ಈ ಚಿತ್ರದ ಮೂಲಕ ನಿರ್ಮಾಪಕರಾಗಿಯು ಬಡ್ತಿ ಪಡೆದರು.

೧೯೮೩ ರಲ್ಲಿ ತೆರೆ ಕಂಡು ಕನ್ನಡ ಚಿತ್ರರಂಗದಲ್ಲಿ ಒಂದು ಹೊಸ ಅಲೆಯನ್ನು ಸೃಷ್ಟಿಸಿದ್ದ ರೆಬೆಲ್ ಸ್ಟಾರ್ ಅಂಬರೀಷ್ ಅಭಿನಯದ ಚಕ್ರವ್ಯೂಹ ಚಿತ್ರದಲ್ಲಿ ಖಳನ ಪಾತ್ರವನ್ನು ನಿರ್ವಹಿಸಿದರು. ೧೯೮೪ ರಲ್ಲಿ ಬಿಡುಗಡೆಯಾದ ನಾನೇ ರಾಜ ಚಿತ್ರದಲ್ಲಿ ಮೊದಲ ಬಾರಿಗೆ ಪೂರ್ಣ ಪ್ರಮಾಣದ ನಾಯಕನ ಪಾತ್ರವನ್ನು ನಿರ್ವಹಿಸಿದರು.

ಸಂದೀಪ ಜೋಶಿ

ಸಂದೀಪ ಜೋಶಿ

ಸಂದೀಪ್ ಜೋಶಿ - ಇವರು ಕೊಪ್ಪಳ ಜಿಲ್ಲೆಯ ಗಂಗಾವತಿ ನಿವಾಸಿಯಾಗಿದ್ದು ಪ್ರಸ್ತುತ ಸ್ವ ಉದ್ಯೋಗದಲ್ಲಿ ತೊಡಗಿಕೊಂಡಿದ್ದಾರೆ. ಬಿ.ಎ.ಮತ್ತು ಡಿಪ್ಲೊಮಾ ಇನ್ ಹಾರ್ಟಿಕಲ್ಚರ್, ಸಿ.ಟಿ.ಟಿ.ಸಿ ತರಬೇತಿ, ರೇಕಿ ಚಿಕಿತ್ಸೆ ತರಬೇತಿಯನ್ನು ಪಡೆದಿದ್ದು 13 ವರ್ಷಗಳ ಕಾಲ ರಾಯಚೂರು, ಧಾರವಾಡ ಕೃಷಿ ವಿಶ್ವವಿದ್ಯಾಲಯ ಮತ್ತು ಬಾಗಲಕೋಟೆಯ ತೋಟಗಾರಿಕೆ ವಿಶ್ವವಿದ್ಯಾನಿಲಯದಲ್ಲಿ ಕ್ಷೇತ್ರ ಸಹಾಯಕ, ಗಣಕಯಂತ್ರ ನಿರ್ವಾಹಕ ಕೆಲಸವನ್ನು ನಿರ್ವಹಿಸಿದ್ದಾರೆ. ಇವರು ಲೇಖಕರಷ್ಟೇ ಅಲ್ಲ.‌ನಟರು ಕೂಡ. ವೃತ್ತಿಯ ಜೊತೆಗೆ ರೇಕಿ ಚಿಕಿತ್ಸೆ ಮತ್ತು ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಚಿತ್ರರಂಗದ ಕೆಲವು ವಿಶಿಷ್ಟ ವಿಷಯಗಳ ಬಗ್ಗೆ ತಾನೇ ಅಲ್ಲಿ ಇಲ್ಲಿ ಸಂಶೋಧಿಸಿ, ಕೇಳಿ, ಓದಿ ತಿಳಿದ ವಿಷಯಗಳನ್ನೆಲ್ಲಾ ಒಂದೆಡೆ ಕೂಡಿಟ್ಟು, ಚಿತ್ರೋದ್ಯಮದ ಓದುಗರೊಂದಿಗೆ ಹಂಚಿಕೊಳ್ಳಲಿದ್ದಾರೆ. ಸಂದೀಪ್‌ ಜೋಶಿ ಚಿತ್ರೋದ್ಯಮ.ಕಾಂ ಬರಹಗಾರರ ತಂಡದ ಬಹು ಮುಖ್ಯ ಸದಸ್ಯ. ಸಂದೀಪ್ ಜೋಶಿಯವರ ಲೇಖನಗಳಿಗೆ ನಿಮ್ಮದೊಂದು ಮೆಚ್ಚುಗೆಯಿರಲಿ

Leave a Reply