The Irishman

“I heard you paint houses” ಪುಸ್ತಕದಿಂದ ಪ್ರೇರಿತ ಚಿತ್ರ “The Irishman”.
ಅಮೆರಿಕಾದ ಅಪರಾಧಿ ಕುಟುಂಬಗಳ ಕತೆ ಇದು.
WW2 ಅನುಭವಿ , ಸಾಮಾನ್ಯ ಟ್ರಕ್ ಚಾಲಕ ಫ್ರಾಂಕ್( robert de niro) top hitman ಆಗೋ ಕತೆ.

ಅಚಾನಕ್ಕಾಗಿ ಸಿಗೋ ರಸೆಲ್ ನಿಂದಾಗಿ ಟ್ರಕ್ ಚಾಲಕರ ಸಂಘ, International Brotherhood of Teamsters ನ ಅಧ್ಯಕ್ಷ ಜಿಮ್ಮಿ ಹಾಫ್ಫನ (Al Pacino) ಪರಿಚಯವಾಗುತ್ತದೆ. ತನ್ನ ಅಪ್ಪ ಮತ್ತು ರಸೆಲ್ ಇಬ್ಬರನ್ನೂ ದ್ವೇಷಿಸುವ ಫ್ರಾಂಕ್‌ನ ಮಗಳು ಪೆಗ್ಗಿಗೆ ಹಾಫ್ಫ ಅಂದ್ರೆ ಪ್ರೀತಿ. Ice cream ಮೇಲೆ ಇಬ್ಬರಿಗೂ..
ಜಾನ್ ಕೆನಡಿ ಕೊಲೆಯಾದಾಗ ಸಂಭ್ರಮಿಸುವ ಹಾಫ್ಫ , ನಿಕ್ಸನ್ ಅಧ್ಯಕ್ಷನಾದಾಗಲೂ ಸಂಭ್ರಮಿಸುತ್ತಾನೆ.

ತನ್ನ egoಗೆ ಬಲಿಯಾಗೋ ಹಾಫ್ಫ ಒಂದು ಕಡೆಯಾದರೆ…
ಮಗಳಿಂದಲೂ ತಿರಸ್ಕರಿಸಲ್ಪಟ್ಟ ಫ್ರಾಂಕ್…ಆಸ್ಪತ್ರೆಯ ಅರ್ಧ ತೆರೆದ ಬಾಗಿಲಿನ ಒಳಗೆ ಬಂಧಿಯಾಗಿರುವಲ್ಲಿ ಚಿತ್ರ ಮುಗಿಯುತ್ತದೆ.

ಸೌಮ್ಯ ಹಾಸ್ಯವೂ ಸೇರಿದಂತೆ Netflix ನ ಈ ಮೂರುವರೆ ಗಂಟೆಯ ಚಿತ್ರ, ದಬಂಗ್ ಪ್ರೇಮಿಗಳಿಗೆ ದು:ಸ್ವಪ್ನ ವಾದರೂ…
God Father ಛಾಯೆಯುಳ್ಳ ಈ ಸಿನೆಮಾ Philosophical ಮತ್ತು class…

ಆಸ್ಕರ್ ನಾಮಾಂಕಿತ ಚಿತ್ರ..
At least..must watch for performance..

Rajesh Aithal

Rajesh Aithal

Leave a Reply