ಪುಟ್ಟಣ್ಣ ಕಣಗಾಲ್ ಮತ್ತು ರಾಜ್‌ಕುಮಾರ್ ಜೋಡಿಯ ಮೂರು ಚಿತ್ರಗಳಲ್ಲಿ ಇದು ಎರಡನೆಯದು. (1970)
ದಿನೇಶ್ ಕಾಮಕ್ಕೆ ಗರ್ಭಿಣಿಯಾದ ಶಾಂತಿಯ ಮಗ ಲಾರಿಯ ಅಡಿಯಲ್ಲಿ ಹುಟ್ಟುತ್ತಾನೆ.. ಹುಟ್ಟಿದೊಡನೆ ತಾಯಿಯನ್ನು ಕಳೆದುಕೊಂಡ ಪರಮೇಶಿಯನ್ನು (ರಾಜ್‍ಕುಮಾರ್) ಆರ್ ನಾಗೇಂದ್ರ ರಾವ್ ಬೆಳೆಸುತ್ತಾರೆ. ಪರಮೇಶಿ ಲಾರಿ ಡ್ರೈವರ್ ಆಗುತ್ತಾನೆ. ಇವನಿಗೆ ಇಷ್ಟ ಆಗೋದು ಕಳ್ಳೇಕಾಯಿ ಮಾರೋ ಪಾರ್ವತಿ (ಕಲ್ಪನಾ).
ದಿನೇಶ್ – ಗೌರಿಯರ(ಆದವಾನಿ ಲಕ್ಷ್ಮೀದೇವಿ) ಮಗ ಮೋಹನ (ಆರ್ ಎನ್ ಸುದರ್ಶನ್) ನಾಗೇಂದ್ರ ರಾವ್ ತಮ್ಮನ ಮಗಳನ್ನು (ರೇಣುಕಾ) ಪ್ರೀತಿಸುತ್ತಾನೆ.
ದುಷ್ಟ ದಿನೇಶ್‌ಗೆ ಬುದ್ಧಿ ಕಲಿಸುವ ಈ ಕಥೆ, ಚಿತ್ರಕಥೆ ಮತ್ತು ನಿರ್ದೇಶನ ಪುಟ್ಟಣ್ಣ ಕಣಗಾಲ್.
ಪುಟ್ಟಣ್ಣ ಕಣಗಾಲ್ ಅವರ ಚಿತ್ರಗಳ ಬಹುತೇಕ ಗೀತೆಗಳು ಬಹುಕಾಲ ಜನಮಾನಸದಲ್ಲಿ ಮನೆ ಮಾಡಿಕೊಳ್ಳುತ್ತವೆ. ಕರುಳಿನ ಕರೆ ಚಿತ್ರದ ಹಾಡುಗಳು ಕೂಡ ಇದಕ್ಕೆ ಹೊರತಾಗಿಲ್ಲ.
ಪಿಬಿಎಸ್ ಅವರ ಮೂರು ಚಂದದ ಗೀತೆಗಳಿವೆ. ಮೈಸೂರು ದಸರಾ ಎಷ್ಟೊಂದು ಸುಂದರ, ಕಂಡೇ ನಾ ಕಂಡೆ ಕಾಣದ ತಾಯಿಯ, ಹೊಡೆಯುವ ಕೈ ಒಂದು ಕಣ್ಣೊರೆಸುವ ಕೈ ಒಂದು… ಜಾನಕಿ ಅವರು ಕಳ್ಳೇಕಾಯ್ ಹಾಡು… ಅ ಆ ಇ ಈ ಕನ್ನಡದ ಅಕ್ಷರಮಾಲೆ (ಸುಮಿತ್ರಾ ಜೊತೆಗೆ) ಮತ್ತು ನನ್ನವರಿಗೆ ಯಾರು ಸಾಟಿಯೇ (ಎಲ್ ಆರ್ ಈಶ್ವರಿ ಜೊತೆಗೆ).
ಕಲ್ಪನಾ ಮತ್ತು ರಾಜ್ ಮಧ್ಯೆ ನಡೆಯುವ ಸಂಭಾಷಣೆ ಬಲು ಚಂದ.
ಕಲ್ಪನಾ ಮ್ಯಾನರಿಸಂ ಬಲು ವಿಶಿಷ್ಟ. ಈ ಕಥೆಯನ್ನು ಪುಟ್ಟಣ್ಣ ಅವರು ಅಣ್ಣಾವ್ರಿಗೇ ಬರೆದಂತೆ ಇದೆ. ನಗು ಅಳು ಪ್ರೇಮ ಕೋಪ ಎಲ್ಲಾ ಎಮೋಶನ್‌ಗಳನ್ನು ಬಲು ಸುಂದರವಾಗಿ ನಿಭಾಯಿಸಿದ್ದಾರೆ ನಟ ಸಾರ್ವಭೌಮ.