ಕವಲುದಾರಿ 2019-
ಚಿತ್ರ ವಿಮರ್ಶೆ- 4.5/5
IMDB
https://m.imdb.com/title/tt7109900/
ಹೇಮಂತ ರಾವ್ ಅವರ ಸಮರ್ಥ ನಿರ್ದೇಶನದಲ್ಲಿ ರಿಶಿಯ ಅದ್ಭುತ ಅಭಿನಯದಲ್ಲಿ, ಬಹು ಪದರವುಳ್ಳ ಥ್ರಿಲ್ಲರ್ ಕಥಾವಸ್ತು ಉಳ್ಳ ನೈಜ ಚಿತ್ರ.
ಇಂಗ್ಲೀಷ್ ನಲ್ಲಿ ಮತ್ತು ಇತ್ತೀಚೆಗೆ ಅಂಧಾಧುನ್ ತರಹ ಹಿಂದಿಯಲ್ಲಿ ಕಾಣಸಿಗುವ ನವೀನ ರೀತಿಯ ನ್ವಾರ್ ಶೈಲಿಯ ಕತೆ.
ಪೋಲೀಸ್ ಪ್ರೊಸೀಜರಲ್ ನಲ್ಲಿ ಒಬ್ಬ ಟ್ರಾಫಿಕ್ ಪೋಲೀಸಿನವನು ಮೂಗು ತೂರಿಸಿ ತನಿಖೆಗೆ ತೊಡಗಿದಾಗ ಅವನ ಮತ್ತು ಪ್ರೇಕ್ಷಕರ ನಿರೀಕ್ಷೆ ಮೀರಿದ ರಾಜಕೀಯ+ ಕ್ರೈಮ್ ಕುತಂತ್ರದದಲ್ಲಿ ಸಿಲುಕುತ್ತಾನೆ…
ಕೊನೆಯೆ ಸೀನಿನವರೆಗೂ ತಿರುವುಗಳ ಕೊಂಡಿಗಳು ನೋಡುಗನನ್ನು ಸೀಟಿನ ಅಂಚಿನಲ್ಲಿ ಕೂಡುವಂತೆ ಮಾಡುತ್ತದೆ.
ಅನಂತನಾಗ್ ಎಂತಾ ಅಪರೂಪದ ವೃದ್ಧ ಪೋಲಿಸ್ ಅಧಿಕಾರಿಯ ಪಾತ್ರ ಮಾಡಿದ್ದಾರೆ ಮತ್ತು ಅಚ್ಯುತರಾವ್ ತಮ್ಮ ಬಹುಮುಖವುಳ್ಳ ಪಾತ್ರಕ್ಕೆ ಜೀವ ತುಂಬಿದ್ದಾರೆ.
ರಿಶಿ ಬಹಳ ವಿಶ್ವಾಸಾರ್ಹ ನಾಯಕನಾಗಿ ಆಪರೇಷನ್ ಅಲಮೇಲಮ್ಮ ನಂತರ ಇದರಲ್ಲಿ ಮಿಂಚಿದ್ದಾರೆ
ಅಮೆಜ಼ಾನ್ ಪ್ರೈಮ್ ನಲ್ಲಿಯೂ ಪ್ರದರ್ಶನವಿದೆ. ಚಿತ್ರಮಂದಿರಗಳಲ್ಲದೇ
ಕನ್ನಡ ಚಿತ್ರರಸಿಕರು ನೋಡಿ ಎಂಜಾಯ್ ಮಾಡಲೇ ಬೇಕಾದ ಚಿತ್ರ.