ಕಾಡಿಗೆ ರಾಜ “ಟೈಗರ್”

ಕಾಡಿಗೆ ರಾಜ “ಟೈಗರ್ 🐯 ” ಅಸಲೀ ಫೈಟರ್ ಟೈಗರ್ 🐯 ಕಟ್ಟುಮಸ್ತಾದ ದೇಹ, ಗುಂಗುರು ಕೂದಲು, ಕೈ ತೋಳು ನೋಡುದ್ರೆ ಎಂಥವರಿಗೂ ಭಯ ಆಗುತ್ತೆ, ಕನ್ನಡ ಚಿತ್ರರಂಗದ ಅಸಲೀ ಫೈಟರ್ ಟೈಗರ್ ಪ್ರಭಾಕರ್ .

ಇವರು ಕನ್ನಡ ಚಿತ್ರವಲ್ಲದೆ ತಮಿಳು, ತೆಲುಗು, ಹಿಂದಿ ಮುಂತಾದ ಭಾಷೆಗಳಲ್ಲಿ ಅಭಿನಯಿಸಿದ್ದಾರೆ, ಫೈಟಿಂಗ್ ದೃಶ್ಯಗಳಿಗೆ ಹೇಳಿ ಮಾಡಿಸಿದ ಹಾಗೆ, ಕಾಮಿಡಿ ದೃಶ್ಯಗಳನ್ನು ಮರೆಯೋಕಾಗಲ್ಲ, ಅವರ ಧ್ವನಿಯಂತೂ ಅಭಿಮಾನಿಗಳಿಗೆ ಗಿಫ್ಟ್ ಅನ್ನಬಹುದು, ಅವರು ಕಾಮಿಡಿ ಪಾತ್ರಗಳಲ್ಲಿ ತುಂಬಾ ಚೆನ್ನಾಗಿ ನಟಿಸಿದ್ದಾರೆ. ಖಳನಾಯಕರಾಗಿ ಅಭಿಮಾನಿಗಳ ಮನಸ್ಸಿನಲ್ಲಿ ಸದಾ ಉಳಿದಿದ್ದಾರೆ. ಪೋಷಕನಟರಾಗಿ ಕೂಡ ನಟಿಸಿದ್ದಾರೆ.

ಆಕಸ್ಮಾತಾಗಿ ನೆ. ಲ ನರೇಂದ್ರ ಬಾಬು ರವರ ಆಫೀಸಿಗೆ ಒಂದು ಕೆಂಪು ಕಾರು ಒಂದು ಬಂತು, ಅಲ್ಲಿಂದ ಆಜಾನುಬಾಹು ವ್ಯಕ್ತಿ ಇಳಿತಾರೆ, ಸೀದಾ ಬಾಬು ರವರು ಆಫೀಸ್ ನಲ್ಲಿ ಇದ್ದ ಪ್ರತಿಯೊಬ್ಬರನ್ನೂ ಪರಿಚಯ ಮಾಡಿಕೊಡ್ತಾರೆ ಅಲ್ಲಿ ನಾನೂ ಕೂಡ ಇದ್ದೆ, ನನಗೂ ಕೂಡ ಪರಿಚಯ ಮಾಡಿಕೊಟ್ಟರು ಅವರ ಕೈ ಕುಲುಕುವ ಭಾಗ್ಯ ಸಿಕ್ಕಿತು, ಅವರ ಯೋಗಕ್ಷೇಮ ವಿಚಾರಿಸಿದೆ, ಚೆನ್ನಾಗಿ ಮಾತನಾಡಿದರು, ಅವರ ಕೈ ಮುಟ್ಟುತ್ತಿದ್ದಹಾಗೆ ನನಗೆ ಭಯ ಮತ್ತು ಖುಷಿ ಆಯ್ತು, ನನ್ನ ಹಣೆಬರಹಕ್ಕೆ ಆಗ ನನ್ನ ಹತ್ತಿರ ಮೊಬೈಲ್ ಇರಲಿಲ್ಲ, ನೋಡಿ ಖುಷಿ ಪಟ್ಟೆ ಮತ್ತೊಂದು ಸಲ ಚುನಾವಣಾ ಪ್ರಚಾರದಲ್ಲಿ.

ಇವರು ಅಣ್ಣಾವ್ರ ಜೊತೆ ಹಲವಾರು ಚಿತ್ರಗಳಲ್ಲಿ ಖಳನಾಯಕರಾಗಿ ಅಭಿನಯಿಸಿದ್ದಾರೆ ಗಂಧದ ಗುಡಿ, ರಾಜ ನನ್ನ ರಾಜ, ಬಡವರ ಬಂಧು,ಗಿರಿಕನ್ಯೆ,ಒಲವು ಗೆಲುವು, ತಾಯಿಗೆ ತಕ್ಕ ಮಗ, ಹುಲಿಯ ಹಾಲಿನ ಮೇವು, ನಾನೊಬ್ಬ ಕಳ್ಳ, ರವಿಚಂದ್ರ, ವಸಂತ ಗೀತ, ಹಾವಿನ ಹೆಡೆ , ಶಂಕರ್ ಗುರು, ಆಪರೇಷನ್ ಡೈಮಂಡ್ ರಾಕೆಟ್ ಇನ್ನೂ ಮುಂತಾದವು.

ಅಣ್ಣಾವ್ರಲ್ಲದೆ ವಿಷ್ಣುವಧ೯ನ್, ಅಂಬರೀಷ್, ರವಿಚಂದ್ರನ್, ರಜಿನಿಕಾಂತ್, ಶಂಕರ್ ನಾಗ್, ಅನಂತ್ ನಾಗ್,ಶಶಿಕುಮಾರ್, ಜಗ್ಗೇಶ್ ರವರ ಜೊತೆ ನಟಿಸಿರೋದು ಇಲ್ಲಿ ಸ್ಮರಿಸಬಹುದು, ಯಮಕಿಂಕರ, ಕಲಿಯುಗಭೀಮ, ಕಾಡಿನ ರಾಜ, ಚಕ್ರವ್ಯೂಹ, ಒಂಟಿಸಲಗ, ರಣಭೇರಿ, ಪ್ರೇಮಲೋಕ, ಬೆಳ್ಳಿನಾಗ, ಟೈಗರ್, ಸ್ವಾಭಿಮಾನ, ಪ್ರೇಮಿಗಳ ಸವಾಲ್, ಮುತ್ತು, ಹುಲಿಹೆಜ್ಜೆ, ಜಿಮ್ಮಿಗಲ್ಲು, ನ್ಯಾಯ ಎಲ್ಲಿದೆ, ಟೋನಿ, ಆಟೋರಾಜ ಇನ್ನೂ ಹಲವಾರು.

ಮತ್ತೊಮ್ಮೆ ಹುಟ್ಟಿ ಬನ್ನಿ 🙏 .

ಶ್ರೀನಿವಾಸ್ ಎ

ಶ್ರೀನಿವಾಸ್ ಎ

ಶ್ರೀನಿವಾಸ್. ಎ - ಇವರು ಬೆಂಗಳೂರಿನ ಕುರುಬರಹಳ್ಳಿ ನಿವಾಸಿಯಾಗಿದ್ದು ಪ್ರಸ್ತುತ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗ ಮಾಡುತ್ತಿದ್ದಾರೆ, ಬಿ. ಕಾಂ ಪದವೀಧರರಾಗಿದ್ದು, ಕಂಪ್ಯೂಟರೈಸ್ಡ್ ಫೈನಾನ್ಶಿಯಲ್ ಕೋರ್ಸ್ ಜೊತೆಗೆ ಡಿ. ಟಿ. ಪಿ ತರಬೇತಿ ಪಡಿದಿದ್ದಾರೆ, ಹಲವಾರು ಸಂಸ್ಥೆಯಲ್ಲಿ ಕೆಲಸ ಮಾಡಿದ ಅನುಭವ ,ಹುಟ್ಟಿನಿಂದ ಅಣ್ಣಾವ್ರ ಅಭಿಮಾನಿ, ಚಲನಚಿತ್ರಗಳು, ಹಾಡುಗಳೆಂದರೆ ಬಹಳ ಇಷ್ಟವಾದವು, ಗಾಯಕರೂ ಕೂಡ, ರಾಜ್ಯ ಮಟ್ಟದ ಗಾಯನ ಸ್ಪಧೆ೯ಯಲ್ಲಿ ಭಾಗಿ , ಗಾಯನ ಕ್ಷೇತ್ರದಲ್ಲಿ ಹಲವು ಬಾರಿ ಪ್ರಯತ್ನ ಸಫಲವಾಗಿಲ್ಲ, ಹೆಚ್ಚಾಗಿ ರಾಜವಂಶದ ಮೇಲೆ ಅಭಿಮಾನ, ನಾನು ಹಾಗೂ ಹೀಗೂ ಲೇಖನ ಬರೆಯೋದಕ್ಕೆ ಅಪ್ಪಾಜಿ ಆಶೀವಾ೯ದ, ಚಿತ್ರರಂಗದ ಕೆಲವು ವಿಶಿಷ್ಟ ವಿಷಯಗಳ ಬಗ್ಗೆ ತಾನೇ ಅಲ್ಲಿ ಇಲ್ಲಿ ಸಂಶೋಧಿಸಿ, ಕೇಳಿ, ಓದಿ ತಿಳಿದ ವಿಷಯಗಳನ್ನೆಲ್ಲಾ ಒಂದೆಡೆ ಕೂಡಿಟ್ಟು, ಚಿತ್ರೋದ್ಯಮದ ಓದುಗರಿಗೆ ಹಂಚಿಕೊಳ್ಳಲಿದ್ದಾರೆ, ಚಿತ್ರ ಜಗತ್ತಿನ ಬಗ್ಗೆ ಹೆಚ್ಚಿನ ಒಲವು ಜೊತೆಗೆ ಕೈಲಾದ ಸಮಾಜ ಸೇವೆ, ಕನ್ನಡ ನಾಡಿನ ಸಂಘದಲ್ಲಿ ಸದಸ್ಯನಾಗಿ ಸೇವೆ, ಬಿಡುವಿನ ವೇಳೆಯಲ್ಲಿ ಸಮಯ ಸಿಕ್ಕಾಗ ಹಳೇ ಕಲಾವಿದರ ಭೇಟಿ ಮಾಡಿ ಅವರ ಜೀವನ ಕುರಿತು ಮಾಹಿತಿ ಕಲೆ ಹಾಕಿ ಓದುಗರಿಗೆ ತಿಳಿಸುವುದು. ಚಿತ್ರ ವಿಮರ್ಶೆ ಮಾಡಿ ಜನರಿಗೆ ತಿಳಿಸುವುದು, ಸಿನಿಮಾದಲ್ಲಿ ಹೆಚ್ಚಿನ ಆಸಕ್ತಿ, ಬೆಳ್ಳಿತೆರೆಯ ಮೇಲೆ ಬರುವ ಹಂಬಲ, ಶ್ರೀನಿವಾಸ್ ರವರು ಚಿತ್ರೋದ್ಯಮ.ಕಾಂ ಬರಹಗಾರರ ಬಹು ಮುಖ್ಯ ಸದಸ್ಯ, ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯ ಲೇಖಕರಿಗೆ ಸ್ಪೂರ್ತಿ, ಶ್ರೀನಿವಾಸ್ ರವರ ಲೇಖನಗಳಿಗೆ ನಿಮ್ಮದೊಂದು ಮೆಚ್ಚುಗೆಯಿರಲಿ. ಜೈ ಕರ್ನಾಟಕ ಜೈ ಕನ್ನಡಿಗ ಜೈ ರಾಜಣ್ಣ 🙏

Leave a Reply