ಅಕ್ಟೊಬರ್ 30ನೆ ತಾರಿಕಿನ0ದು , ಕೋಮಲ ನಾಯಕನಾಗಿ ಅಭಿನಯಿಸುತ್ತಿರುವ ಹೊಸ ಸಿನಿಮಾದ ಶೀರ್ಷಿಕೆ ಅನಾವರಣಗೊಳ್ಳಲಿದೆ, ಈಸಂಧರ್ಭದಲ್ಲಿ ಸಿನಿಮಾ ತಂಡದವರು ನೂತನ ಪ್ರಯತ್ನವೊಂದನ್ನ ಮಾಡಿದ್ದಾರೆ.
ಅದೇನಂದ್ರೆ ಕರ್ನಾಟಕದ ಮಾಜಿ ಮುಖ್ಯಮಂತ್ರಿಗಳು ಹಾಗೂ ಪ್ರಭಾವಿ ರಾಜಕಾರಣಿಗಳು ಆದ ಸಿದ್ದರಾಮಯ್ಯ, H. D. ಕುಮಾರಸ್ವಾಮಿ ಮತ್ತು ಯೆಡ್ಯೂರಪ್ಪನವರ ಶೈಲಿಯಲ್ಲಿ, ಥೇಟ್ ಅವರಂತೆಯೇ ಗೇಟ್ ಅಪ್- ಮೇಕ್ ಅಪ್ ಮಾಡಿಕೊಂಡು, ಸಿನಿಮಾ ಕುರಿತಾದ ಮಾಹಿತಿಯನ್ನ ನೀಡಿದ್ದಾರೆ.
ಇದು ಬರೀ ಕರ್ನಾಟಕದ ಮುಖ್ಯಮಂತ್ರಿಗಳಷ್ಟೇ ಅಲ್ದೆ ಭಾರತದ ಪ್ರಧಾನ ಮಂತ್ರಿಗಳಾದ “ನರೇಂದ್ರ ಮೋದಿ” ಅವರಂತೆ ಅನುಕರಣೆ ಮಾಡುತ್ತ ಸಿನಿಮಾಗೆ ಶುಭ ಕೋರಿ, ಸಿನಿಮಾಗೆ ಸಂಬಂಧ ಪಟ್ಟ ವಿಷಯಗಳನ್ನಹೇಳಿಸಿದ್ದಾರೆ…
ಈ ಜಾದುಗಳನ್ನ ಮಾಡಿದ ಕಲಾವಿದ ನಮ್ಮ ಕರ್ನಾಟಕದ ಖ್ಯಾತ ಮಿಮಿಕ್ರಿ ಕಲಾವಿದ “ಮಿಮಿಕ್ರಿ ಗೋಪಿ” ಅವರು. ಅವರ ಈ ಪರಿಶ್ರಮಕ್ಕೆ ಅಭಿಮಾನಿಗಳ ಭೇಷ್ಗಿರು ಮತ್ತು ಮೆಚ್ಚುಗೆ ದೊರಕಿದೆ..