27/09/2023

CHITRODYAMA.COM

SUPER MARKET OF CINEMA NEWS

ಕನ್ನಡದ ಚಾಲಿ೯ ಚಾಪ್ಲಿನ್ ನರಸಿಂಹರಾಜು

( ಮುಂದುವರೆದ ಭಾಗ )

ಕೆಲವರು ಹುಬ್ಬಲ್ಲು ಇದ್ದರೆ ಒಂದು ರೀತಿಯ ಅಸಮಾಧಾನ, ಜೀವನ ಕುಗ್ಗಿಹೋಗುತ್ತೆ ಅನ್ನೋ ಭ್ರಮೆಲಿರೋರ ಮಧ್ಯದಲ್ಲಿ ಇದನ್ನೇ ಬಂಡವಾಳವಾಗಿ ಮಾಡಿಕೊಂಡು ಸಾಧನೆ ಮಾಡಿದ ಉದಾಹರಣೆ ಇವರೇ…

ಕೆವಲ ಹಾಸ್ಯ ನಟರಾಗಲ್ಲದೆ ನಾಯಕ ನಟರಾಗಿ ಅಭಿನಯಿಸಿದ ಚಿತ್ರಗಳು :ನಕ್ಕರೆ ಅದೇ ಸ್ವರ್ಗ, ಜಾತಕರತ್ನ ಗುಂಡಾ ಜೋಯಿಸ, ಪ್ರೊಫೆಸರ್ ಹುಚ್ಚುರಾಯ.

ಇವರು ಇಷ್ಟು ಲೀಲಾಜಾಲವಾಗಿ ನಟಿಸಲು ಕಾರಣ 27 ವಷ೯ ನಾಟಕ ಕಂಪನಿಗಳಲ್ಲಿ ಅಭಿನಯಿಸಿದ್ದು ” ಶ್ರೀ ಚಂದ್ರಮೌಳೇಶ್ವರ ನಾಟಕ ಸಭ, ಹಿರಣಯ್ಯ ಮಿತ್ರ ಮಂಡಳಿ , ಭರತ ಲಲಿತ ಕಲಾ ಸಂಘ, ಗುಂಡ ಜೋಯಿಸರ ಕಂಪನಿ, ಬೇಲೂರು ಮತ್ತು ಗುಬ್ಬಿ ಚನ್ನಬಸವೇಶ್ವರ ನಾಟಕ ಕಂಪನಿ, ಚಿತ್ರರಂಗದಲ್ಲಿ ನಟರಾಗಿ ಹೆಚ್ಚು ತೊಡಗಿಸಿಕೊಂಡರೂ ಕೂಡ ನಾಟಕ ಮಾಡುವುದನ್ನು ಬಿಡಲಿಲ್ಲ.

ಇವರ ಮಡದಿ ಶಾರದಮ್ಮ ಮಗ ನರಹರಿ ರಾಜು, ಸುಧಾ ನರಸಿಂಹರಾಜು ಹಾಗೂ ಧಮ೯ವತಿ ನರಸಿಂಹರಾಜು.ಇವರಲ್ಲಿ ಸುಧಾ ನರಸಿಂಹರಾಜು ರವರು ಹಿರಿತೆರೆಯಲ್ಲಿ ಅರುಣರಾಗ, ಶಾಂತಿ ನಿವಾಸ, ಸಂಯುಕ್ತ, ಹೃದಯ ಬಂಧನ, ಬಹದ್ದೂರ್ ಹೆಣ್ಣು, ನ್ಯಾಯಕ್ಕಾಗಿ ಸವಾಲ್, ರಾಜಕೀಯ, ಕಲ್ಯಾಣೋತ್ಸವ ಚಿತ್ರಗಳಲ್ಲಿ ನಟಿಸಿದ್ದಾರೆ , ಕಿರುತೆರೆಯ “ಗಟ್ಟಿ ಮೇಳ ” ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ, ಇವರ ಕುಟುಂಬ ಕೂಡ ಕಲಾಸೇವೆಯಲ್ಲಿ ತೊಡಗಿದ್ದಾರೆ,

ನರಸಿಂಹರಾಜು ಮತ್ತು ಅಣ್ಣಾವ್ರ ಗೆಳೆತನ ತುಂಬಾ ಚೆನ್ನಾಗಿರುತ್ತಿತ್ತು, ಯಾವುದೇ ವಿಷಯವಾದರೂ ಚಚಿ೯ಸುತ್ತಿದ್ದರು, ಕುಟುಂಬದಲ್ಲಿ ಒಬ್ಬರಾಗಿರುತ್ತಿದ್ದರು, ತನ್ನ ಮಗ ಅಪಘಾತದಲ್ಲಿ ತೀರಿಕೊಂಡಾಗ ಆ ನೋವನ್ನು ಅಣ್ಣಾವ್ರ ಹತ್ತಿರ ಹೇಳಿಕೊಂಡು ಗಳಗಳನೆ ಅತ್ತ ಸಂದಭ೯ ಅಣ್ಣಾವೃ ಅವರನ್ನು ತಬ್ಬಿಕೊಂಡು ಸಮಾಧಾನ ಮಾಡುತ್ತಿದ್ದರು.

ಮಗನ ಸಾವಿನ ಕೊರಗಿನಲ್ಲಿ ಕಾಲ ಕಳೆಯುತ್ತಿರುವಾಗ ಇದ್ದಕ್ಕಿದ್ದ ಹಾಗೆ ಹೃದಯಾಘಾತದಿಂದ ಅಸುನೀಗಿದರು. ಇವರ ಜ್ನಾಪಕಾಥ೯ವಾಗಿ “ನರಸಿಂಹರಾಜು ಪ್ರಶಸ್ತಿ ” ನೀಡುವುದು ಪ್ರಾರಂಭವಾಯಿತು.

ಒಂದು ಶೋಚನೀಯ ಸಂಗತಿ ಎಂದರೆ ಇಂಥ ಅಧ್ಭುತ ಕಲಾವಿದರನ್ನು ಗೌರವಿಸುವ ಯೋಚನೆ ಕನಾ೯ಟಕ ಮತ್ತು ಕೇಂದ್ರ ಸಕಾ೯ರ ಪ್ರಯತ್ನ ಮಾಡದಿರುವುದು.ಕಲೆಗೆ ಎಂದೂ ಸಾವಿಲ್ಲ ಪಾತ್ರಗಳು ಎಂದಿಗೂ ಜೀವಂತ, ಎಷ್ಟೇ ವರುಷಗಳು ಕಳೆದರೂ ಇಂಥ ಹಾಸ್ಯ ರತ್ನ ಅಭಿಮಾನಿಗಳ ಮನಸ್ಸಿನಲ್ಲಿ ಉಳಿಯುತ್ತಾರೆ.

Leave a Reply

Copyright © All rights reserved. | Newsphere by AF themes.