GONE GIRL(2014) genre : Psychological thriller ತಮ್ಮ ಮದುವೆಯ ೫ನೆಯ ಆನಿವರ್ಸರಿಯ ದಿನ ಮನೆಗೆ ಬಂದ ನಿಕ್‌ಗೆ ಆಶ್ಚರ್ಯ ಕಾದಿರುತ್ತದೆ , ಮಡದಿ ಅಮಿ ಕಾಣೆಯಾಗಿರುತ್ತಾಳೆ.ಇದು ದೇಶದಾದ್ಯಂತ ತುಂಬಾ sensational news ರೂಪ ಪಡೆದುಕೊಳ್ಳುತ್ತದೆ ಯಾಕೆಂದರೆ ಅಮಿಯ ಹೆತ್ತವರು ನಡೆಸಿಕೊಂಡು ಬಂದಿರುವಂತಹಾ ಪಾಪ್ಯುಲರ್ ಪುಸ್ತಕ ಸರಣಿ “ಅಮೇಝಿಂಗ್ ಅಮಿ” ಯ ಸ್ಪೂರ್ತಿ ಇವಳೆ. Detective ಬೋನಿ ಮನೆ ತುಂಬಾ ಹುಡುಕಾಡಿದಾಗ ಸಿಗುವ ನೆತ್ತರ ಕಲೆ, ಅದನ್ನು ಅರೆಬರೆ ಶುದ್ಧ ಮಾಡಿದ ಕುರುಹು..
ಆಕೆ ಗರ್ಭಿಣಿ ಎಂಬ ಮೆಡಿಕಲ್ ರಿಪೋರ್ಟ್..ಇತ್ಯಾದಿಗಳಿಂದ ಈತ ಕೊಲೆ ಮಾಡಿರಬಹುದು ಎಂಬ ಶಂಕೆ ಬೋನಿಗೆ ಬರುತ್ತದೆ.ಆದರೆ ಶವ ಸಿಗದೆ ಆಕೆಗೆ ಮುಂದುವರಿಯಲಾಗುವುದಿಲ್ಲ.
Flash back ಗೆ ಹೋದರೆ recession ನಿಂದಾಗಿ ಕೆಲಸ ಕಳಕೊಳ್ಳುವ ಇಬ್ಬರೂ ನಿಕ್‌ನ ಸ್ಥಳ ಮಿಸೋರಿಗೆ ಬರುತ್ತಾರೆ.ನಿಕ್‌ನ ಅಪ್ಪ ಅಮ್ಮ ಇರುವಲ್ಲಿಗೆ.ನಿಕ್‌ನ ಅಮ್ಮನಿಗೆ ಅಮಿ ಹತ್ತಿರವಾಗುತ್ತಾಳೆ..ನಿಕ್‌ನ ಅಪ್ಪ ತನ್ನ ಹೆಂಡತಿಗೆ ಮೋಸ ಮಾಡಿರುತ್ತಾನೆ ಎಂಬ ಮಾತು ಅಲ್ಲೆಲ್ಲೋ ಬರುತ್ತದೆ.. ಅದೇ ಊರಿನಲ್ಲಿ ಬರವಣಿಗೆಯ ಶಿಕ್ಷಕನಾದ ನಿಕ್‌ಗೆ ತುಂಬಾ ಸಣ್ಣ ಪ್ರಾಯದ ವಿದ್ಯಾರ್ಥಿನಿಯೊಂದಿಗೆ ಸಲುಗೆ ಬೆಳೆದು ಆವಾಗಾವಾಗ ಒಂದಾಗುತ್ತಿರುತ್ತಾರೆ. ,……… ಮೀಡಿಯಾ ನಿಕ್‌ನನ್ನು ಒಬ್ಬ sociopath ಎಂದು ಹಣೆಪಟ್ಟಿ ಕಟ್ಟುತ್ತದೆ… …….. ಆದರೆ…. ಇದೆಲ್ಲಾ ಅಮಿ ಮಾಡಿದ ನಾಟಕ..ತನ್ನ ಗಂಡ(My Husband) ತನ್ನಿಂದ ದೂರವಾಗುತ್ತಿರುವುದನ್ನು ಸಹಿಸದೆ , ಸರಣಿ ಸಾಕ್ಷಿಗಳನ್ನು ತಾನೇ ಸೃಷ್ಟಿಸಿ ತನ್ನನ್ನು ತನ್ನ ಗಂಡ ಕೊಲೆ ಮಾಡಿದ್ದಾನೆ ಎಂದು ರೂಪಿಸಲು ಮಾಡಿದ ನಾಟಕ..
ಮಿಸೋರಿಯಲ್ಲಿ ಕೊಲೆಗೆ ಶಿಕ್ಷೆ ಮರಣದಂಡನೆ. ಆಮೇಲೆ ತಾನು ಆತ್ಮಹತ್ಯೆ ಮಾಡುವ ಯೋಚನೆ ……… ನಿಕ್‌ನ ಲಾಯರ್ ಟಾನರ್ ಬೋಲ್ಟ್ ನ ಸಲಹೆಯ ಪ್ರಕಾರ ಆತ ಟಿವಿ ಶೋ ಒಂದರಲ್ಲಿ ಭಾವುಕನಾಗಿ ತಾನು ಅಮಿಯನ್ನು ತುಂಬಾ ಪ್ರೀತಿಸುತ್ತೇನೆ , ಅವಳಿಲ್ಲದೆ ಬದುಕಿಲ್ಲ..ಎಲ್ಲಿದ್ದರೂ ಬಾ ..ಎಂದು ಗೋಗರೆಯುತ್ತಾನೆ..(ಇನ್ನೊಮ್ಮೆ ನಾಟಕ) …….
ಮನೆ ಬಿಟ್ಟು ಹೋಗಿದ್ದ ಅಮಿಯ ಅಳಿದುಳಿದ ಹಣವನ್ನು ಯಾರೋ ಲಪಟಾಯಿಸುತ್ತಾರೆ.ಆಗ ಈಕೆಗೆ ನೆನಪಾಗುವುವುದು ಬಾಲ್ಯದ ಶ್ರೀಮಂತ ಗೆಳೆಯ ದೇಸಿ.ಈಕೆಯಿಂದ ಆತ ಮೊದಲು ಮೋಸಗೊಳಗಾಗಿದ್ದರೂ ಗೆಳತಿ ಮರಳಿ ಬಂದಳೆಂದು ಖುಷಿಯಿಂದ ಆತನ surveillance camera ಗಳಿಂದ ಸುತ್ತುವರಿದ ಲೇಕ್ ಹೌಸ್‌ಗೆ ಕರೆದೊಯ್ಯುತ್ತಾನೆ.. ಅಲ್ಲಿ ಆಕೆ ಟಿವಿಯಲ್ಲಿ ನಿಕ್‌ನ ಕ್ಷಮಾಪಣೆಯನ್ನು ವೀಕ್ಷಿಸುತ್ತಾಳೆ.(ಈ ಸಂದರ್ಭದಲ್ಲಂತೂ ಆಕೆಯ ನಟನೆ ಅಮೋಘ)..
ಅವಳಿಗನಿಸುತ್ತದೆ ” ನನ್ನ ಗಂಡ(My Husband) ಮರಳಿ ಬಂದ”… ಪುನಹಾ ಅತ್ಯಾಚಾರಕ್ಕೊಳಗಾದೆ ಎಂಬ ಸಾಕ್ಷಿ ಸೃಷ್ಟಿಸಿ..ದೇಸಿಯನ್ನು ಸರಸಕ್ಕಾಹ್ವಾನಗೈದು ( ಆತ ಮುಂದುವರಿಯದಿದ್ದರೂ) ಆತನ ಕತ್ತು ಸೀಳಿ ಕೊಲ್ಲುತ್ತಾಳೆ. …….. FBI ಈಕೆಯನ್ನು ನಂಬುತ್ತದೆ. ನಿಕ್ , ಬೋಲ್ಟ್ , ಮಾರ್ಗೋ , ಬೋನಿ ಯಾರೂ ನಂಬದಿದ್ದರೂ.. …… ಸ್ನಾನ ಮಾಡುತ್ತಾ , ಮೈಯಲ್ಲಿನ ರಕ್ತದ ಕಲೆಗಳನ್ನು ತೊಳೆಯುತ್ತಾ ನಿಕ್‌ಗೆ ಆಕೆ ಸತ್ಯ ಹೇಳುತ್ತಾಳೆ… “ನಿನಗೋಸ್ಕರ ಕೊಂದೆ- I killed for you; who else can say that? You think you’d be happy with a nice Midwestern girl? No way, baby! I’m it.” ……. ಕೊನೆಗೆ ಆಕೆ announce ಮಾಡುತ್ತಾಳೆ ..ತಾನು ಗರ್ಭಿಣಿ.. ಈಗ ಇಬ್ಬರೂ ಒಬ್ಬರನ್ನೊಬ್ಬರು ತುಂಬಾ ಹೆಚ್ಚಾಗಿ (extreme)ಅರಿತಿದ್ದಾರೆ..
ಆತನಿಗೆ ಆಕೆ ಇಷ್ಟವಿರದಿದ್ದರೂ ಗಂಡನಾಗಿ ಮುಂದುವರಿಯುತ್ತಾನೆ.. ಕೊನೆಯಲ್ಲಿ ಆಕೆ ತನ್ತನ್ನು ಪ್ರೀತಿಯಿಂದ ನೋಡುತ್ತಿದ್ದಂತೆ ತಣ್ಣನೆಯ ಧ್ವನಿಯಲ್ಲಿ “What have we done to each other? What will we do?” ನಿಕ್ ಅನ್ನುವಾಗ ಚಿತ್ರ ಕೊನೆಗೊಳ್ಳುತ್ತದೆ. ,……. Gillian Flynnನ ಅದೇ ಹೆಸರಿನ ಕಾದಂಬರಿ ಆಧಾರಿತ ಚಿತ್ರ. ಕಾದಂಬರಿಗಿಂತಲೂ ಚೆನ್ನಾಗಿದೆ ಅಂತ ಅನ್ನಿಸಿಕೊಂಡ ಈ ಚಿತ್ರವನ್ನು ನಿರ್ದೇಶಿಸಿದವರು David Fincher.
ಅಮಿಯಾಗಿ Rosamund Pike ಅಭಿನಯ ಅತ್ಯುತ್ತಮ. ಬಾಕ್ಸ್ ಆಫೀಸಿನಲ್ಲಿ ಆರು ಪಟ್ಟು ಜಾಸ್ತಿ ದುಡಿದ ಚಿತ್ರ.
ಅಮೆಝಾನ್ ಪ್ರೈಮ್ , ನೆಟ್‌ಫ್ಲಿಕ್ಸ್ ನಲ್ಲಿ ಲಭ್ಯ. …………. Sociopath conceptನ ಈ ಚಿತ್ರದಲ್ಲಿ ಒಂದು ಬೆಕ್ಕು ಆವಾಗಾವಾಗ ದರ್ಶನ ಕೊಡುತ್ತಿರುತ್ತದೆ.(QUORAನಲ್ಲಿನ ಒಂದು analysis ಪ್ರಕಾರ….. From Amy’s point of view this creation of personality is necessary for our coexistence. Even though Nick hates her, all that matters to her is that he makes it seem like he loves her. This extends to the rest of society, even though we might want people to be themselves around us, all that really matters, because it’s all that we can see, is what they choose to show us. This is a comment on our nature as social animals, that’s why the cat makes such a good contrast as a symbol. Cats are not social animals, they only care about their self interests. In my opinion the movie is pointing out the origin of our personality, and how our desires, as much as other people’s desires, shape it. And how our social nature is an extension of the cat’s selfish nature.) ….. ಇದರಲ್ಲಿನ English ಸ್ವಲ್ಪ ಕಷ್ಟ ಕಷ್ಟ..novel based ಆದದ್ದರಿಂದಲೋ ಏನೋ.. ಹೊಸ ಪ್ರಕಾರದ ಚಿತ್ರವಾದ್ದರಿಂದ ತಾಳ್ಮೆಯಿಂದ ನೋಡಿದರೆ ನಷ್ಟವಿಲ್ಲ…