“Lucy 2014”

"Lucy 2014"

ನಮ್ಮ ಮೆದುಳು ತನ್ನಲ್ಲಿರುವ ಶಕ್ತಿಯ 10% ಅನ್ನು ಮಾತ್ರ ಬಳಸಿಕೊಳ್ಳುತ್ತಿದೆ. ಆಲ್ಬರ್ಟ್ ಐನ್‌ಸ್ಟೀನ್ ನಂತಹ ವಿಜ್ಞಾನಿ ಮಾತ್ರವೇ ಮೆದುಳಿನ 20% ಬಳಕೆ ಮಾಡಿರುವುದು. ಜನಸಾಮಾನ್ಯರೆಲ್ಲ ಹತ್ತು ಪರ್ಸೆಂಟ್ ಮಾತ್ರವೇ ಬಳಸುತ್ತಿರುವುದು.

ಈ ಬಳಕೆ ಹೆಚ್ಚಾದರೆ ಏನಾಗಬಹುದು? ಒಂದು ವೇಳೆ ಮನುಷ್ಯ ತನ್ನ ಮೆದುಳಲ್ಲಿನ 100% ಅಷ್ಟನ್ನೂ ಬಳಸಿದರೆ ಮನುಷ್ಯ ಏನಾಗಬಹುದು? ಅವನಿಗೆ ಅದೆಷ್ಟು ಪವರ್ ಬರಬಹುದು?

ನಿಜಕ್ಕೂ ಇದಕ್ಕೆ ಉತ್ತರ ಇನ್ನೂ ಸಿಕ್ಕಿಲ್ಲ.

ಲೂಸಿ ಎಂಬ ಇಪ್ಪತ್ತೈದು ವರ್ಷದ ತರುಣಿ ತನಗರಿವಿಲ್ಲದೇ ಒಂದು ಡ್ರಗ್ ಜಾಲದಲ್ಲಿ ಸಿಕ್ಕು ಬೀಳುತ್ತಾಳೆ. CPH4 ಎಂಬ ಈ ಡ್ರಗ್ ಸಾಮಾನ್ಯವಾಗಿ ಗರ್ಭಿಣಿಯರ ಆರನೇ ತಿಂಗಳಿನಲ್ಲಿ ಭ್ರೂಣಕ್ಕೆ ಶಕ್ತಿ ಕೊಡಲು ನೈಸರ್ಗಿಕವಾಗಿ ಉತ್ಪತ್ತಿಯಾಗುತ್ತದೆ‌. ಅದನ್ನು ಡ್ರಗ್ ಮಾಫಿಯಾದವರು ಸಂಗ್ರಹಿಸಿ ತಾವು ಮೊದಲೇ ಆರಿಸಿದ ವ್ಯಕ್ತಿಗಳ ಕೆಳಹೊಟ್ಟೆಯಲ್ಲಿ ಆಪರೇಷನ್ ಮೂಲಕ ಸೇರಿಸಿ ಅದನ್ನು ಸ್ಮಗಲ್ ಮಾಡುತ್ತಿರುತ್ತಾರೆ.

ಲೂಸಿಗೂ ಹಾಗೆಯೇ ಆಕೆಯ ಕೆಳಹೊಟ್ಟೆಯೊಳಗೆ ಡ್ರಗ್ ಇಟ್ಟು ಹೊಲೆದಿರುತ್ತಾರೆ. ಆಗ ನಡೆಯುವ ಒಂದು ಚಿಕ್ಕ ಸಂಘರ್ಷದಲ್ಲಿ ಲೂಸಿಯ ಹೊಟ್ಟೆಗೆ ಬಲವಾದ ಪೆಟ್ಟು ಬಿದ್ದು, ಹೊಟ್ಟೆಯಲ್ಲಿರುವ ಡ್ರಗ್ ಆಕೆಯ ರಕ್ತ ಸೇರಿಬಿಡುತ್ತದೆ‌. ಇದರಿಂದ ಆಕೆಗೆ ಸೂಪರ್ ಪವರ್ ಬಂದುಬಿಡುತ್ತದೆ.

ಆ ಡ್ರಗ್ ನಿಂದಾಗಿ ಆಕೆಯ ಮೆದುಳಿನ ಬಳಕೆಯ ಶಕ್ತಿ ಹೆಚ್ಚುತ್ತಾ ಹೋಗುತ್ತದೆ. 30% ದಾಟಿದಾಗ ಆಕೆಗೆ ಸೂಕ್ಷ್ಮ ವಿಚಾರಗಳೆಲ್ಲಾ ತಿಳಿಯುತ್ತಾ ಹೋಗುತ್ತದೆ. ತನ್ನ ಬಾಲ್ಯ, ತಾನು ಹುಟ್ಟಿದ ಘಳಿಗೆ ಎಲ್ಲವೂ ನೆ‌ನಪಾಗುತ್ತದೆ. ಭೂಮಿಯ ಗುರುತ್ವ, ಭೂಮಿಯ ಚಲನೆ ಸಹಿತ ಅನುಭವವಾಗುತ್ತದೆ. ಎಲ್ಲಾ ಭಾಷೆಗಳೂ ಕರಗತವಾಗುತ್ತವೆ.‌

ಎದುರಿಗಿರುವ ಮನುಷ್ಯರನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಬಹುದಾಗಿರುತ್ತದೆ. ನಂತರ ಜಡ ವಸ್ತುಗಳೂ ಹಿಡಿತಕ್ಕೆ ಸಿಗತೊಡಗುತ್ತವೆ. ಬಹುಮುಖ್ಯವಾಗಿ ಆಕೆಗೆ ಭಯ ಅನ್ನುವುದೇ ಇಲ್ಲವಾಗಿರುತ್ತದೆ.‌ ಈಗ ಆಕೆಗೆ ತನ್ನ ಮೆದುಳಿನ 100% ಶಕ್ತಿ ಉಪಯೋಗಿಸಬೇಕು ಅಂತಾಸೆಯಾಗುತ್ತದೆ.

ಹಾಗೆ ಆದಾಗ ಏನಾಗಬಹುದು?

ಯಾರೂ ಊಹೆ ಮಾಡಲೂ ಸಾಧ್ಯವಿಲ್ಲ. ನಾವು ಇದುವರೆ್ಗೂಗೂ ಏನೆಂದುಕೊಂಡಿದ್ದೇವೆಯೋ ಅದೆಲ್ಲಾ ಬುಡಮೇಲಾಗುತ್ತದೆ. ಸಿನೆಮಾದ ಅಂತ್ಯ ಒಂದು ಚಿಕ್ಕ ಸರ್ಪ್ರೈಸ್ ಕೊಡುತ್ತದೆ. ಎಂಜಾಯ್ ಮಾಡಿ.

ಸಿನೆಮಾ ಅಮೆಜಾನ್ ಪ್ರೈಮಿನಲ್ಲಿದೆ.

Sowmya Murthy K A

Sowmya Murthy K A

ಮೈಸೂರಿನಲ್ಲಿ ವಾಸ. ವಿದ್ಯಾರ್ಹತೆ: ಎಂ ಎ ಕನ್ನಡ. ಕನ್ನಡ ಸಾಹಿತ್ಯದಲ್ಲಿ ವಿಶೇಷ ಆಸಕ್ತಿ. ಬರಹಗಾರರು, ಅಂಕಣಕಾರರು, ಬ್ಲಾಗ್ಗಿಸ್ಟ್, ಪತ್ರಿಕೋದ್ಯಮ ವಿದ್ಯಾರ್ಥಿನಿಯೂ ಹೌದು. ಪಿಜಿ ಡಿಪ್ಲೋಮಾ ಮಾಡಿರುತ್ತೇನೆ. ಹತ್ತಾರು ಲೇಖನಗಳು ಈಗಾಗಲೇ ರಾಜ್ಯದ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಪ್ರಸ್ತುತ ಶ್ರೀರಂಗಪಟ್ಟಣ ತಾಲ್ಲೂಕು ಕೃಷ್ಣರಾಜಸಾಗರ ಗ್ರಾಮ ಪಂಚಾಯಿತಿಯಲ್ಲಿ ಲೆಕ್ಕ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದೇನೆ. ತ್ರಿವಳಿ ಹೆಣ್ಣು ಮಕ್ಕಳಿದ್ದಾರೆ.

2 thoughts on ““Lucy 2014”

Leave a Reply