“💜ಹಿಂದೂಸ್ತಾನವು ಎಂದೂ ಮರೆಯದ,ಭಾರತ ರತ್ನವು ಜನ್ಮಿಸಲಿ
ಈ ಕನ್ನಡ ಮಾತೆಯ ಮಡಿಲಲ್ಲಿ ,ಈ ಕನ್ನಡ ನುಡಿಯ ಗುಡಿಯಲ್ಲಿ 💜”
“💙ಪಂಚಮ ವೇದ ಪ್ರೇಮದ ನಾದ ಪ್ರಣಯದ ,ಸರಿಗಮ ಭಾವಾನಂದ
ಹೃದಯ ಸಂಗಮ ಭಾವಾನುಬಂಧ, ರಾಗ ರಾಗಿಣಿ ಪ್ರೇಮಾನುಬಂಧ 💙”
“💚ನೀನೇ ಸಾಕಿದಾ ಗಿಣಿ ನಿನ್ನಾ ಮುದ್ದಿನಾ ಗಿಣೀ
ಹದ್ದಾಗಿ ಕುಕ್ಕಿತಲ್ಲೋ ನಿನ್ನ ಹದ್ದಾಗಿ ಕುಕ್ಕಿತಲ್ಲೋ 💚”
ಈ ಮೇಲಿನ ಹಾಡುಗಳ ಸಾಲುಗಳನ್ನು ನೋಡುತ್ತಿದ್ದರೆ ನಮಗೆ ತಕ್ಷಣ ನೆನಪಿಗೆ ಬರುವ ಹೆಸರೇ ಕನ್ನಡ ಚಿತ್ರರಂಗದಲ್ಲಿ ದಂತಕಥೆಯಾಗಿ ಚಿತ್ರರಂಗ ಆಳಿದ ನಿದೇ೯ಶಕರು ಅವರೇ ಶ್ರೀ. ಎಸ್. ಆರ್. ಪುಟ್ಟಣ್ಣ ಕಣಗಾಲ್( ಚಿತ್ರಬ್ರಮ್ಹ ).
ಇವರ ನಿದೇ೯ಶನದಲ್ಲಿ ಹಲವಾರು ಹೊಸ ನಟ, ನಟಿಯರು ಚಿತ್ರರಂಗಕ್ಕೆ ಪರಿಚಯವಾದರು ಅವರಲ್ಲಿ ಪ್ರಮುಖರು : ಕಲ್ಪನ, ಲೀಲಾವತಿ, ವಿಷ್ಣುವಧ೯ನ್, ಅಂಬರೀಷ್, ಆರತಿ, ಪದ್ಮಾವಾಸಂತಿ, ಶಿವರಾಂ, ಸುಂದರ ಕೃಷ್ಣ ಅರಸ್, ಗಂಗಾಧರ್, ಜೈ ಜಗದೀಶ್, ರಜಿನಿಕಾಂತ್, ಶ್ರೀಧರ್, ರಾಮಕೃಷ್ಣ, ಅಶೋಕ್ ,ಚಂದ್ರಶೇಖರ್ ಮತ್ತು ಕನ್ನಡ ನಿರೂಪಕಿ ಅಪಣ೯ ರವರು.
ಇವರು ನಿದೇ೯ಶಿಸಿದ ಚಿತ್ರಗಳಲ್ಲಿ ಹೆಚ್ಚು ಕಾದಂಬರಿ ಆಧಾರಿತವಾದದ್ದು, ಕನ್ನಡ ನಾಡು ನುಡಿ ಸಂಸ್ಕೃತಿ ಬಗ್ಗೆ ಹೆಚ್ಚಿನ ಒಲವು ತೋರಿಸುತ್ತಾ ಅದನ್ನು ತೆರೆಯ ಮೇಲೆ ತರುತ್ತಿದ್ದರು, ಪರಭಾಷಿಗರಿಗೆ ನಮ್ಮ ಕನ್ನಡ ನಾಡ ಬಗ್ಗೆ ಹೆಚ್ಚು ತಿಳಿಯುವ ಹಾಗೆ ಮಾಡಿದ್ದಾರೆ. ನಿಜಕ್ಕೂ ಇವರನ್ನು ಪಡೆದ ನಾವೇ ಧನ್ಯರು, ನಮ್ಮ ಕನ್ನಡ ನಾಡಿನವರು ಎಂದು ಹೆಮ್ಮೆ ಪಡಬೇಕು.
ಇವರ ನಿದೇ೯ಶನ ಪಟ್ಟಿ ಬೆಳೆಯುತ್ತಾ ಹೋಗುತ್ತದೆ, ಅದರಲ್ಲಿ ಕೆಲವು ಚಿತ್ರಗಳು…
ಗೆಜ್ಜೆಪೂಜೆ, ಕಥಾಸಂಗಮ ,ಬೆಳ್ಳಿಮೋಡ ,ರಂಗನಾಯಕಿ , ನಾಗರಹಾವು , ಬಿಳಿಹೆಂಡ್ತಿ ,ಪಡುವಾರ ಹಳ್ಳಿ ಪಾಂಡವರು ,ಧರಣಿ ಮಂಡಲ ಮಧ್ಯದೊಳಗೆ ,ಮಾನಸ ಸರೋವರ,ಅಮೃತಘಳಿಗೆ ,ಶರಪಂಜರ ,ಶುಭಮಂಗಳ ,ಎಡಕಲ್ಲು ಗುಡ್ಡದ ಮೇಲೆ ,ಧಮ೯ಸೆರೆ ,ಉಪಾಸನೆ ,ಸಾವಿರ ಮೆಟ್ಟಿಲು ,ಕಾಲೇಜುರಂಗ ,ಕಪ್ಪುಬಿಳುಪು ಮಲ್ಲಮ್ಮನ ಪವಾಡ ,ಮಸಣದ ಹೂವು ,ರುಣಮುಕ್ತಳು ಫಲಿತಾಂಶ
ಕನ್ನಡ ಭಾಷೆ ಒಂದೇ ಅಲ್ಲದೇ ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿ ಯಲ್ಲಿ ತಮ್ಮ ನಿದೇ೯ಶನ ಚತುರತೆಯನ್ನು ಜನರು ಮೆಚ್ಚುವಂತೆ ಮಾಡಿದ್ದಾರೆ.
( ಮುಂದುವರೆಯುವುದು )
ಆತ್ಮೀಯ ಮಿತ್ರರೇ ಶ್ರೀನಿವಾಸ್ ಅವರಿಗೆ ಧನ್ಯವಾದಗಳು ನಮಸ್ಕಾರ ತಮ್ಮ ಇಂದಿನ ಪುಟ್ಟಣ್ಣ ಕಣಗಾಲ್ ಲೇಖನ ಬಹಳ ಚೆನ್ನಾಗಿ ಮೂಡಿ ಬಂದಿದೆ ಸರ್ ಒಬ್ಬ ಅದ್ಭುತ ನಿರ್ದೇಶಕರು ಅಷ್ಟೇ ಮುಂಗೋಪಿ ಹಠವಾದಿ ಆದರೆ ಇದೆ ಪುಟ್ಟಣ್ಣ ನಮ್ಮ ದೇವರು ಅಪ್ಪಾಜಿ ದೇವರು ರಾಜಕುಮಾರ್ ಅವರನ್ನು ಒಂದು ಸಣ್ಣ ಪತ್ರಿಕೆ ಮಾಧ್ಯಮ ದವರು ಕೇಳಿದ ಒಂದು ಪ್ರಶ್ನೆಗೆ ತಾನು ಕೋಪಗೊಂಡು ಒಬ್ಬ ಮಹಾನ್ ಕಲಾವಿದರು ರಾಜಣ್ಣ ಅವರಿಗೆ ದ್ರೋಹ ಬಗೆದರೂ ಕೊನೆಯಲ್ಲಿ ಪುಟ್ಟಣ್ಣ ಅವರನ್ನು ನಮ್ಮ ದೇವರು ರಾಜಣ್ಣ ಆವರೇ ಹೋಗಿ ನೋಡಿ ಬಂದರು ಬಂಧುಗಳೇ ಒಬ್ಬ ಒಳ್ಳೆಯ ನಿರ್ದೇಶಕರು ಅವರಲ್ಲಿ ಒಳ್ಳೆಯ ತನ ಇರಬೇಕು ಆದರೆ ಸ್ವಾರ್ಥ ಹುಟ್ಟೇ ಕಿಚ್ಚು ಅಸೂಯೆ ಕರುಬುವ ಕೆಟ್ಟ ರಾಕ್ಷಸ ಗುಣಗಳು ಇರಬಾರದು ಸರ್ ಇಂತಹ ಅದ್ಭುತ ಲೇಖನ ಕೊಟ್ಟ ತಮಗೆ ಕೋಟಿ ಧನ್ಯವಾದಗಳು ನಮಸ್ಕಾರ ಸರ್ ಪುಟ್ಟಣ್ಣ ತಾನು ಬೆಳೆಸಿದ ಯಾವ ಕಲಾವಿದರು ಅವರ ಕೊನೆ ಗಾಲದಲ್ಲಿ ಅವರನ್ನು ನೋಡಲು ಆಸ್ಪತ್ರೆಗೆ ಬರಲಿಲ್ಲ ಸತ್ತ ಮೇಲೆ ಬಂದು ಮೊಸಳೆ ನೀರು ಬಿಟ್ಟರು ಕೊನೆ ಗಾಲದಲ್ಲಿ ಪುಟ್ಟಣ್ಣ ಕಣಗಾಲ್ ಅಪ್ಪಾಜಿ ದೇವರು ರಾಜಣ್ಣ ಅವರಿಗೆ ತಾನು ಮಾಡಿದ ದ್ರೋಹ ಬಗ್ಗೆ ಕ್ಷಮೆ ಕೇಳಿ ರಾಜಣ್ಣ ಅವರನ್ನು ಹೊಗಳಿದರು ಸರ್ ರಾಜಣ್ಣ ದೇವತಾ ಮನುಷ್ಯ ಬಂಗಾರದ ಮನುಷ್ಯ ರು ಸರ್ ಜೈಭೀಮ್ ಜೈ ರಾಜಣ್ಣ