ಜನಪ್ರಿಯ ಸಂಗೀತ ನಿರ್ದೇಶಕರು ಮತ್ತು ಗಾಯಕರು ವಿ. ಹರಿಕೃಷ್ಣ

ನೋಡೋಕೆ  ಕನಸುಗಾರ ಕ್ರೇಜಿಸ್ಟಾರ್  ವಿ. ರವಿಚಂದ್ರನ್  ಸರ್ ಥರ ಗುಂಗುರು ಕೂದಲು ಮುಖದ ಭಾವನೆಯಲ್ಲೂ ಅವರನ್ನೇ ಹೋಲುವ ಮತ್ತೊಬ್ಬ ಜನಪ್ರಿಯ ಸಂಗೀತ ನಿರ್ದೇಶಕರು ಹಾಗೂ ಗಾಯಕರು, ಸಂಗೀತ ಲೋಕದ ದಿಗ್ಗಜರು ಆದ ಜಿ.ಕೆ. ವೆಂಕಟೇಶ್ ರವರ ಮೊಮ್ಮಗಳು ಶ್ರೀಮತಿ. ವಾಣಿ ಹರಿಕೃಷ್ಣ ರವರ ಪತಿ ಮತ್ತು ಚಾಲೆಂಜಿಂಗ್ ಸ್ಟಾರ್ ದಶ೯ನ್ ಸರ್ ರವರೆಂದರೆ ಸೋದರಭಾವವಿರುವ ಸಹೃದಯಿ ಶ್ರೀ. ವಿ. ಹರಿಕೃಷ್ಣ ರವರು.

  ಇವರು ಸಂಗೀತ ನಿದೇ೯ಶಕರಾಗಿ,  ಹಿನ್ನೆಲೆ ಗಾಯಕರಾಗಿ, ನಿಮಾ೯ಪಕರಾಗಿ, ನಿದೇ೯ಶಕರಾಗಿ, ತಮ್ಮ ಸೇವೆ ಸಲ್ಲಿಸುತ್ತಿದ್ದಾರೆ.

ಇವರ ಹಾಡುಗಳು ಕೇಳುತ್ತಿದ್ದರೆ ಕಾಲಕ್ಕೆ ತಕ್ಕಂತೆ ಸಂಗೀತ ಸಂಯೋಜನೆ ಮಾಡೋದು ಇವರ ಗುಣ, ಕೆಲವು ಹಾಡುಗಳು ಕೇಳುಗರನ್ನು ಹುಚ್ಚೆದ್ದು ಕುಣಿಯುವ ಹಾಗೆ ಮಾಡಿದರೆ ಇನ್ನೂ ಕೆಲವು ಹಾಡುಗಳು ನೆನಪಿನಲ್ಲಿ ಉಳಿಯುವ ಹಾಗೆ ಮಾಡಿದೆ.

ಯುವರತ್ನ ಟೈಟಲ್ ಲಾಂಚ್  ಕಾವೇರಿ ಚಿತ್ರಮಂದಿರದಲ್ಲಿ ನಡೆದ  ಕಾಯ೯ಕ್ರಮದಲ್ಲಿ ಅವರನ್ನು ದೂರದಿಂದ ನೋಡಿದೆ ಆದರೆ ಮಾತನಾಡಿಸುವ ಅವಕಾಶ ಸಿಗಲಿಲ್ಲ. ಅವರ ಸಂಗೀತ ನಿದೇ೯ಶನದ “ದೊಡ್ಮನೆ ಹುಡುಗ ” ಅಭಿಮಾನಿಗಳೆ ನಮ್ ಮನೆ ದೇವೃ ನಾನು ಹಾಡಿದ್ದೆ.

ಇವರ ಸಿನಿ ಪಯಣ ಶುರುವಾದ ಚಿತ್ರಗಳ ಬಗ್ಗೆ ಒಂದು ನೋಟ…

🌹2006-ಜೊತೆ ಜೊತೆಯಲಿ – ಪುಣ್ಯ ಕಣೆ ಪುಣ್ಯ ಕಣೆ ಪ್ರೀತಿ ಮಾಡೋದು ( ದಿನಕರ್ ತೂಗುದೀಪ ನಿದೇ೯ಶನ ದಶ೯ನ್ ಸರ್ ಅತಿಥಿ ಪಾತ್ರ)

🌼2007-ಸ್ನೇಹನಾ ಪ್ರೀತಿನ – ಯಾರು ಈ ಭೂಮಿಗೆ ಪ್ರೀತಿಯ ತಂದರು (ಶಾಹುರಿಜ್ ಶಿಂಡೆ ನಿದೇ೯ಶನ

🎂2007-ಕೃಷ್ಣ-ನೀನು ಬಂದ ಮೇಲೆ ತಾನೆ ಇಷ್ಟು ಚಂದ ಈ ಬಾಳು ( ಗಣೇಶ್ ಅಭಿನಯ ಎಂ. ಡಿ. ಶ್ರೀಧರ್ ನಿದೇ೯ಶನ)

🦄2008-ಗಜ- ಮಾತು ನನ್ನೋಳು ಮೌನಾನು ನನ್ನೋಳು ( ಮಾದೇಶ ನಿದೇ೯ಶನ)

🍧2008-ಗಾಳಿಪಟ-ಮಿಂಚಾಗಿ ನೀನು ಬರಲು ನಿಂತಲ್ಲಿಯೇ ಮಳೆಗಾಲ ( ಯೋಗರಾಜ್ ಭಟ್ ನಿದೇ೯ಶನ)

🍭2008-ಇಂದ್ರ – ರಾಜಾ ನಿನ್ನಾಣೆ ರಾಜಾ ನಿನ್ನಾಣೆ (ವಾಸು ನಿದೇ೯ಶನ )

🍰2008-ಅಜು೯ನ್-( ಶಾಹುರಿಜ್ ಶಿಂಡೆ ನಿದೇ೯ಶನ)

🍮2008-ಪಯಣ-ಮಾನಸಗಂಗೆ ಮಾನಸಗಂಗೆ ಅವಳೇ ನನ್ನ ಅಂತರಗಂಗೆ (ಕಿರಣ್ ಗೋವಿ ನಿದೇ೯ಶನ)

🍖2008-ಪರಮೇಶ ಪಾನ್ ವಾಲ -ಶಿವರಾಜ್ ಕುಮಾರ್ ಅಭಿನಯ (ಮಹೇಶ್ ಬಾಬು ನಿರ್ದೇಶನ)

🍜2008-ನವಗ್ರಹ -ಕಣ್ ಕಣ್ಣ ಸಲಿಗೆ ಸಲಿಗೆ ಅಲ್ಲ ಸುಲಿಗೆ ( ದಿನಕರ್ ತೂಗುದೀಪ ನಿದೇ೯ಶನ)

🍎2009-ಅಂಬಾರಿ-  ಆಕಾಶ ನೀನೆ ನೀಡೊಂದು ಗೂಡು ಬಂತೀಗ ಪ್ರೀತಿ ಹಾರಿ, ಯೋಗೀಶ್ ಅಭಿನಯ  (ಎಪಿ. ಅಜು೯ನ್ ನಿದೇ೯ಶನ)

🍄2009-ಜಂಗ್ಲೀ- ಹಳೆ ಪಾತ್ರೆ ಹಳೆ ಕಬ್ಬುಣ ಹಳೆ ಪೇಪರ್ ಥರ ಹೋಯ್ ( ದುನಿಯಾ ಸೂರಿ ನಿದೇ೯ಶನ)

🍓2009-ರಾಜ್ ದಿ ಶೋಮ್ಯಾನ್ -ಪುನೀತ್ ರಾಜ್ ಕುಮಾರ್ ಸರ್ ಅಭಿನಯ, ಮುತ್ತುರಾಜ ಕಾಲಿಟ್ಟ ಸೈಡು ಬಿಡೋಲೆ ( ಪ್ರೇಮ್ ನಿದೇ೯ಶನ)

🍑2009-ವಾಯುಪುತ್ರ – ಚಿರಂಜೀವಿ ಸಜ೯ ಅಭಿನಯ (ಕಿಶೋರ್ ಸಜ೯ ನಿದೇ೯ಶನ)

🍍2009-ಅಭಯ್ – ಯಾಕೋ ಎನೂ ಯಾಕೋ ಎನೂ ಜೊತೆಯಲಿ ಬೆರೆತೆವೂ (ಮಹೇಶ್ ಬಾಬು ನಿರ್ದೇಶನ)

🍁2009-ಮಳೆಯಲಿ ಜೊತೆಯಲಿ – ನಿ ಸನಿಹಕೆ ಬಂದರೆ ಹೃದಯದ ಗತಿಯೇನು (ಪ್ರೀತಂ ಗುಬ್ಬಿ ನಿದೇ೯ಶನ)

🍀2009-ರಾಮ್-ಪುನೀತ್ ರಾಜ್ ಕುಮಾರ್ ಅಭಿನಯ, ಹೊಸ ಗಾನ ಬಜಾನ ಹಳೇ ಪ್ರೇಮ ಪುರಾಣ (ಮಾದೇಶ್ ನಿದೇ೯ಶನ)

🌼2010-ಪೊಕಿ೯-ಸಕ್ಕತ್ತಾಗೌಳೆ ಸುಮ್ನೆ ನಗ್ತಾವ್ಳೆ (ಎಂ. ಡಿ. ಶ್ರೀಧರ್ ನಿದೇ೯ಶನ)

🌺2010-ಚೆಲುವೆಯೇ ನಿನ್ನ ನೋಡಲು – ಜನುಮನ ಕೊಟ್ಟ ಅಮ್ಮ ಥ್ಯಾಂಕ್ಸ್ ಅಪ್ಪ ಥ್ಯಾಂಕ್ಸ್ (ರಘು ರಾಮ್ ನಿದೇ೯ಶನ .

🌄2010-ಜಾಕಿ-ಶಿವ ಅಂತ ಹೋಗುತ್ತಿದ್ದೆ ರೋಡಿನಲ್ಲಿ ಅಧ೯ ಟ್ಯಾಂಕು ಪೆಟ್ರೋಲ್ ಇತ್ತು ಬೈಕಿನಲ್ಲಿ (ದುನಿಯಾ ಸೂರಿ ನಿದೇ೯ಶನ)

🌅2010- ಸೂಪರ್ – ಸಿಕ್ಕಾಪಟ್ಟೆ ಇಷ್ಟ ಪಟ್ಟೆ ಇಷ್ಟ ಪಟ್ಟೆ ಸಿಕ್ಕಾಪಟ್ಟೆ, ( ಉಪೇಂದ್ರ ನಿದೇ೯ಶನ ಮತ್ತು ಅಭಿನಯ)

( ಮುಂದುವರೆಯುವುದು )

ಶ್ರೀನಿವಾಸ್ ಎ

ಶ್ರೀನಿವಾಸ್ ಎ

ಶ್ರೀನಿವಾಸ್. ಎ - ಇವರು ಬೆಂಗಳೂರಿನ ಕುರುಬರಹಳ್ಳಿ ನಿವಾಸಿಯಾಗಿದ್ದು ಪ್ರಸ್ತುತ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗ ಮಾಡುತ್ತಿದ್ದಾರೆ, ಬಿ. ಕಾಂ ಪದವೀಧರರಾಗಿದ್ದು, ಕಂಪ್ಯೂಟರೈಸ್ಡ್ ಫೈನಾನ್ಶಿಯಲ್ ಕೋರ್ಸ್ ಜೊತೆಗೆ ಡಿ. ಟಿ. ಪಿ ತರಬೇತಿ ಪಡಿದಿದ್ದಾರೆ, ಹಲವಾರು ಸಂಸ್ಥೆಯಲ್ಲಿ ಕೆಲಸ ಮಾಡಿದ ಅನುಭವ ,ಹುಟ್ಟಿನಿಂದ ಅಣ್ಣಾವ್ರ ಅಭಿಮಾನಿ, ಚಲನಚಿತ್ರಗಳು, ಹಾಡುಗಳೆಂದರೆ ಬಹಳ ಇಷ್ಟವಾದವು, ಗಾಯಕರೂ ಕೂಡ, ರಾಜ್ಯ ಮಟ್ಟದ ಗಾಯನ ಸ್ಪಧೆ೯ಯಲ್ಲಿ ಭಾಗಿ , ಗಾಯನ ಕ್ಷೇತ್ರದಲ್ಲಿ ಹಲವು ಬಾರಿ ಪ್ರಯತ್ನ ಸಫಲವಾಗಿಲ್ಲ, ಹೆಚ್ಚಾಗಿ ರಾಜವಂಶದ ಮೇಲೆ ಅಭಿಮಾನ, ನಾನು ಹಾಗೂ ಹೀಗೂ ಲೇಖನ ಬರೆಯೋದಕ್ಕೆ ಅಪ್ಪಾಜಿ ಆಶೀವಾ೯ದ, ಚಿತ್ರರಂಗದ ಕೆಲವು ವಿಶಿಷ್ಟ ವಿಷಯಗಳ ಬಗ್ಗೆ ತಾನೇ ಅಲ್ಲಿ ಇಲ್ಲಿ ಸಂಶೋಧಿಸಿ, ಕೇಳಿ, ಓದಿ ತಿಳಿದ ವಿಷಯಗಳನ್ನೆಲ್ಲಾ ಒಂದೆಡೆ ಕೂಡಿಟ್ಟು, ಚಿತ್ರೋದ್ಯಮದ ಓದುಗರಿಗೆ ಹಂಚಿಕೊಳ್ಳಲಿದ್ದಾರೆ, ಚಿತ್ರ ಜಗತ್ತಿನ ಬಗ್ಗೆ ಹೆಚ್ಚಿನ ಒಲವು ಜೊತೆಗೆ ಕೈಲಾದ ಸಮಾಜ ಸೇವೆ, ಕನ್ನಡ ನಾಡಿನ ಸಂಘದಲ್ಲಿ ಸದಸ್ಯನಾಗಿ ಸೇವೆ, ಬಿಡುವಿನ ವೇಳೆಯಲ್ಲಿ ಸಮಯ ಸಿಕ್ಕಾಗ ಹಳೇ ಕಲಾವಿದರ ಭೇಟಿ ಮಾಡಿ ಅವರ ಜೀವನ ಕುರಿತು ಮಾಹಿತಿ ಕಲೆ ಹಾಕಿ ಓದುಗರಿಗೆ ತಿಳಿಸುವುದು. ಚಿತ್ರ ವಿಮರ್ಶೆ ಮಾಡಿ ಜನರಿಗೆ ತಿಳಿಸುವುದು, ಸಿನಿಮಾದಲ್ಲಿ ಹೆಚ್ಚಿನ ಆಸಕ್ತಿ, ಬೆಳ್ಳಿತೆರೆಯ ಮೇಲೆ ಬರುವ ಹಂಬಲ, ಶ್ರೀನಿವಾಸ್ ರವರು ಚಿತ್ರೋದ್ಯಮ.ಕಾಂ ಬರಹಗಾರರ ಬಹು ಮುಖ್ಯ ಸದಸ್ಯ, ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯ ಲೇಖಕರಿಗೆ ಸ್ಪೂರ್ತಿ, ಶ್ರೀನಿವಾಸ್ ರವರ ಲೇಖನಗಳಿಗೆ ನಿಮ್ಮದೊಂದು ಮೆಚ್ಚುಗೆಯಿರಲಿ. ಜೈ ಕರ್ನಾಟಕ ಜೈ ಕನ್ನಡಿಗ ಜೈ ರಾಜಣ್ಣ 🙏

Leave a Reply