ಜಾನೆ ಜಾನ್!!!!!!?

ಗಣಿತ ಪ್ರಿಯನೊಬ್ಬ ಕೊಲೆಯ ಪ್ರಕರಣಕ್ಕೆ ತಿರುವು ನೀಡುತ್ತಾನೆ ಎಂದರೆ ನಿಮಗೆ ಆಶ್ಚರ್ಯವಾಗಬಹುದು. ಹೌದು ಗಣಿತ ಎಂದರೆ ಬಹಳಷ್ಟು ಜನರಿಗೆ ಕಬ್ಬಿಣದ ಕಡಲೆ, ಆದರೆ ಕೆಲವೊಬ್ಬರಿಗೆ ಗಣಿತ ಎಂದರೆ ಹುಚ್ಚು. ಅಂತಹ ಗಣಿತದ ಹುಚ್ಚ ಅಥವಾ ಅತೀ ಜಾಣನಾಗಿ ಅಭಿನಯಿಸಿದ ಅಜಿತ್ ಅಹಲಾವತ್ ಅವರ ಹೊಸ ನೆಟ್ಫ್ಲಿಕ್ಸ್ ಸಿನಿಮಾ ಜಾನೆ ಜಾನ್.

ಜಾನೆ ಜಾನ್

ಆ ಜಾನೆ ಜಾನ ತೇರಾ ಯೇ ಹುಸನ್ ಜವಾನ…ಎನ್ನುವ ಹಳೆಯ ಹಿಂದಿ ಹಾಡು ಆಗಾಗ ಸಿನಿಮಾ ಹಿನ್ನಲೆಯಲ್ಲಿ ಕೇಳಿಸುತ್ತದೆ, ಈ ಹಾಡು ಮಾಯಾ ( ಕರೀನಾ ಕಪೂರ್ ) ಎಂಬ ತಾಯಿ ತಾನು ಹಿಂದೆ ಬಿಟ್ಟು ಬಂದ ಬದುಕಿನ ಕಹಿ ಸತ್ಯವನ್ನು ನೆನಪಿಸಿ ಕೊಡುತ್ತದೆ, ಆದರಿಂದ ಅದೇ ಸಿನಿಮಾದ ಟೈಟಲ್ ಆಗಿ ಮೂಡಿ ಬಂದಿದೆ.ವಿದ್ಯಾ ಬಾಲನ್ ನಟಿಸಿದ ಕಹಾನಿ ಚಿತ್ರದ ನಿರ್ದೇಶಕ ಸುಜಾಯ್ ಘೋಷ್ ಹೊಸ ಮರ್ಡರ್ ಮೀಸ್ಟ್ರಿ ಒಂದನ್ನು ನೆಟ್ ಫ್ಲಿಕ್ಸ್ ವೀಕ್ಷಕರಿಗಾಗಿ ತಂದುಕೊಟ್ಟಿದ್ದಾರೆ.

ಜಾನೆ ಜಾನ್
ಜಾನೆ ಜಾನ್

ಸಿನಿಮಾ ಜಪಾನೀಯ ಕಥೆಗಾರ ಕಿಗೋ ಹೀಗಾಶಿನೋ ಅವರ ಪ್ರಖ್ಯಾತ್ ಕಾದಂಬರಿ ದಿ ಡಿವೋಷನ್ ಒಫ್ ಸಸ್ಪೆಕ್ಟ್ X ಆಧಾರಿತವಾಗಿದೆ.

ಮಾಯಾ ಮತ್ತು ಮಗಳು ತಾರ ಅವರ ನೆರೆ ಮನೆಯ ನರೇನ್ ಕಲಿಪೌಂಗ್ ಎಂಬ ಪಶ್ಚಿಮ ಬಂಗಾಳದ ಪುಟ್ಟ ಊರಿನಲ್ಲಿ ಶಾಲೆಯಲ್ಲಿ ಗಣಿತ ಟೀಚರ್ ಆಗಿ ಕೆಲಸ ಮಾಡುತ್ತಿರುತ್ತಾನೆ. ಗಣಿತದಲ್ಲಿನ ಅವನ ಆಸಕ್ತಿ ಅವನ ಜೀವನದ ಮುಖ್ಯ ಉದ್ದೇಶವಿರುತ್ತದೆ. ಇಂತಹ ಅತೀ ಜಿನಿಯಸ್ಗೆ ನೆರೆ ಮನೆಯ ಮಾಯಾ ಮೇಲೆ ಪ್ರೀತಿ ಹುಟ್ಟುತ್ತದೆ, ಆ ಪ್ರೀತಿ ಹಾಗು ಆಕರ್ಷಣೆ ಅವನನ್ನು ಕೊನೆಗೆ ಆಜೀವನ ಕಾರಾವಾಸಕ್ಕೆ ತಂದೊಡ್ಡುತ್ತದೆ. ಜಗತ್ತಿನಲ್ಲಿಯೇ ಕಠಿಣ ಗಣಿತದ ಲೆಕ್ಕ ಬಿಡಿಸಿದ ಅವನಿಗೆ ಬದುಕಿನಲ್ಲಿ ಬರುವ ಎಂಥ ಸಮಸ್ಸೆಗಳನ್ನು ನೀರು ಕುಡಿದಷ್ಟು ಸುಲಭ ಮಾಡಿ ತೋರಿಸುತ್ತಾನೆ. ಕೊಲೆಯ ಆರೋಪ ತನ್ನ ಕ್ರಶ್ ಮೇಲೆ ಬರದ ಹಾಗೆ ಉಪಾಯ ಮಾಡುತ್ತಾನೆ. ಈ ಉಪಾಯದ ಹಾದಿಯಲ್ಲಿ, ತನ್ನ ಸರಳವಾದ ಜೀವನವನ್ನೆ ಬಲಿಕೊಡುತ್ತಾನೆ. ಆಗಾಗ ‘ ದೃಶ್ಯಂ ’ ಚಿತ್ರದ ಕಥೆಯ ನೆನೆಪು ತರುತ್ತದೆ. ಅಜಿತ್ ಅಹಲಾವತ್ ಅವರ ಅಭಿನಯ ಸಕತ್ತಾಗಿದೆ…

ಜಾನೆ ಜಾನ್


ಮೊದಲ ಭಾಗದಲ್ಲಿ ರೋಚಕತೆ ನಿಮನ್ನು ಹಿಡಿದಿಡುತ್ತದೆ, ಆದ್ರೆ ಕೊನೆಯಾರ್ಧದಲ್ಲಿ ಮೂಲ ‘ಮೃತ ದೇಹ’ ಎಲ್ಲಿ ಹೋಯಿತು ಎನ್ನುವ ಸ್ಪಷ್ಟಿಕರಣ ಕೊಟ್ಟಿಲ್ಲ. ಕೊನೆಗೆ ಗೋಜಲು ಮಯವಾಗಿ ಸಿನಿಮಾ ಅಂತ್ಯಗೊಳ್ಳುತ್ತದೆ.

ಮಂಜು ಮಾಂಜಾದ ಬೆಟ್ಟದ ಪ್ರದೇಶ ಕಲಿಪೌಂಗ್ ನೋಡಲು ಹೊಸ ಫೀಲ್ ಕೊಟ್ಟರು, ಕಥೆ ಮುಂದುವರೆದಂತೆ ಹಿಡಿತ ಕಳೆದುಕೊಳ್ಳುತ್ತದೆ. ಕರೀನಾ ಕಪೂರ್ ಖಾನ್ ಎರಡನೇಯ ಇನ್ನಿಂಗ್ಸ್ ನಲ್ಲಿ, ನಟನೆ ಇನ್ನೂ ಚೆನ್ನಾಗಿ ಬರಬಹುದಿತ್ತು, ಆದರೆ ಭಾವನೆಗಳಲ್ಲಿ ವೈವಿಧ್ಯತೆ ತೋರಿಸುವಲ್ಲಿ ಕರೀನಾ ಸೋತಿದ್ದಾರೆ ಎಂದು ನನ್ನ ವಯಕ್ತಿಕ ಅಭಿಪ್ರಾಯ.

ಜಾನೆ ಜಾನ್


ಕರೀನಾ ಫಿಲಂ ಇನ್ಸ್ಟಿಟ್ಯೂ ವಿದ್ಯಾರ್ಥಿಗಳಾದ ಅಜಿತ್ ಅಹಲಾವತ್ತ ಹಾಗು ವಿಜಯ ಅವರ ಮುಂದೆ ಸಪ್ಪೆ ಅನಿಸಿದ್ದಾರೆ. ನೈಜತೆ ತೋರಿಸುವ ಸಲುವಾಗಿ ‘ನೋ ಮೇಕ್ ಅಪ್ ಲುಕ್’ ನಿಂದ, ಕರೀನಾ ಇನ್ನಷ್ಟು ಖರಾಬಾಗಿ ಕಾಣಿಸಿಕೊಂಡಿದ್ದಾರೆ. ಹಿನ್ನಲೆಯಲ್ಲೂ ಯಾವುದೇ ಒಂದು ಹಾಡು ಇರದ ಬಾಲಿವುಡ್ ಸಿನಿಮಾ ನೋಡಲು ಸಂಗೀತ ಪ್ರಿಯರಿಗೆ ಬೇಜಾರಾಗುವುದು ಸಹಜ .

ಜಾನೆ ಜಾನ್


ಒಟ್ಟಾರೆ ಸಿನಿಮಾ ಓಕೆ ಓಕೆ ಇದೆ, ಹೊಸ ಜೋಡಿ, ಕಳ್ಳ ಪೊಲೀಸ್ ಚೇಸ್ ನೋಡಲು ಒಮ್ಮೆ ಜಾನೆ ಜಾನ ನೋಡಬಹುದು.

ಲೇಖಕರು:ಮೃಣಾಲಿನಿ

admin (TNS)

admin (TNS)

ಸುಂದರ ಉದ್ಯಾನವನಗಳು, ಸಾಫ್ಟ್ವೇರ್ ಕಂಪನಿಗಳಿಂದ ಚಿರಪರಿಚಿತ ಊರು ಬೆಂಗಳೂರು.ಅಲ್ಲಿಂದ ಸುಮಾರು 100 ಕಿಲೋಮಿಟೆರ್ ದೂರದಲ್ಲಿರುವ ಊರು ಮಧುಗಿರಿ. "ಧರೆಯೊಳೆಲ್ಲೆ ಇರಲಿ ನಾನು ಮರೆಯಲಾರೆ ಮಧುಗಿರಿ" ಎಂದು ಹೊಯ್ಸಳ ದೊರೆಗಳಿಂದ ಹೊಗಳಿಸಿಕೊಂಡ ಇದೇ ಮಧುಗಿರಿ ಯ ತೊಂಡೋಟಿ ಎಂಬ ಒಂದು ಕುಗ್ರಾಮದಲ್ಲಿ ಮಧ್ಯಮ ವರ್ಗದ ಕುಟುಂಬದಲ್ಲಿ ಹುಟ್ಟಿದ ಇವರು ಅದೇ ಊರಿನಲ್ಲಿ ತಮ್ಮ ಪ್ರಾಥಮಿಕ ಶಿಕ್ಷಣ ಮುಗಿಸಿ, ತುಮಕೂರು ಹಾಗು ಬೆಂಗಳೂರಿನಲ್ಲಿ ತಮ್ಮ ಉನ್ನತ ವಿದ್ಯಾಭ್ಯಾಸ ವನ್ನು ಪೂರೈಸಿದರು. ನಂತರ ಮಲೇಷಿಯಾದ ಕೌಲಲಮ್ಪುರದಲ್ಲಿ ಕಂಪ್ಯೂಟರ್ ಇಂಜಿನಿಯರ್ (ಇಂಜಿನ್ ಗೆ ನೀರು ಹಾಕುವ) ಕೆಲಸ ಮಾಡುತ್ತಿದ್ದಾರೆ. ಎಸ್. ಎಲ್ ಭೈರಪ್ಪ, ಬೇಂದ್ರೆ ಯವರ ಕನ್ನಡ ಸಾಹಿತ್ಯದ ಜೊತೆ ಜೊತೆಗೆ ಯಂಡಮೂರಿ, ದೇವುಡು ರವರ ತೆಲುಗು ಸಾಹಿತ್ಯಗಳನ್ನು ಓದುವ ಹವ್ಯಾಸ ಗಳನ್ನೂ ಇಟ್ಟುಕೊಂಡ ಇವರು ಕೆಲವು ಕವನ ಹಾಗು ಕತೆಗಳನ್ನು ಸಹ ಬರೆದಿದ್ದಾರೆ. ಇವರ "ನಾನು ನಾನೇನಾ" ಎಂಬ ಕಾದಂಬರಿ ಇತ್ತೀಚೆಗಷ್ಟೇ ಬಿಡುಗಡೆಯಾಗಿದೆ. ಕನ್ನಡ ಚಿತ್ರೋದ್ಯಮದ ವಿಶಿಷ್ಟ ಸಂಗತಿಗಳನ್ನು ಪರಿಚಯಿಸಲೆಂಬ ಉದ್ದೇಶದಿಂದ ಚಿತ್ರೋದ್ಯಮ.ಕಾಂ ಎಂಬ ಈ ವೆಬ್ಸೈಟ್ ಅನ್ನು ತೆರೆದು ತನ್ಮೂಲಕ ಕನ್ನಡ ಚಿತ್ರೋದ್ಯಮಕ್ಕೆ ತನ್ನ ಅಳಿಲು ಸೇವೆಯನ್ನು ಸಲ್ಲಿಸುತ್ತಿದ್ದಾರೆ.

Leave a Reply