ಬಾಲಿವುಡ್ ಚಿತ್ರರಂಗದ ಜಂಪಿಂಗ್ ಜ್ಯಾಕ್ ನಟ ಜಿತೇಂದ್ರ

( ಮುಂದುವರೆದ ಭಾಗ )

ಹಿಂದಿ ಚಿತ್ರ ಬನ್ ಪೂಲ್ ತೆರೆ ಕಂಡು ಯಶಸ್ವಿಯಾಯಿತಲ್ಲದೆ ಈ ಚಿತ್ರದಲ್ಲಿನ ನೃತ್ಯ ದ ನಿರ್ವಹಣೆಯಿಂದ ಇವರಿಗೆ ಜಂಪಿಂಗ್ ಜ್ಯಾಕ್ ಎಂಬ ಬಿರುದು ಬಂದಿತು. ಅನಂತರ ಬಂದ ಸುಹಾಗ್ ರಾತ್,ಪರಿವಾರ್,ಔಲಾದ್, ಮತ್ತು ದ್ವೀಪಾತ್ರದಲ್ಲಿ ಅಭಿನಯಿಸಿದ ಜಿಗ್ರಿ ದೋಸ್ತ್ ಈ ರೀತಿಯಾಗಿ ಹಲವಾರು ಯಶಸ್ವಿ ಚಿತ್ರಗಳಲ್ಲಿ ನಟಿಸಿದ್ದಾರೆ.

೧೩ ವರ್ಷಗಳ ನಂತರ ೧೯೮೦ ರಲ್ಲಿ ಇವರು ದಕ್ಷಿಣ ಭಾರತದ ನಿರ್ದೇಶಕರಾದ ರಾಮರಾವ್ ತಾತಿನೇನಿ,ಕೆ.ಬಪ್ಪಯ್ಯ ಮತ್ತು ಕೆ.ರಾಘವೇಂದ್ರ ರಾವ್ ರವರ ರಿಮೇಕ್ ಚಿತ್ರಗಳಲ್ಲಿ ಶ್ರೀ ದೇವಿ ಮತ್ತು ಜಯಪ್ರದಾ ರಂತಹ ಜನಪ್ರಿಯ ನಾಯಕಿಯರೊಂದಿಗೆ ನಟಿಸಿದರು. ಅದರಲ್ಲೂ ೧೯೮೨ ರ ಜಸ್ಟೀಸ್ ಚೌಧರಿ,೧೯೮೩ ರ ಮವಾಲಿ,ಹಿಮ್ಮತ್ ವಾಲಾ,ಜಾನಿದುಶ್ಮನ್ ಮತ್ತು ೧೯೮೪ ರಲ್ಲಿ ತೆರೆ ಕಂಡ ತೋಫಾ ಚಿತ್ರಗಳು ವಿಮರ್ಶಕರ ಮೆಚ್ಚುಗೆಗಳಿಸದಿದ್ದರೂ ಕೂಡ ಭರ್ಜರಿ ಯಶಸ್ಸು ಕಂಡಿವೆ.

ಇವರ ೧೯೫೯ ನೇ ಇಸ್ವಿಯಿಂದ ಆರಂಭವಾದ ಚಿತ್ರ ರಂಗದ ಜೀವನದಲ್ಲಿ ಬಂದ ಸವಾಲುಗಳನ್ನು ಎದುರಿಸಿ ೨೦೦ ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಇವರು ತಮ್ಮ ಚಿತ್ರಗಳಲ್ಲಿ ಅನೇಕ ರೀತಿಯ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಇವರು ಬೆಳ್ಳಿ ತೆರೆಯಲ್ಲಿ ಅಲ್ಲದೆ ಕಿರುತೆರೆಯ ಮೆಗಾ ಧಾರಾವಾಹಿ ಕ್ಯೂಂಕಿ ಸಾಸಭಿ ಕಭಿ ಬಹೂದಿಯಲ್ಲಿ ಹಿರಿಯ ವಯಸ್ಸಿನ ಪಾತ್ರದಲ್ಲಿ ಅಭಿನಯಿಸಿದ್ದರು. ಮತ್ತು ಸೋನಿ ಎಂಟರ್ ಟೇನ್ಮಂಟ್ ಟೆಲಿವಿಷನ್ ನಲ್ಲಿ ಪ್ರಸಾರವಾದ ಝಲಕ್ ದಿಕಲಾಜಾ ಎಂಬ ನೃತ್ಯ ಸ್ಪರ್ಧೆಯ ತೀರ್ಪುಗಾರರಾಗಿಯೂ ಕಾರ್ಯನಿರ್ವಹಿಸಿದ್ದರು.

ಚಿತ್ರ ರಂಗದಲ್ಲಿ ಉನ್ನತ ಸ್ಥಾನ ಪಡೆದಿದ್ದರೂ ಅವರು ಇಂದಿಗೂ ಕೂಡ ತಮ್ಮ ಬಾಲ್ಯದಲ್ಲಿ ವಾಸವಾಗಿದ್ದ ಸ್ಥಳದ  ನೆನಪುಗಳನ್ನು ಮರೆತಿಲ್ಲ. ಅಲ್ಲದೇ ಇಂದಿಗೂ ಕೂಡ ಪ್ರತಿ ವರ್ಷ ಅಲ್ಲಿ ನಡೆಯುವ ಗಣೇಶನ ಹಬ್ಬದಲ್ಲಿ ಭಾಗವಹಿಸುತ್ತ ಬಂದಿದ್ದಾರೆ. ಇವರ ಪತ್ನಿಯ ಹೆಸರು ಶೋಭಾ ಕಪೂರ್. ಇವರಿಗೆ ತುಷಾರ್ ಕಪೂರ್ ಮತ್ತು ಏಕ್ತಾ ಕಪೂರ್ ಎಂಬ ಇಬ್ಬರು ಮಕ್ಕಳಿದ್ದಾರೆ. ಮಗ ತುಷಾರ್ ಕಪೂರ್ ಕೂಡ ಚಿತ್ರ ನಟರಾಗಿದ್ದಾರೆ. ಮತ್ತು ಮಗಳು ಏಕ್ತಾ ಕಪೂರ್ ಬಾಲಾಜಿ ಟೆಲಿಫಿಲಂ ನ ಸಂಪೂರ್ಣ ಜವಾಬ್ದಾರಿಯನ್ನು ವಹಿಸಿಕೊಂಡು ಕೆಲಸ ನಿರ್ವಹಿಸುತ್ತಿದ್ದಾರೆ. ಇವರ ಸಂಸ್ಥೆ  ಕನ್ನಡ, ತಮಿಳು, ತೆಲುಗು ಮತ್ತು ಹಿಂದಿ ಭಾಷೆಗಳಲ್ಲಿ ಹಲವಾರು ಧಾರಾವಾಹಿಗಳನ್ನು ನಿರ್ಮಿಸಿದೆ.

ಅಲ್ಲದೇ ಇವರ ಮಗಳು ಏಕ್ತಾ ಕಪೂರ್ ಇದುವರೆಗೂ ೫ ಬಾಲಿವುಡ್ ಚಿತ್ರಗಳನ್ನು ನಿರ್ಮಿಸಿದ್ದು ಎರಡು ಚಿತ್ರಗಳಲ್ಲಿ ನಟ ತುಷಾರ್ ಕಪೂರ್ ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದರು. ಇವರ ಮಗಳು ೨೦೦೨ ನೇ ಇಸ್ವಿಯಲ್ಲಿ ನಿರ್ಮಿಸಿದ ಕುಚ್ ತೋ ಹೇ ಎಂಬ ಹಿಂದಿ ಚಿತ್ರದಲ್ಲಿ ಇವರು ತಮ್ಮ ಮಗ ತುಷಾರ್ ಕಪೂರ್ ಜೊತೆ ಅತಿಥಿ ಪಾತ್ರದಲ್ಲಿ ಅಭಿನಯಿಸಿದ್ದರು.

ಇಂದಿಗೂ ತಮ್ಮ ಚಿರ ಯೌವ್ವನವನ್ನು ಉಳಿಸಿಕೊಂಡಿರುವ ನಟ ಜಿತೇಂದ್ರ ತಮ್ಮ ೭೭ ನೇ ವಯಸ್ಸಿನಲ್ಲಿಯೂ ಉತ್ತಮ ಆರೋಗ್ಯ ಹೊಂದಿದ್ದು ಇಂದಿಗೂ ಕೂಡ ತಮ್ಮ ಕೆಲಸಗಳಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡಿರುವ ಇವರು ಇಂದಿನ ಯುವ ಪೀಳಿಗೆಗೆ ಮಾದರಿಯ ನಟರಾಗಿದ್ದಾರೆ.

ಸಂದೀಪ ಜೋಶಿ

ಸಂದೀಪ ಜೋಶಿ

ಸಂದೀಪ್ ಜೋಶಿ - ಇವರು ಕೊಪ್ಪಳ ಜಿಲ್ಲೆಯ ಗಂಗಾವತಿ ನಿವಾಸಿಯಾಗಿದ್ದು ಪ್ರಸ್ತುತ ಸ್ವ ಉದ್ಯೋಗದಲ್ಲಿ ತೊಡಗಿಕೊಂಡಿದ್ದಾರೆ. ಬಿ.ಎ.ಮತ್ತು ಡಿಪ್ಲೊಮಾ ಇನ್ ಹಾರ್ಟಿಕಲ್ಚರ್, ಸಿ.ಟಿ.ಟಿ.ಸಿ ತರಬೇತಿ, ರೇಕಿ ಚಿಕಿತ್ಸೆ ತರಬೇತಿಯನ್ನು ಪಡೆದಿದ್ದು 13 ವರ್ಷಗಳ ಕಾಲ ರಾಯಚೂರು, ಧಾರವಾಡ ಕೃಷಿ ವಿಶ್ವವಿದ್ಯಾಲಯ ಮತ್ತು ಬಾಗಲಕೋಟೆಯ ತೋಟಗಾರಿಕೆ ವಿಶ್ವವಿದ್ಯಾನಿಲಯದಲ್ಲಿ ಕ್ಷೇತ್ರ ಸಹಾಯಕ, ಗಣಕಯಂತ್ರ ನಿರ್ವಾಹಕ ಕೆಲಸವನ್ನು ನಿರ್ವಹಿಸಿದ್ದಾರೆ. ಇವರು ಲೇಖಕರಷ್ಟೇ ಅಲ್ಲ.‌ನಟರು ಕೂಡ. ವೃತ್ತಿಯ ಜೊತೆಗೆ ರೇಕಿ ಚಿಕಿತ್ಸೆ ಮತ್ತು ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಚಿತ್ರರಂಗದ ಕೆಲವು ವಿಶಿಷ್ಟ ವಿಷಯಗಳ ಬಗ್ಗೆ ತಾನೇ ಅಲ್ಲಿ ಇಲ್ಲಿ ಸಂಶೋಧಿಸಿ, ಕೇಳಿ, ಓದಿ ತಿಳಿದ ವಿಷಯಗಳನ್ನೆಲ್ಲಾ ಒಂದೆಡೆ ಕೂಡಿಟ್ಟು, ಚಿತ್ರೋದ್ಯಮದ ಓದುಗರೊಂದಿಗೆ ಹಂಚಿಕೊಳ್ಳಲಿದ್ದಾರೆ. ಸಂದೀಪ್‌ ಜೋಶಿ ಚಿತ್ರೋದ್ಯಮ.ಕಾಂ ಬರಹಗಾರರ ತಂಡದ ಬಹು ಮುಖ್ಯ ಸದಸ್ಯ. ಸಂದೀಪ್ ಜೋಶಿಯವರ ಲೇಖನಗಳಿಗೆ ನಿಮ್ಮದೊಂದು ಮೆಚ್ಚುಗೆಯಿರಲಿ

Leave a Reply