ಜೇಮ್ಸ್ – ಅಭಿಮಾನದ ಅನಾವರಣ

ಗಡಿ ಕಾಯುವ, ಸುಭದ್ರತೆಯ ಸಂಕೇತವಾಗಿರುವ ಸೇನಾನಿಯಾಗಿ ಪುನೀತ್ ಪ್ರತ್ಯಕ್ಷವಾಗಿದ್ದರೆ. ಕೈಯಲ್ಲಿ ಮೆಷಿನ್ ಗನ್ನನ್ನ ಹಿಡಿದು ಯುದ್ಧ ಭೂಮಿಯಲ್ಲಿ ಶತ್ರು ಪಡೆಯನ್ನ ಧ್ವoಸಗೊಳಿಸಿ ವಿಜಯ ನಡೆ ಹಾಕುತ್ತಿರುವ ಪವರ್ ಫುಲ್ ಪೋಸ್ಟಾರ್ ಇದಾಗಿದೆ. ಈ ಬಾರಿ ಪವರ್ ನ ಗಮ್ಮತ್ತು “ವಾರ್” ನಲ್ಲಿ ಅನಾವರ್ಣಗೊಳ್ಳಲಿದೆ. ಗಣರಾಜ್ಯೋತ್ಸವ ದಿನದದಂದು ಹೊರಬಂದ ಈ ಚಿತ್ರಪಟ ಹಲವು ಭಾವಗಳನ್ನ ಬೆಸೆಯುವುದಂತೂ ನಿಜ… ಪುನೀತ್ ರಾಜಕುಮಾರ್ ಮೇಲ ಜನರಿಟ್ಟಿರುವ ಅಪಾರವಾದ ಪ್ರೀತಿ ಅಭಿಮಾನ ಹಾಗೂ ರಾಷ್ಟ್ರಭಕ್ತಿ ಜೋಡಿ ಹಳಿಯಾಗಿ ಭಾವ ಬಂಡಿ ಸಾಗುವ ಮಾರ್ಗವಾಗಿದೆ.
ಮೊದಲ ಬಾರಿಗೆ ಪುನೀತ್ ಅಭಿನಯದ ಸಿನಿಮಾವೊಂದು 5 ಭಾಷೆಗಳಲ್ಲಿ ದೇಶದಾದ್ಯಂತ ಬಿಡುಗಡೆಯಾಗಲಿದ್ದು ಇಡೀ ಭಾರತವೇ ಕಣ್ತುಂಬಿಸಿಕೊಳ್ಳಲಿದೆ. ನಿರ್ದೇಶಕ ಚೇತನ ಮತ್ತು ನಿರ್ಮಾಪಕ ಕಿಶೋರ್ ಪಥಿಕೊಂಡ ಸಿನಿಮಾದ ಕುರಿತಾಗಿ ಮುಂದಿನ ದಿನಗಳಲ್ಲಿ ಮತ್ತಷ್ಟು ಮಾಹಿತಿ ತಿಳಿಸಲಿದ್ದು, ಮನರಂಜನೆಯ ಔತಣಕ್ಕೆ .

P. Ghanashyam

P. Ghanashyam

ಘನಶ್ಯಾಮ್ - ಪತ್ರಿಕೋದ್ಯಮ ವಿದ್ಯಾರ್ಥಿ. ಸಿನಿಮಾ ರಂಗದ ಬಗ್ಗೆ ಬಹಳ ಒಲವು. ಅದರಲ್ಲೂ ಕನ್ನಡ ಚಿತ್ರರಂಗದ ಬಗ್ಗೆ ತುಸು ಹೆಚ್ಚೇ ಅಭಿಮಾನ. ಚಿತ್ರರಂಗದ ಕೆಲವು ವಿಶಿಷ್ಟ ವಿಷಯಗಳ ಬಗ್ಗೆ ತಾನೇ ಅಲ್ಲಿ ಇಲ್ಲಿ ಸಂಶೋಧಿಸಿ, ಕೇಳಿ, ಓದಿ ತಿಳಿದ ವಿಷಯಗಳನ್ನೆಲ್ಲಾ ಒಂದೆಡೆ ಕೂಡಿಟ್ಟು, ಚಿತ್ರೋದ್ಯಮ.ಕಾಂ ನ ಓದುಗರೊಂದಿಗೆ ಹಂಚಿಕೊಳ್ಳಲಿದ್ದಾರೆ. ಘನಶ್ಯಾಮ್ ಚಿತ್ರೋದ್ಯಮ.ಕಾಂ ನ ಲೇಖಕರೆಂಬುವುದಕ್ಕಿಂತ ಒಂದರ್ಥದಲ್ಲಿ ಸಂಪಾದಕರೇ ಎಂದರೂ ತಪ್ಪಿಲ್ಲ. ಇತರ ಲೇಖಕರ ಲೇಖನಗಳನ್ನು ಪರಿಶೀಲಿಸಿ, ಪಬ್ಲಿಷ್ ಮಾಡುವುದು, ಚಿತ್ರರಂಗದ ತಂಡಗಳ ಜೊತೆ ಸಂದರ್ಶನ ಮಾಡುವುದು... ಇತ್ಯಾದಿ ಎಲ್ಲದರಲ್ಲೂ ಚಿತ್ರೋದ್ಯಮ.ಕಾಂ ತಂಡದ ಬಹು ಮುಖ್ಯ ಸದಸ್ಯ. ತೀಕ್ಷ್ಣ ನೇತ್ರ ಎಂಬ ಹೆಸರಲ್ಲೂ ಕೆಲವು ಲೇಖನಗಳನ್ನು ಬರೆದಿದ್ದಾರೆ, ಬರೆಯಲಿದ್ದಾರೆ. ಘನಶ್ಯಾಮ್ ರ ಲೇಖನಗಳಿಗೆ ನಿಮ್ಮದೊಂದು ಮೆಚ್ಚುಗೆಯಿರಲಿ

Leave a Reply