ವೃತ್ತಿಯಲ್ಲಿ ದಂತ ವೈದ್ಯೆ, ನಿರೂಪಕಿ, ಕಂಠದಾನ ಕಲಾವಿದೆ, ಹೆಸರಾಂತ ಹಿನ್ನೆಲೆ ಗಾಯಕಿ ಈ ಎಲ್ಲಾ ಕ್ಷೇತ್ರಗಳಲ್ಲಿ ತಮ್ಮ ಸೇವೆಯನ್ನು ಸಲ್ಲಿಸಿದ ಹೆಮ್ಮೆಯ ಮಲೆನಾಡಿನ ಮಹಿಳೆ ಇವರು, ಯಾರಿವರು ಅನ್ನೋ ಕುತೂಹಲ ನಿಮಗೆ. ಹೆಸರಲ್ಲೇ ಇದೇ ಮಲೆನಾಡ ಹೆಣ್ಣು ಮಗಳು ಅವರೇ ಡಾ ಶಮಿತಾ ಮಲ್ನಾಡ್.
ಇವರು ಹುಟ್ಟಿದ್ದು ಜೂನ್ ತಿಂಗಳ 09 ರಂದು ತೀಥ೯ಹಳ್ಳಿ , ಶಿವಮೊಗ್ಗ. ತಂದೆ ಪ್ರೊಫೆಸರ್ ಯು. ವಿ. ರಾಮಚಂದ್ರ ತಾಯಿ ಹೆಚ್ ಜಿ ಸುನಂದ. ಒಕ್ಕಲಿಗರ ಸಂಘ ದಂತ ವೈದ್ಯಕೀಯ ವಿದ್ಯಾಲಯ, ಕಿಮ್ಸ್ ,ಬೆಂಗಳೂರು ದಿಂದ ಬ್ಯಾಚುಲರ್ ಆಫ್ ಡೆಂಟಲ್ ಸಜ೯ರಿ ಡಿಗ್ರಿ (ಬಿ ಡಿ ಎಸ್) ಪದವಿಯನ್ನು ಪಡೆದಿದ್ದಾರೆ. ಸಂಗೀತ ಕಲಿಯುವ ಆಸಕ್ತಿ ಮೊದಲಿನಿಂದಲೂ. ಹಿಂದೂಸ್ಥಾನಿ ಸಂಗೀತ ವಿದುಷಿ ದಿವಂಗತ ಪಂಡಿತ್ ಶೇಷಾದ್ರಿ ಗವಾಯಿ ಅವರ ಶಿಷ್ಯೆ ಕೂಡ. ಇವರು ಅವರ ಬಳಿ ಸಂಗೀತ ಕಲಿತದ್ದು ಅವರು ಗಾಯನ ಕ್ಷೇತ್ರಕ್ಕೆ ಹೆಚ್ಚು ಹೆಸರುವಾಸಿಯಾಗಲು ಸಾಧ್ಯವಾಯಿತೆಂದರೆ ಅತಿಶಯೋಕ್ತಿಯಲ್ಲ.
ಇವರು ಹಿನ್ನೆಲೆ ಗಾಯಕಿ ಯಾಗಿ ತಮ್ಮ ವೃತ್ತಿಯನ್ನು “ಕಣಿವೆ ಕಬ್ಬಳಿ ” ಭಕ್ತಿ ಗೀತೆ ಹಾಡುವ ಮೂಲಕ 1994 ರಲ್ಲಿ ಪ್ರಾರಂಭಿಸಿದ ಸಂಗೀತ ಪಯಣ ಇದುವರೆಗೂ ಸಾಗಿದೆ. ಜನಪ್ರಿಯ
ಕನ್ನಡ ಚಿತ್ರಗೀತೆಗಳಲ್ಲದೆ ಸುಗಮ ಸಂಗೀತ, ಭಕ್ತಿ ಗೀತೆಗಳನ್ನು ಹಾಡಿದ್ದಾರೆ. ಇವರು ಫಾಸ್ಟ್ ಸಾಂಗ್ ಹಾಡೋಕು ಸೈ, ಸ್ಲೋ ಸಾಂಗ್ ಹಾಡೋಕು ಸೈ, ಲವ್ ಸಾಂಗ್ ಹಾಡೋಕು ಸೈ, ಟಪಾಂಗುಚಿ ಹಾಡಿಗೂ ಸೈ…
“ನಿನಗಾಗಿ” ಚಿತ್ರದ “ಶುಕ್ರಿಯ ಶುಕ್ರಿಯ ” ಹಾಡಿಗೆ ಹಾಡಲು ಮೊದಲು ಚಿತ್ರರಂಗದಲ್ಲಿ ಅವಕಾಶ ನೀಡಿದವರು ಖ್ಯಾತ ಸಂಗೀತ ನಿರ್ದೇಶಕರು “ಗುರುಕಿರಣ್ ” ರವರು. ನಂತರ ಇವರ ಗಾಯನ ವೃತ್ತಿ ಹಂಸಲೇಖ, ವಿ. ಹರಿಕೃಷ್ಣ, ಮನೋಮೂತಿ೯, ವಿ. ಮನೋಹರ್, ರಾಜೇಶ್ ಕೃಷ್ಣನ್, ಆರ್ ಪಿ ಪಟ್ನಾಯಕ್, ಅಜು೯ನ್ ಜನ್ಯ, ಸಂದೀಪ್ ಚೌಟ, ಸಾಧು ಕೋಕಿಲ, ಯುವನ್ ಶಂಕರ್ ರಾಜ ಮತ್ತು ಇನ್ನೂ ಹಲವಾರು ಸಂಗೀತ ನಿದೇ೯ಶಕರ ಚಿತ್ರಗಳಿಗೆ ಹಾಡಿದ್ದಾರೆ.
“ಬಿರುಗಾಳಿ ” ಚಿತ್ರದ “ಮಧುರ ಪಿಸು ಮಾತಿಗೇ, ಅಧರ ತುಸು ಪ್ರೀತಿಗೆ ” ಈ ಹಾಡು ಯಾರು ತಾನೆ ಕೇಳಿರಲ್ಲ.
ನಾಗವಲ್ಲಿ (ಆಪ್ತರಕ್ಷಕ ತೆಲುಗು ಅವತರಣಿಕೆ) ಗುರುಕಿರಣ್ ಸಂಗೀತ ನಿರ್ದೇಶಕರು ಈ ಚಿತ್ರದಲ್ಲಿ “ವಂದನಾಲು ವಂದನಾಲು ಕೋಟಿ ವಂದನಾಲು ” ಹಾಡಿರೋದು ಗಮನಾರ್ಹ. ಎಲ್ ಆರ್ ಈಶ್ವರಿ ರವರು ಹಾಡಿರುವ ಗೀತೆಗಳ ರೀಮಿಕ್ಸ್ ಕೂಡ ಇವರು ಹಾಡಿ ಕೇಳುಗರಿಗೆ ಇಷ್ಟವಾಗುವಂತೆ ತಮ್ಮ ಧ್ವನಿಯನ್ನು ನೀಡಿರುವುದು.
ಕೆಲವು ಖಾಸಗಿ ವಾಹಿನಿಯಲ್ಲಿ ನಿರೂಪಕರಾಗಿ, ತೀಪು೯ಗಾರರಾಗಿ, ಅತಿಥಿ ಗಾಯಕರಾಗಿ ರಿಯಾಲಿಟಿ ಶೋ ನಡೆಸಿಕೊಟ್ಟಿದ್ದಾರೆ.
( ಮುಂದುವರೆಯುವುದು )