ತುಂಬಿದ ಕೊಡ

ರಾಮು (ರಾಜ್‍ಕುಮಾರ್) ಮತ್ತು ಉಮಾ (ಜಯಂತಿ) ಬಾಲ್ಯ ಸ್ನೇಹಿತರು. ಉಮಾಳ ತಂದೆ ಕೆ ಎಸ್ ಅಶ್ವತ್ಥ್ ಮತ್ತು ರಾಮು ತಂದೆ ಟಿ ಎನ್ ಬಾಲಕೃಷ್ಣ ಇವರಿಬ್ಬರ ಮದುವೆ ನಿಶ್ಚಯ ಮಾಡಿರುತ್ತಾರೆ. ಆದರೆ ಮೆಡಿಕಲ್ ಕಾಲೇಜು ಓದುವಾಗ ಸಹಪಾಠಿ ರಾಧಾಳನ್ನು (ಲೀಲಾವತಿ) ಪ್ರೇಮಿಸುತ್ತಾನೆ ರಾಮು. ಅವರಿಬ್ಬರ ಸಮಾಗಮ ಒಂದು ಮಳೆಯ ರಾತ್ರಿ ನಡೆದು ರಾಧಾ ಗರ್ಭಿಣಿ ಆಗುತ್ತಾಳೆ. ತಂದೆಗೆ ಹೆದರಿದ ರಾಮು ವಿಷಯ ಬಹಿರಂಗ ಪವಡಿಸದೇ ಇದ್ದಿದ್ದರಿಂದ ನಾನಾ ಕೋಟಲೆಗಳಿಗೆ ಸಿಲುಕುತ್ತಾಳೆ ರಾಧಾ….


ನರಸಿಂಹರಾಜು ಮತ್ತು ಜ್ಯೂ ರೇವತಿ ಜೋಡಿ ಇದೆ. ಚಿಂದೋಡಿ ಲೀಲಾ ರಾಮು ರಾಧಾ ಹತ್ತಿರವಾಗದಿರುವಂತಹ ಕೆಲಸ ಮಾಡುತ್ತಾಳೆ. ಲೀಲಾವತಿ ತಾಯಿಯ ಪಾತ್ರದಲ್ಲಿ ಪಾಪಮ್ಮ ಇದ್ದಾರೆ. ಜಯಶ್ರೀ ರಾಜ್ ಅಮ್ಮನ ಪಾತ್ರ. ಮುಖ್ಯ ಪತ್ರ ಕೆಲಸದಾಳಿಗೆ ಕೊಟ್ಟರೆ ಅವನು ಪೋಸ್ಟ್ ಮಾಡುವುದಿಲ್ಲ.


ಕಾಲೇಜು ಪಿಕ್ನಿಕ್ ಹಾಡು ಆಗಿನ ಕಾಲದ ಅನೇಕ ಹಾಡುಗಳ ಮೆಡ್ಲಿ ಹೊಂದಿದೆ.
ಬಾಲಕೃಷ್ಣ ಈ ಸಿನಿಮಾದಲ್ಲಿ ‘ಕರೆಕ್ಟ್ ಕರೆಕ್ಟ್’ ಅಂತ ಬಹಳ ಸಲ ಹೇಳ್ತಾರೆ.
ಎಸ್ ಜಾನಕಿ ಹಾಡಿರುವ ‘ಮದುಮಗ ಬಂದ’  ಸ್ವಲ್ಪ ಫೆಮಿಲಿಯರ್.
ಪಿ. ಕಾಳಿಂಗ ರಾವ್ ಕಾಲೇಜು ವೇದಿಕೆಯ ಮೇಲೆ
ಕೆ. ಎಸ್ ನರಸಿಂಹಸ್ವಾಮಿ ಅವರ ‘ಅಂಥಿಂಥ ಹೆಣ್ಣು ನೀನಲ್ಲ’ ಹಾಡ್ತಾರೆ. ಆ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಹಾನ್ ಲೇಖಕ ಅನಕೃ ಕಾಣಿಸಿಕೊಂಡಿದ್ದಾರೆ.

ಅವರ 100ನೇ ಕಾದಂಬರಿ ಬಂದ ಸಮಯವದು.

ಕನ್ನಡ ನಾಡು ನುಡಿಯ ಬಗೆಗೆ ಪುಟ್ಟ ಭಾಷಣ ಮಾಡುತ್ತಾರೆ ಅನಕೃ.
ರಾಜ್ ಈ ಸಿನಿಮಾದಲ್ಲಿ ಬರುವ ನಾಟಕದಲ್ಲಿ ದುಷ್ಯಂತನ ಪಾತ್ರ ವಹಿಸಿದ್ದಾರೆ (ಮತ್ತೆ ಕವಿರತ್ನ ಕಾಳಿದಾಸದಲ್ಲಿ ಈ ಪಾತ್ರ ವಹಿಸಿದರು).

ಯತಿರಾಜ್ ವೀರಾಂಬುಧಿ

ಯತಿರಾಜ್ ವೀರಾಂಬುಧಿ

ಯತಿರಾಜ್ ವೀರಾಂಬುಧಿ ವೃತ್ತಿಯಲ್ಲಿ ಎಲೆಕ್ಟ್ರಿಕಲ್ ಇಂಜಿನಿಯರ್. ಬೆಂಗಳೂರು ಮತ್ತು ಮಸ್ಕತ್ನಲ್ಲಿ ಮೂವತ್ತಮೂರು ವರ್ಷಗಳ ಕಾಲ ಅನೇಕ ಕಂಪೆನಿಗಳಲ್ಲಿ ಸೇಲ್ಸ್ ಇಂಜಿನಿಯರ್ ಆಗಿ ದುಡಿತ. 1991ರಲ್ಲಿ ಮಂಗಳ ವಾರಪತ್ರಿಕೆಯಲ್ಲಿ ಮೊಟ್ಟಮೊದಲ ಕಥೆ ‘ವಿಪರ್ಯಾಸ’ ಪ್ರಕಟ. ನಂತರ ಮೊದಲ ಕಾದಂಬರಿ ‘ಆಪತ್ತಿಗೆ ಆಹ್ವಾನ’ ಕನ್ನಡಪ್ರಭದಲ್ಲಿ ಧಾರಾವಾಹಿ. ಹದಿನಾರು ಕಾದಂಬರಿಗಳು ವಿವಿಧ ದಿನ ಮತ್ತು ವಾರ ಪತ್ರಿಕೆಗಳಲ್ಲಿ ಧಾರಾವಾಹಿಯಾಗಿ, ಮಾಸಪತ್ರಿಕೆಯ ಒಂದೇ ಸಂಚಿಕೆಯಲ್ಲಿ ಪ್ರಕಟ. ಹದಿನೆಂಟು ಕಾದಂಬರಿಗಳು, ನಾಲ್ಕು ಕಥಾ ಸಂಕಲನಗಳು(ಮಂಗಳ, ಸುಧಾ, ತರಂಗ, ಮಯೂರ, ತುಷಾರ, ಈ ವಾರ, ಚಂದನ, ಮಂದಾರ ಮಲ್ಲಿಗೆ, ಕನ್ನಡಪ್ರಭ, ಚೇತನ, ಕನ್ನಡ ಜ್ಯೋತಿ, ಉಷಾ ಪತ್ರಿಕೆ, ಪ್ರಜಾವಾಣಿ, ಮಧುರಪಲ್ಲವಿ, ಮಲ್ಲಿಗೆ, ಪ್ರಜಾಮತ, ರಾಗಸಂಗಮ, ಧಾರಾವಾಹಿ, ಕ್ರೈಂ ಪತ್ರಿಕೆಗಳಲ್ಲಿ ಪ್ರಕಟ.) ನಾಲ್ಕು ಲೇಖನ ಮಾಲೆ. ಮನೆ ಮಾತು (ವಿಜಯ ಕರ್ನಾಟಕ), ಮಾಸದ ಮಾತು (ಸುವರ್ಣ ಟೈಮ್ಸ್ ಆಫ್ ಕರ್ನಾಟಕ ದೈನಿಕ), ಮಾಸದ ಸುಖ (ಯು ಲವ್ ಯು - ಉದಯವಾಣಿ ಜೋಶ್ ಪುರವಣಿ), ಮಾಸದ ದಾಸವಾಣಿ (ಮಲ್ಲಾರ ಮಾಸ ಪತ್ರಿಕೆ) ಜೋಕ್ಗಳ ಒಂದು ಪುಸ್ತಕ ವೀರಾಂಬುಧಿ ಜೋಕ್ಸ್. ಜನಪ್ರಿಯ ಲೇಖಕ ಶ್ರೀ ಯಂಡಮೂರಿ ವೀರೇಂದ್ರನಾಥ್ ಅವರ ಹೊಸ ವ್ಯಕ್ತಿತ್ವ ವಿಕಸನದ ಪುಸ್ತಕದ ಕನ್ನಡ ಅನುವಾದ (ಕಣಿವೆಯಿಂದ ಶಿಖರಕ್ಕೆ) ಕನ್ನಡಪ್ರಭದ ಬೈಟು ಕಾಫಿಯಲ್ಲಿ ಧಾರಾವಾಹಿ. ಈ ಪುಸ್ತಕ ಸತತವಾಗಿ ನಾಲ್ಕು ವಾರಗಳ ಕಾಲ ಟಾಪ್ಟೆನ್ ಬುಕ್ಸ್ ಲಿಸ್ಟ್ನಲ್ಲಿ ನಂಬರ್ ಒನ್!

Leave a Reply