ಸಾಹಸಸಿಂಹ-ಕೋಟಿಗೊಬ್ಬನಿಗೆ ಅಭಿಮಾನದ ಅಭಿಷೇಕ“..
“ಕಲಾದೇವಿಯ ಪ್ರೀತಿಯ ಪುತ್ರ -ಕನ್ನಡಾಂಬೆಯ ವರಪುತ್ರ ನಮ್ಮ ಈಕರ್ನಾಟಕ ಸುಪತ್ರ.”

40 ವರ್ಷಗಳ ವೃತ್ತಿ ಜೀವನದ ಸುದೀರ್ಘ ಪಯಣದಲ್ಲಿ ಸೋಲು ಗೆಲುವುಗಳನ್ನ ಸಮಾನವಾಗಿ ಸ್ವೀಕರಿಸಿ,ಕನ್ನಡ,ತಮಿಳ್, ಹಿಂದಿ ,ತೆಲುಗು, ಮಲಯಾಳಂ ಸೇರಿದಂತೆ 5 ಭಾಷೆಗಳಲ್ಲಿ ಸುಮಾರು 215 ಕ್ಕು ಹೆಚ್ಚು ಚಿತ್ರಗಳಲ್ಲಿ ನಟಿಸಿರುವ “ಭಾರತದ ಮೊದಲ ಪಂಚಭಾಷ ತಾರೆ” ಡಾ.ವಿಷ್ಣುವರ್ಧನ್.
“ಕನ್ನಡ ಚಿತ್ರರಂಗದಲ್ಲಿ ಅತಿ ಹೆಚ್ಚು ದ್ವಿಪಾತ್ರಗಳಲ್ಲಿ ನಟಿಸಿರುವ ಕೀರ್ತಿ ಇವರಿಗೆ ಸಲ್ಲುತ್ತದೆ.” ಆಕ್ಷನ್ ಗು ಜೈ, ಸೆಂಟಿಮೆಂಟ್ ಗು ಸೈ, ಪಾತ್ರ ಯಾವುದೇ ಆಗಿರಲಿ ಅದನ್ನ ಸಲೀಸಾಗಿ ನಿಭಾಯಿಸಿ ಅದಕ್ಕೆ ತಕ್ಕ ನ್ಯಾಯ ಒದಗಿಸುವುದರಲ್ಲಿ ಪರಿಣಿತರಾಗಿದ್ದರು.

ಈ ನಾಡಿನ ಮಣ್ಣಿನ ಮಹತ್ವವನ್ನು, ಹೆಣ್ತನದ ಹಿರಿಮೆಯನ್ನ ಸದಾ ಎತ್ತು ಹಿಡಿಯುವ ಜವಾಬ್ದಾರಿಯನ್ನ ಬರಿ ಪರದೆಯ ಮೇಲಷ್ಟೇ ಅಲ್ಲ,ನಿಜಜೀವನದಲ್ಲಿಯು ವಹಿಸಿದ್ದರು,ಅದಕ್ಕೆ ಸಾಕ್ಷಿಯಾಗಿ ಒಂದೆಡೆ ಅವರ ಸಿನಿಮಾಗಳಿದ್ದರೆ, ಮತ್ತೊಂದೆಡೆ ಅವರು ಸ್ಥಾಪಿಸಿದ ತಂಡ “ಸ್ನೇಹಲೋಕ” ಮಾಡುತ್ತಿದ್ದ ಸಮಾಜಮುಖಿ ಕೆಲಸಗಳೇ ನಿದರ್ಶನವಾಗಿತ್ತು.

ಉನ್ನತವಾದ ಬಾಣಸಿಗ ಮಾಡಿದ ಅಡುಗೆ ಹೇಗೆ ಎಲ್ಲರಿಗೂ ಆಹ್ಲಾದಕರವಾಗಿರುತ್ತದೆಯೋ ಹಾಗೆಯೇ ಡಾ. ವಿಷ್ಣುವರ್ಧನ್ ಅಭಿನಯ ಎಲ್ಲಾ ಪೀಳಿಗೆಗೂ ಎಲ್ಲಾ ವರ್ಗದವರ ಮನಸ್ಸಿಗೆ ಹಿಡಿಸಿ,ಹತ್ತಿರವಾಗಿದ್ದಾರೆಅದಕ್ಕೆ ಆವರನ್ನ ಪ್ರೀತಿಯಿಂದ ಕನ್ನಡಿಗರು “ದಾದಾ” ಅಂತ ಕರೀತಾರೆ.

ಅಭಿಮಾನದ ಅರಮನೆಯ ಅರಸ, ಕಲಾಭೂಷಣ ಡಾ.ವಿಷ್ಣುವರ್ಧನ್ ಎಂದೆಂದಿಗೂ ಅಮರ..