ಸುಮಾರು ೯೦ ವರ್ಷಗಳಿಗಿಂತಲೂ ಹೆಚ್ಚು ಇತಿಹಾಸವನ್ನು ಹೊಂದಿರುವ ತಮಿಳು ಚಿತ್ರರಂಗವು ಭಾರತ ಚಿತ್ರರಂಗದ ಎರಡನೇ ಅತಿದೊಡ್ಡ ಚಿತ್ರರಂಗವಾಗಿದೆ. ಈ ಉದ್ಯಮವು ಚೆನೈ ಸಮೀಪದ ಕೋಡಬಾಕ್ಯಂ ಜಿಲ್ಲೆಯಲ್ಲಿದೆ. ಇಲ್ಲಿ ಅನೇಕ ತಮಿಳು ಭಾಷೆಯ ಚಿತ್ರಗಳನ್ನು ನಿರ್ಮಿಸಲಾಗುತ್ತಿದ್ದು
” ಕೋಡಬಾಕ್ಯಂ ಮತ್ತು ಹಾಲಿವುಡ್ ಎಂಬ ಎರಡು ವಿಭಿನ್ನ ಶಬ್ದಗಳ ರೂಪವೇ ಕಾಲಿವುಡ್. ಆದ್ದರಿಂದ ಈ ಜಿಲ್ಲೆಗೆ ಮತ್ತು ಉದ್ಯಮಕ್ಕೆ ಕಾಲಿವುಡ್ ಎಂದು ಕರೆಯುತ್ತಾರೆ. “
೧೯೦೦ ರ ದಶಕದಲ್ಲಿ ತೆಲುಗು ಚಿತ್ರರಂಗ, ಮಲೆಯಾಳಂ ಚಿತ್ರರಂಗ, ಕನ್ನಡ ಚಿತ್ರರಂಗ, ಹಿಂದಿ ಚಿತ್ರರಂಗ ಮತ್ತು ಸಿಂಹಳೀಯರ ಚಿತ್ರ ರಂಗಕ್ಕೆ ಮದ್ರಾಸ್ ಏಕೈಕ ಕೇಂದ್ರ ಸ್ಥಾನವಾಗಿತ್ತು. ಯುರೋಪ್ ದೇಶದಿಂದ ಆಗಮಿಸಿದ ಸಂದರ್ಶಕನೊಬ್ಬನು ವಸ್ತುಭೂತವಾದ ವಿಷಯಗಳನ್ನು ಮತ್ತು ದೈನಂದಿನ ಘಟನೆಗಳನ್ನಾಧರಿಸಿದ ಕೆಲವು ಲಘು ಮೂಕಿ ಚಿತ್ರಗಳನ್ನು ಪ್ರಥಮ ಬಾರಿಗೆ ಮದ್ರಾಸಿನಲ್ಲಿ ವಿಕ್ಟೋರಿಯಾ ಸಾರ್ವಜನಿಕ ಆವರಣದಲ್ಲಿ ಪ್ರದರ್ಶಿಸಿದರು.
ಇದು ಬ್ರಿಟಿಷ್ ಸಮುದಾಯದ ಅಚ್ಚುಮೆಚ್ಚಿನ ಸ್ಥಳವಾಗಿದ್ದರಿಂದ ಮತ್ತು ಮೊದಲ ಪ್ರಯತ್ನದಲ್ಲಿ ಪಡೆದ ಗೆಲುವಿನ ಸ್ಪೂರ್ತಿಯಿಂದ ಮೂಕಿ ಚಿತ್ರಗಳ ಪ್ರದರ್ಶನಕ್ಕಾಗಿಯೇ ಮೌಂಟ್ ರಸ್ತೆಯ ಪ್ರದೇಶದಲ್ಲಿ ಎಲೆಕ್ಟ್ರಿಕ್ ಎಂಬ ಚಿತ್ರಮಂದಿರವನ್ನು ಕಟ್ಟಿಸಿದರು. ಆದರೆ ಕೆಲವು ವರ್ಷಗಳ ನಂತರ ಕಾರಣಾಂತರಗಳಿಂದ ಮುಚ್ಚಲ್ಪಟ್ಟಿತು. ಪ್ರಸ್ತುತ ಈ ಕಟ್ಟಡದಲ್ಲಿ ಅಂಚೆ ಕಚೇರಿಗೆ ಸಂಬಂಧ ಪಟ್ಟ ಕೆಲಸಗಳು ನಡೆಯುತ್ತಿವೆ. ಇದೇ ಮೌಂಟ್ ರಸ್ತೆಯ ಪ್ರದೇಶದಲ್ಲಿ ಇಂಗ್ಲೀಷ್ ಭಾಷೆಯ ನಾಟಕಗಳು, ಪಾಶ್ಚಿಮಾತ್ಯ ಸಾಂಪ್ರದಾಯಿಕ ಸಂಗೀತದ ಕಛೇರಿಗಳು, ಮತ್ತು ಮೂಕಿ ಚಿತ್ರಗಳನ್ನು ಆಕರ್ಷಣೆಗಾಗಿ ಪ್ರದರ್ಶಿಸಲಾಗುತ್ತಿತ್ತು.
ಈ ರೀತಿಯಾಗಿ ಅನೇಕ ಸಮಾರಂಭಗಳು ನಡೆದ ಹೆಗ್ಗಳಿಕೆಗೆ ಈ ಸ್ಥಳವು ಪಾತ್ರವಾಗಿದೆ. ಟೈಟಿಯ ದಕ್ಷಿಣ ಭಾರತದ ರೈಲು ಮಾರ್ಗದ ಸಮಿಕಣ್ಣು ವಿನ್ಸೇಂಟ್ ಎಂಬ ರೈಲ್ವೆ ಉದ್ಯೋಗಿಯು ಫ್ರೆಂಚ್ ದೇಶದ ಡು ಪಾಂಚ್ ಎಂಬ ವ್ಯಕ್ತಿಯ ಹತ್ತಿರ ಚಿತ್ರ ಪ್ರಕ್ಷೇಪಕ ಮತ್ತು ಕೆಲವು ಮೂಕಿ ಚಿತ್ರಗಳನ್ನು ಖರೀದಿಸಿ ಚಿತ್ರ ಪ್ರದರ್ಶಕನಾಗಿ ತನ್ನ ಕೆಲಸವನ್ನು ಆರಂಭಿಸಿದನು ಮತ್ತು ಚಿತ್ರ ಪ್ರದರ್ಶನಕ್ಕಾಗಿ ಹಲವಾರು ಕಡೆ ಬಿಡಾರಗಳನ್ನು ನಿರ್ಮಿಸಿ ಚಿತ್ರಗಳನ್ನು ಪ್ರದರ್ಶಿಸಲು ಆರಂಭಿಸಿದರನು.
ಈ ಒಂದು ವಿನೂತನ ಪ್ರಯೋಗ ಬಿಡಾರದ ಸಿನಿಮಾ ತುಂಬಾ ಜನಪ್ರಿಯವಾಯಿತು. ಮತ್ತು ರಾಜ್ಯದ ಎಲ್ಲ ಕಡೆಯಲ್ಲೂ ವಿಸ್ತರಿಸಿದರು. ಹಲವು ವರ್ಷಗಳ ನಂತರ ವಾಕ್ಚಿತ್ರಗಳನ್ನು ನಿರ್ಮಿಸಲು ಆರಂಭಿಸಿದ್ದಲ್ಲದೆ ಕೋಯಂಬತ್ತೂರಿನಲ್ಲಿ ಒಂದು ಚಿತ್ರ ಮಂದಿರವನ್ನು ಕಟ್ಟಿಸಿದ್ದಾನೆ.
( ಮುಂದುವರೆಯುವುದು )