ತುಳು ಚಿತ್ರರಂಗ

( ಮುಂದುವರೆದ ಭಾಗ )

ಮೊದಲ ಪೌರಾಣಿಕ ಚಿತ್ರ ೧೯೭೩ ರಲ್ಲಿ  ಕೋಟಿ ಚೆನ್ನಯ್ಯ  ಚಿತ್ರವು ತೆರೆ ಕಂಡಿತು. ಇದು ತುಳುನಾಡಿನ ಪ್ರಸಿದ್ಧ ಯೋಧರ ಕಥೆಯನ್ನು ಒಳಗೊಂಡಿದ್ದು ಇಬ್ಬರು ಯೋಧರನ್ನು ಅಲ್ಲಿನ ಜನರು ದೈವ ಎಂದು ಪೂಜಿಸುತ್ತಾರೆ. ಈ ಚಿತ್ರರಂಗ ಆರಂಭವಾದ ೨೯ ವರ್ಷಗಳವರೆಗೆ ತುಳು ಚಿತ್ರಗಳು ತುಳು ನಾಡಿನ ಪ್ರದೇಶದ ಚಿತ್ರಮಂದಿರಗಳಲ್ಲಿ ಮಾತ್ರ ಬಿಡುಗಡೆಯಾಗುತ್ತಿದ್ದವು. ಆದರೆ ೨೦೦೦ ಇಸ್ವಿಯಿಂದ ತುಳು ಚಿತ್ರಗಳು ಬೆಂಗಳೂರು, ಮುಂಬಯಿ ಮತ್ತು ಗಲ್ಫ್  ದೇಶಗಳಲ್ಲಿ ಕೂಡ ಬಿಡುಗಡೆಯಾಗುತ್ತಿವೆ.

ಈ ಚಿತ್ರರಂಗದಲ್ಲಿ ಕೇವಲ ಐವತ್ತು ಲಕ್ಷ ರೂ. ದಿಂದ ಅರವತ್ತು ಲಕ್ಷ ರೂಪಾಯಿ ಒಳಗಿನ ಬಂಡವಾಳದಲ್ಲಿ ಚಿತ್ರಗಳನ್ನು ನಿರ್ಮಿಸುತ್ತಿದ್ದು ವರ್ಷಕ್ಕೆ ನಾಲ್ಕರಿಂದ ಐದು ಚಿತ್ರಗಳು ಮಾತ್ರ ಬಿಡುಗಡೆಯಾಗುತ್ತವೆ. ೧೯೭೧ ರ ಚಿತ್ರ ರಂಗದ ಮೊದಲ ಚಿತ್ರ ಎನ್ನ ತಂಗಡಿ, ನಂತರದ ಕೋಟಿ ಚೆನ್ನಯ್ಯ ಚಿತ್ರಗಳು ಸೇರಿ ೨೦೧೯ ವರೆಗೂ ೯೭ ಚಿತ್ರಗಳು ತೆರೆ ಕಂಡಿವೆ. 

೨೦೧೧ ರಲ್ಲಿ ನವೀನ್.ಡಿ.ಪಾಟೀಲ್ ಅಭಿನಯದ ಓರಿಯಾರ್ದ್ ಒರಿ ಅಸಲ್ ಚಿತ್ರವು ತೆರೆ ಕಂಡ ನಂತರ ತುಳು ಚಿತ್ರರಂಗದ ಇತಿಹಾಸದಲ್ಲಿ ದೊಡ್ಡ ಯಶಸ್ಸನ್ನು ಪಡೆಯಿತು. ೨೦೧೪ ರಲ್ಲಿ ತೆರೆ ಕಂಡ ದೇವದಾಸ್ ಕಾಪಿಕಾಡ್, ನವೀನ್.ಡಿ.ಪಾಟೀಲ್ ಮತ್ತು ಭೋಜರಾಜ್  ವಮಂಜೂರು ಮುಖ್ಯ ಪಾತ್ರದಲ್ಲಿ ನಟಿಸಿದ ಚಾಲಿ ಪೋಲುಲು ಚಿತ್ರ ಹಣಗಳಿಕೆಯಲ್ಲಿ ಯಶಸ್ಸನ್ನು ಪಡೆದು ಮಂಗಳೂರಿನಲ್ಲಿ ಪಿ.ವಿ.ಆರ್ ಚಿತ್ರ ಮಂದಿರದಲ್ಲಿ ೪೭೦ ದಿನಗಳ ಕಾಲ ಧೀರ್ಘ ಪ್ರದರ್ಶನವನ್ನು ಕಂಡಿತು. ಅಲ್ಲದೆ ರಾಜಶೇಖರ್ ಕೋಟ್ಯಾನ್ ನಿರ್ದೇಶನದಲ್ಲಿ ಮೂಡಿ ಬಂದ ಕೇರಳದ ಪ್ರಸಿದ್ಧ  ಬ್ರಹ್ಮಶ್ರೀ ನಾರಾಯಣಗುರು ಸ್ವಾಮಿ ಎಂಬ ಸ್ವಾಮಿ ಕುರಿತಾದ ಬ್ರಹ್ಮಶ್ರೀ ನಾರಾಯಣಗುರು ಸ್ವಾಮಿ  ಚಿತ್ರ ತುಳು ಚಿತ್ರರಂಗದ ಐವತ್ತನೇ ಚಿತ್ರವಾಗಿದೆ. ಮತ್ತು ಈ ಚಿತ್ರದಲ್ಲಿ ಕನ್ನಡದ ಚಿತ್ರ ನಟ ವಿಜಯ್ ರಾಘವೇಂದ್ರ ಅವರು ಕೂಡ ಅಭಿನಯಿಸಿದ್ದಾರೆ.

೨೦೧೭ ರಲ್ಲಿ ಮಂಗಳೂರಿನಲ್ಲಿ ಮೊದಲ ಬಾರಿಗೆ ತುಳು ಚಿತ್ರೋತ್ಸವವನ್ನು ಆಚರಿಸಲಾಯಿತು. ವಿಶೇಷವೇನೆಂದರೆ ಏಳು ದಿನಗಳ ಕಾಲ ನಡೆದ ಈ ಚಿತ್ರೋತ್ಸವವನ್ನು ಸಿನಿಪೋಲಿಸ್ ಮಲ್ಟಿಪ್ಲೆಕ್ಸ್ ದಲ್ಲಿ ಆಯೋಜಿಸಿದ್ದು  ೪೭ ಚಿತ್ರಗಳನ್ನು ಪ್ರದರ್ಶಿಸಲಾಗಿತ್ತು. ಆದರೆ ಇತ್ತೀಚೆಗೆ ಬೆಳವಣಿಗೆಯಲ್ಲಿ ವೈವಿಧ್ಯಮಯ ಚಿತ್ರಗಳ ಬಿಡುಗಡೆಯಿಂದ ಚಿತ್ರರಂಗದ ಬೆಳವಣಿಗೆ ಆಗುತ್ತಿದೆ. ತುಳು ಚಿತ್ರರಂಗದ ಇತಿಹಾಸದಲ್ಲಿ ಪ್ರಥಮ ಬಾರಿಗೆ ೨೦೧೮ ಅಕ್ಟೋಬರ್ ತಿಂಗಳಲ್ಲಿ ಮುಂಬಯಿ, ಪುಣೆ ಮತ್ತು ಗುಜರಾತನಲ್ಲಿ ಏಕಕಾಲದಲ್ಲಿ ತೆರೆ ಕಂಡ ಗಿರಿಗಿಟ್ ಚಿತ್ರ ಕೂಡ ಯಶಸ್ಸು ಕಂಡಿತ್ತು.

ಇಲ್ಲಿ ಗಮನಿಸಬೇಕಾದ ಅಂಶವೆಂದರೆ ೨೦೧೪ ರಲ್ಲಿ ಮದೈಮ್ ಎನ್ನುವ ತುಳು ಚಿತ್ರವನ್ನು ಮರಾಠಿ ಭಾಷೆಯಲ್ಲಿ ಮರು ನಿರ್ಮಾಣ ಮಾಡಿದ್ದರು. ಅಲ್ಲದೆ ತುಳು ಭಾಷೆಯ ಚಿತ್ರ ಮೊದಲ ಬಾರಿಗೆ ಬೇರೆ ಭಾಷೆಗೆ ರಿಮೇಕ್ ಆದ ಮೊದಲ ಚಿತ್ರವಾದರೆ ತುಳು ಚಿತ್ರರಂಗದ ಇತಿಹಾಸದಲ್ಲಿ ಇದುವರೆಗೂ ಒಂದು ರಿಮೇಕ್ ಚಿತ್ರವನ್ನು ನಿರ್ಮಿಸಿಲ್ಲ.

ಸಂದೀಪ ಜೋಶಿ

ಸಂದೀಪ ಜೋಶಿ

ಸಂದೀಪ್ ಜೋಶಿ - ಇವರು ಕೊಪ್ಪಳ ಜಿಲ್ಲೆಯ ಗಂಗಾವತಿ ನಿವಾಸಿಯಾಗಿದ್ದು ಪ್ರಸ್ತುತ ಸ್ವ ಉದ್ಯೋಗದಲ್ಲಿ ತೊಡಗಿಕೊಂಡಿದ್ದಾರೆ. ಬಿ.ಎ.ಮತ್ತು ಡಿಪ್ಲೊಮಾ ಇನ್ ಹಾರ್ಟಿಕಲ್ಚರ್, ಸಿ.ಟಿ.ಟಿ.ಸಿ ತರಬೇತಿ, ರೇಕಿ ಚಿಕಿತ್ಸೆ ತರಬೇತಿಯನ್ನು ಪಡೆದಿದ್ದು 13 ವರ್ಷಗಳ ಕಾಲ ರಾಯಚೂರು, ಧಾರವಾಡ ಕೃಷಿ ವಿಶ್ವವಿದ್ಯಾಲಯ ಮತ್ತು ಬಾಗಲಕೋಟೆಯ ತೋಟಗಾರಿಕೆ ವಿಶ್ವವಿದ್ಯಾನಿಲಯದಲ್ಲಿ ಕ್ಷೇತ್ರ ಸಹಾಯಕ, ಗಣಕಯಂತ್ರ ನಿರ್ವಾಹಕ ಕೆಲಸವನ್ನು ನಿರ್ವಹಿಸಿದ್ದಾರೆ. ಇವರು ಲೇಖಕರಷ್ಟೇ ಅಲ್ಲ.‌ನಟರು ಕೂಡ. ವೃತ್ತಿಯ ಜೊತೆಗೆ ರೇಕಿ ಚಿಕಿತ್ಸೆ ಮತ್ತು ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಚಿತ್ರರಂಗದ ಕೆಲವು ವಿಶಿಷ್ಟ ವಿಷಯಗಳ ಬಗ್ಗೆ ತಾನೇ ಅಲ್ಲಿ ಇಲ್ಲಿ ಸಂಶೋಧಿಸಿ, ಕೇಳಿ, ಓದಿ ತಿಳಿದ ವಿಷಯಗಳನ್ನೆಲ್ಲಾ ಒಂದೆಡೆ ಕೂಡಿಟ್ಟು, ಚಿತ್ರೋದ್ಯಮದ ಓದುಗರೊಂದಿಗೆ ಹಂಚಿಕೊಳ್ಳಲಿದ್ದಾರೆ. ಸಂದೀಪ್‌ ಜೋಶಿ ಚಿತ್ರೋದ್ಯಮ.ಕಾಂ ಬರಹಗಾರರ ತಂಡದ ಬಹು ಮುಖ್ಯ ಸದಸ್ಯ. ಸಂದೀಪ್ ಜೋಶಿಯವರ ಲೇಖನಗಳಿಗೆ ನಿಮ್ಮದೊಂದು ಮೆಚ್ಚುಗೆಯಿರಲಿ

Leave a Reply