ನಾದಬ್ರಹ್ಮ ಹಂಸಲೇಖ ವಿಶೇಷ

ಕನ್ನಡ ಚಿತ್ರರಂಗದ “ಸ್ವರ ಮಾಂತ್ರಿಕ” “ಸ್ವರ ಸಾವ೯ಭೌಮ ” “ಸಂಗೀತ ರಾಜಾ” ಸಾಹಿತ್ಯ ದಿಗ್ಗಜ “ಸಂಗೀತ ಗಾರುಡಿಗ” ಜನಪದ ಸಾಹಿತ್ಯ “ದೇಸೀ ದೊರೆ” ಕನ್ನಡದ ಕಟ್ಟಾಳು ಜನಪ್ರಿಯ ಸಂಗೀತ ನಿರ್ದೇಶಕ ‌ ನಾದ ಬ್ರಮ್ಹ ಹಂಸಲೇಖ ಸರ್ ರವರಿಗೆ ಜನುಮ ದಿನದ ಶುಭಾಶಯಗಳು 🌹❤🌺🍰

“ಸಂಗೀತವೇ ನಿಮ್ಮ ದೇವರು
ಚಪ್ಪಾಳೆಯೇ ನಿಮ್ಮ ಉಸಿರು”

ದೊಡ್ಮನೆ ಕುಟುಂಬದ ಕಲಾವಿದರಿಗೆ ಸಂಗೀತ ಮಾಂತ್ರಿಕ ಹಂಸಲೇಖ ರೆಂದರೆ ತುಂಬಾ ಪ್ರೀತಿ, ಹಂಸಲೇಖ ರವರಿಗೆ ಅಣ್ಣಾವೃ ಮತ್ತು ಕುಟುಂಬದವರ ಮೇಲೆ ಅಭಿಮಾನ ಇದರ ಸಂಕೇತವಾಗಿ ತಾವು ಸಂಗೀತ ನಿದೇ೯ಶಿಸಿ ಸಾಹಿತ್ಯ ರಚಿಸಿದ ಚಿತ್ರಗಳು.

ಅಣ್ಣಾವ್ರಿಗೆ ಆಕಸ್ಮಿಕ ಚಿತ್ರದ “ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು “,ಪರಶುರಾಮ ಚಿತ್ರದ “ನಗುತಾ ನಗುತಾ ಬಾಳೂ ನೀನು ” ಶಬ್ದವೇಧಿ ಚಿತ್ರದ “ಜನರಿಂದ ನಾನು ಮೇಲೆ ಬಂದೆ ಜನರನ್ನೇ ನನ್ನ ದೇವರೆಂದೆ ” .

ಶಿವಣ್ಣ ರಿಗೆ ಓಂ ಚಿತ್ರದ “ಓ ಗುಲಾಬಿಯೇ ಓ ಹೋ ಗುಲಾಬಿಯೇ “
ಎ ಕೆ 47 ಚಿತ್ರದ ” ನಾನು ಕನ್ನಡದ ಕಂದ ” ರಣರಂಗ ಚಿತ್ರದ “ಜಗವೆ ಒಂದು ರಣರಂಗ ” ಪುರುಷೋತ್ತಮ ಚಿತ್ರದ “ನಾನು ನಿಮ್ಮವನು ” ಚಂದ್ರೋದಯ ಚಿತ್ರದ “ರಾಜ ರಾಜ ಶಿವರಾಜ ” ಅಣ್ಣ ತಂಗಿ ಚಿತ್ರದ “ಅಣ್ಣ ತಂಗಿಯರ ಈ ಬಂಧ ” ಇನ್ನೂ ಹಲವಾರು.

ರಾಘವೇಂದ್ರ ರಾಜ್ ಕುಮಾರ್ ರಿಗೆ ಅನುರಾಗದ ಅಲೆಗಳು ಚಿತ್ರದ “ಅನುರಾಗದಲೆಗಳ ಮೇಲೆ ಸಂಗೀತ ಸ್ವರಗಳ ಲೀಲೆ ” ಸೂತ್ರಧಾರ ಚಿತ್ರದ ‘ನೂರಾರು ನೆನಪಿನ ಸಂತಸ ತುಂಬಿದ ಹಾಡು ಇದು ” ಇನ್ನೂ ಹಲವಾರು.

ಪುನೀತ್ ರಾಜಕುಮಾರ್ ರಿಗೆ ಅಪ್ಪು ಚಿತ್ರದ “ಪಣವಿಡು ಪಣವಿಡು ನಿನ್ನ ಪ್ರಾಣವಾ ” ಅರಸು ಚಿತ್ರದ “ಪ್ರೀತಿ ಪ್ರೀತಿ ನಿನ್ನ ಪ್ರೀತಿ ಪ್ರೀತಿ ನಿನ್ನ ಆಟ ಸಾಕು ನಿಲ್ಲಿಸು ” ಹೀಗೆ ಇನ್ನೂ..

ಸ್ವರ ಮಾಂತ್ರಿಕರ ಸಂಗೀತ ಪಯಣ ಹೀಗೆ ಮುಂದುವರಿಯಲಿ 🙏

ಜನುಮ ದಿನದ ನೆನಪಿನಲ್ಲಿ ಕೆಲವು ಇವರು ರಚಿಸಿದ ಗೀತೆಗಳ ಸಾಲುಗಳು…

💐ಹುಟ್ಟಿದರೆ ಕನ್ನಡ ನಾಡಿನಲ್ಲಿ ಹುಟ್ಟಬೇಕು
ಮೆಟ್ಟಿದರೆ ಕನ್ನಡ ಮಣ್ಣಿನಲ್ಲಿ ಮೆಟ್ಟಬೇಕು
🎷ಕಾವೆರಮ್ಮ ಕಾಪಾಡಮ್ಮ
ಈ ದೋಣಿಯ ತೇಲಿಸೂ
ಆ ತೀರವಾ ಸೇರಿಸು
🎵ಅಂದವೋ ಅಂದವೂ ಕನ್ನಡ ನಾಡೂ
ನನ್ನ ಗೂಡು ಅಲ್ಲಿದೆ ನೋಡು
ಕೇಳಿಸದೆ ಕಲ್ಲು ಕಲ್ಲಿನಲಿ ಕನ್ನಡ ನುಡೀ
🎻ಕನ್ನಡ ರೋಮಾಂಚನವೀ ಕನ್ನಡ ಕಸ್ತೂರಿ ನುಡಿಯಿದು
ಕರುನಾಡು ಮಣ್ಣಿದು ಚಿಂತಿಸು ವಂದಿಸು ಪೂಜಿಸೂ
🎤ಮುತ್ತು ಕೊಡೋಳು ಬಂದಾಗ
ತುತ್ತು ಕೊಟ್ಟೋಳ ಮರಿಬೇಡ
🌹ಜನುಮ ನೀಡುತ್ತಾಳೆ ನಮ್ಮ ತಾಯಿ
ಅನ್ನ ನೀಡುತ್ತಾಳೆ ಭೂಮಿ ತಾಯಿ
🎙ತಾಯಿ ತಾಯಿ ಲಾಲಿ ಹಾಡೋ ಭೂಮಿ ತಾಯಿಗೆ
ಲಾಲಿ ಹಾಡೋ ಹೆತ್ತ ತಾಯಿಗೆ
🎩ಅಮ್ಮಾ ನಾನು ಕನ್ನಡದ ಕಂದಾ
ಬಂದೆ ಶಾಂತಿಯ ಮಣ್ಣಿಂದಾ
ಪ್ರೀತಿ ಮಾಡಬಾರದು ಮಾಡಿದರೆ
ಜಗಕೆ ಹೆದರಬಾರದು
🎸ಕುಚಿಕೂ ಕುಚಿಕೂ ಕುಚಿಕೂ ನಾವು ಚಡ್ಡಿ ದೋಸ್ತು ಕಣೊ ಕುಚಿಕೂ
🎺ಜಾಣ ಮರೀ ಜಾಣ ಮರೀ ಪಾಪು ಮರೀ ಪಾಚೊ ಮರೀ
💐ಅಮ್ಮಾ ಊರೇನೆ ಅಂದರೂ ನೀ ನನ್ನ ದೇವರು
🌹ದೇವರಿಗೊಂದು ಕಾಗದ ಬರೆದು ಭೂಮಿಗೆ ಕರಿಬೇಕು
💜ಯಾರು ಭೂಮಿಗೆ ಮೊದಲ ಬಾರಿಗೆ ಪ್ರೀತಿಯ ಕಲೆ ತಂದರೋ
❤ಸ್ನೇಹಕ್ಕೆ ಸ್ನೇಹ ಪ್ರೀತಿಗೆ ಪ್ರೀತಿ
ನಾನು ಸ್ನೇಹ ಜೀವಿ ನೀನು ಸ್ನೇಹ ಜೀವಿ ಲೋಕದಲ್ಲಿ ಸ್ನೇಹ ಚಿರಂಜೀವಿ
🎼ನಿನ್ನಂತ ಅಪ್ಪ ಇಲ್ಲ ನಿನ್ನಂತ ಮಗಳು ಇಲ್ಲ
ನಗುತಾ ನಗುತಾ ಬಾಳೀ ನೀವು ನೂರು ವರುಷ
ಎಂದೂ ಹೀಗೆ ಇರಲಿ ಇರಲಿ ಹರುಷ ಹರುಷಾ”
ಹೀಗೇ ನಿಮ್ಮ ಸಂಗೀತ ಮತ್ತು ಸಾಹಿತ್ಯ ಸೇವೆ ಮುಂದುವರಿಯಲಿ ಗುರುಗಳೆ ಸದಾ ನಗುತಾ ಎಲ್ಲರನ್ನೂ ನಗಿಸುತಾ ಇರಿ ಮಗುವಿನ ಹಾಗೆ 🌹🌹🌹

ಚಿತ್ರರಂಗದಲ್ಲಿ ಬಹುಶಃ ಎಲ್ಲಾ ಕಲಾವಿದರೆ ಜೊತೆ ಕೆಲಸ ಮಾಡಿದ್ದಾರೆ, ಅಣ್ಣಾವೃ, ಶಿವಣ್ಣ, ರಾಘಣ್ಣ, ರವಿಚಂದ್ರನ್, ವಿಷ್ಣು ವಧ೯ನ್ ,ಶಂಕರ್ ನಾಗ್, ಕಾಶೀನಾಥ್, ಅಂಬರೀಷ್, ಉಪೇಂದ್ರ, ರಮೇಶ್ …

ಇವರು ಬರೆದಿರೋ ಹಾಡುಗಳು ಇಷ್ಟೂ ನಟರಿಗೆ ಜನಪ್ರಿಯತೆ ತಂದುಕೊಟ್ಟಿದೆ, ಇವರು ಪೆನ್ನು ಹಿಡಿದರೆ ಸಾಕು ಆ ಪದ ಪುಂಜಗಳು, ಕಲ್ಪನೆಯ ಸಾಲುಗಳು, ಹಾಗೆ ಬರುತ್ತಿರುತ್ತೆ, ನಿಜಕ್ಕೂ ಇವರು ಸರಸ್ವತಿ ವರಪುತ್ರರೇ..

ಇಂಥ ದಿಗ್ಗಜರು ನಮ್ಮ ಕನ್ನಡ ನಾಡಿನಲ್ಲಿ ಇರುವುದು ನಮ್ಮ ಪುಣ್ಯ,

ಸ್ನೇಹಕ್ಕೆ, ಪ್ರೀತಿಗೆ, ಮಾತೃ ವಾತ್ಸಲ್ಯ, ಅಣ್ಣ ತಂಗಿ ಬಾಂಧವ್ಯ, ಕನ್ನಡ ನಾಡಿನ ವಣ೯ನೆ, ಕನ್ನಡ ಭಾಷಾ ಪ್ರೇಮ, ಶೃಂಗಾರ ಗೀತೆ, ವಿರಹ ಗೀತೆ, ಕಾಮಿಡಿ ಗೀತೆ, ಎಲ್ಲಾ ರೀತಿಯ ಹಾಡುಗಳನ್ನು ನಾವು ಕೇಳಬಹುದು. ಹಾಡು ಕೇಳ್ತಾ ಕೇಳ್ತಾ ಹಾಗೆ ನಮ್ಮನ್ನು ನಾವು ಕಳೆದುಹೋಗೋದು ನಿಜ.

ಸಂಗೀತ ನಿರ್ದೇಶಕರು, ಸಾಹಿತ್ಯ ರಚನೆಕಾರರಲ್ಲದೆ ಖಾಸಗಿ ವಾಹಿನಿಯ ಸರಿಗಮಪ ಶೋ ನಲ್ಲಿ ಮುಖ್ಯ ತೀಪು೯ಗಾರರಾಗಿ ಕಿರುತೆರೆಯಿಂದ ಎಲ್ಲರ ಮನೆ ಮಾತಾಗಿದ್ದಾರೆ, ಹಲವಾರು ಹೊಸ ಪ್ರತಿಭೆಗಳು ಇವರ ಮಾಗ೯ದಶ೯ನದಿಂದ ಬಂದವರು, ನಂದಿತ, ಚೇತನ್ ಸೋಸ್ಕ, ಹೇಮಂತ್ ಕುಮಾರ್, ಅನುರಾಧ ಭಟ್, ರಾಜೇಶ್ ಕೃಷ್ಣನ್, ಕೆ ಕಲ್ಯಾಣ್, ವಿ ಹರಿಕೃಷ್ಣ, ವಿ ಮನೋಹರ್, ವಿ ಶ್ರೀಧರ್ ..

ಸಂಗೀತ ಸಂಯೋಜನೆಯಲ್ಲಿ ಹೆಚ್ಚಾಗಿ ಬಳಸುವ ಇನ್ಸ್ಟ್ರುಮೆಂಟ್ ಕೀಬೋರ್ಡ್, ಪಿಯಾನೋ, ಹಾಮೋ೯ನಿಯಂ.

🎸ಅವನೇ ನನ್ನ ಗಂಡ, ಗಂಧವ೯ ಶಾಪ ಚಿತ್ರಗಳಿಗೆ ಕಥೆ ಬರೆದವರು.
💐ಪ್ರೇಮಲೋಕ, ರಣಧೀರ, ರಣರಂಗ, ಅವನೇ ನನ್ನ ಗಂಡ, ಯುಗ ಪುರುಷ, ಹಳ್ಳಿ ಮೇಷ್ಟ್ರು ಚಿತ್ರಗಳಿಗೆ ಸಂಭಾಷಣೆ ಬರೆದಿದ್ದಾರೆ.

400 ಕ್ಕೂ ಹೆಚ್ಚು ಚಿತ್ರಗಳಿಗೆ ಸಂಗೀತ ಸಂಯೋಜನೆ ಮಾಡಿದ ಇಂಥ ಮಹಾನ್ ಸಾಧಕರಿಗೆ ಪ್ರಶಸ್ತಿಗಳ ಮಹಾಪೂರವೇ ಹರಿದು ಬಂದಿದೆ, ಕೆಲವು ನೋಡೋದಾದರೆ…

🎩ಸಂಗೀತ ಸಾಗರ ಗಾನಯೋಗಿ ಪಂಚಾಕ್ಷರಿ ಗವಾಯಿ ಚಿತ್ರದ ಸಂಗೀತ ನಿದೇ೯ಶನಕ್ಕೆ ರಾಷ್ಟ ಪ್ರಶಸ್ತಿ.
🥁ಬೆಂಗಳೂರು ಯೂನಿವರ್ಸಿಟಿಯಿಂದ ಹಾನರರಿ ಡಾಕ್ಟರೇಟ್ ಪದವಿ.
🎺ನೆನಪಿರಲಿ, ಪ್ರೀತ್ಸೆ, ಯಾರೇ ನೀನು ಚೆಲುವೆ, ಹಾಲುಂಡ ತವರು, ಆಕಸ್ಮಿಕ, ರಾಮಾಚಾರಿ ಚಿತ್ರಗಳ ಸಂಗೀತ ನಿರ್ದೇಶನಕ್ಕೆ ಅತ್ಯುತ್ತಮ ಸಂಗೀತ ನಿರ್ದೇಶಕ ಫಿಲಂ ಫೇರ್ ಪ್ರಶಸ್ತಿ.
🌹ನೆನಪಿರಲಿ, ಹಾಲುಂಡ ತವರು, ಪಂಚಾಕ್ಷರಿ ಗವಾಯಿ ಚಿತ್ರದ ಸಂಗೀತ ನಿದೇ೯ಶನಕ್ಕೆ ಕನಾ೯ಟಕ ರಾಜ್ಯ ಸಕಾ೯ರ ಪ್ರಶಸ್ತಿ.
🎵ಹಾಲುಂಡ ತವರು, ಶ್ರೀ ಮಂಜುನಾಥ ಗೀತ ರಚನೆಗೆ ಕನಾ೯ಟಕ ರಾಜ್ಯ ಸರ್ಕಾರ ಪ್ರಶಸ್ತಿ.
💜ಡಾ ರಾಜ್ ಕುಮಾರ್ ಲೈಫ್ ಟೈಂ ಆಚಿವ್ಮೆಂಟ್ ಅವಾಡ್೯
🧡ರಾಜ್ಯೋತ್ಸವ ಅವಾಡ್೯
😍ನಂದಿ ಅವಾಡ್೯- ಶ್ರೀ ಮಂಜುನಾಥ.
🎙ಹೆಲೊ ಗಾಂಧಿನಗರ ಅವಾಡ್೯ ಬೆಸ್ಟ್ ಮ್ಯೂಸಿಕ್ ಡೈರೆಕ್ಟರ್.
💙ಕೆಂಪೇಗೌಡ ಪ್ರಶಸ್ತಿ….

ತೆಲುಗು ಶ್ರೀ ಮಂಜುನಾಥ, ನನ್ನು ಪ್ರೇಮಿಂಚವೆ, ಓಂಕಾರಂ, ಅಂಕುರಂ, ಶಾಂತಿ ಕ್ರಾಂತಿ, ಪ್ರೇಮ ಯುಧ್ಧಂ, ಅವಳು…
ತಮಿಳಿನಲ್ಲಿ ಕ್ಯಾಪ್ಟನ್ ಮಗಳ್, ನಾಟ್ಟುಕ್ಕು ಒರು ನಲ್ಲವನ್, ಇದು ಉಂಗ ಕುಟುಂಬಂ, ಕೊಡಿ ಪರಕ್ಕುದು, ಪರುವ ರಾಗಂ, ಪುದಿಯ ವಾನಂ ಚಿತ್ರಗಳಿಗೆ ಕೆಲಸ ಮಾಡಿದ್ದಾರೆ.

ಇನ್ನೂ ರವಿ ಚಂದ್ರನ್ ಮತ್ತು ಇವರ ಜೋಡಿ ಬಹಳ ಚೆನ್ನಾಗಿ ಇದ್ದೂ ಹಲವಾರು ಸೂಪರ್ ಹಿಟ್ ಚಿತ್ರಗಳು ಬಂದವು, ಒಳ್ಳೆ ಫ್ರೆಂಡ್ಸ್ ಇದ್ದ ಹಾಗೆ ಇರುವಾಗಲೆ ಇದ್ದಕ್ಕಿದ್ದಂತೆ ಒಂದು ಸಣ್ಣ ಮನಸ್ಥಾಪದಿಂದ ಇಬ್ಬರು ದೂರವಾಗಿ 10 ವಷ೯ ಕೆಲಸ ಮಾಡದಿದ್ದದ್ದು ಅಭಿಮಾನಿಗಳಿಗೆ ಬೇಸರ ತಂದಿದ್ದು ನಿಜ, ನಂತರ ರಾಕ್ಲೈನ್ ವೆಂಕಟೇಶ್ ರವರು ಇವರನ್ನು ಒಂದು ಮಾಡಿದ್ದು ಒಂದಾಗೋಣ ಬಾ ಚಿತ್ರದ ಮೂಲಕ.

ಕುಟುಂಬದಲ್ಲಿ ಜಗಳ ಮುನಿಸು ಬರೋದು ಸಹಜ ಆದರೆ ಅದನ್ನೇ ಮುಂದುವರಿಸದೆ ರಾಜಿಯಾಗಿ ಹೋಗೋದರಿಂದ ಮನಸ್ಸು ಹಗುರ ಆಗುವುದು.

ಎಸ್ ಪಿ ಬಿ ಸರ್ ಎಂದರೆ ಗುರುಗಳಿಗೆ ಪಂಚ ಪ್ರಾಣ, ಎಷ್ಟೋ ಹಾಡುಗಳು ಇವರ ಪವಿತ್ರ ಬಾಂಧವ್ಯಕ್ಕೆ ಸಾಕ್ಷಿ, ಇನ್ನೂ ಹಾಡುಗಳ ಬಗ್ಗೆ ನಿಮಗೆ ತಿಳಿದಿದೆ..

ಕೊನೆಯ ಮಾತು ಮಹಾ ಗುರುಗಳ ಪ್ರತಿಯೊಂದು ಹಾಡುಗಳು ಸಾವ೯ಕಾಲಿಕ ಶ್ರೇಷ್ಠತೆ,

ಮತ್ತೊಮ್ಮೆ ಜನುಮ ದಿನದ ಶುಭಾಶಯಗಳು ಮಹಾಗುರುಗಳೆ.. ನಮ್ಮ ಚಿತ್ರೋದ್ಯಮ. ಕಾಂ ತಂಡದಿಂದ ನಿಮಗೆ ಶುಭ ಹಾರೈಕೆಗಳು 🌹

ಹುಟ್ಟೋದ್ಯಾಕೆ ಸಾಯೋದ್ಯಾಕೆ ಏನಾದರು ಸಾಧಿಸಿ ಹೋಗೋಕೆ “

ಶ್ರೀನಿವಾಸ್ ಎ

ಶ್ರೀನಿವಾಸ್ ಎ

ಶ್ರೀನಿವಾಸ್. ಎ - ಇವರು ಬೆಂಗಳೂರಿನ ಕುರುಬರಹಳ್ಳಿ ನಿವಾಸಿಯಾಗಿದ್ದು ಪ್ರಸ್ತುತ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗ ಮಾಡುತ್ತಿದ್ದಾರೆ, ಬಿ. ಕಾಂ ಪದವೀಧರರಾಗಿದ್ದು, ಕಂಪ್ಯೂಟರೈಸ್ಡ್ ಫೈನಾನ್ಶಿಯಲ್ ಕೋರ್ಸ್ ಜೊತೆಗೆ ಡಿ. ಟಿ. ಪಿ ತರಬೇತಿ ಪಡಿದಿದ್ದಾರೆ, ಹಲವಾರು ಸಂಸ್ಥೆಯಲ್ಲಿ ಕೆಲಸ ಮಾಡಿದ ಅನುಭವ ,ಹುಟ್ಟಿನಿಂದ ಅಣ್ಣಾವ್ರ ಅಭಿಮಾನಿ, ಚಲನಚಿತ್ರಗಳು, ಹಾಡುಗಳೆಂದರೆ ಬಹಳ ಇಷ್ಟವಾದವು, ಗಾಯಕರೂ ಕೂಡ, ರಾಜ್ಯ ಮಟ್ಟದ ಗಾಯನ ಸ್ಪಧೆ೯ಯಲ್ಲಿ ಭಾಗಿ , ಗಾಯನ ಕ್ಷೇತ್ರದಲ್ಲಿ ಹಲವು ಬಾರಿ ಪ್ರಯತ್ನ ಸಫಲವಾಗಿಲ್ಲ, ಹೆಚ್ಚಾಗಿ ರಾಜವಂಶದ ಮೇಲೆ ಅಭಿಮಾನ, ನಾನು ಹಾಗೂ ಹೀಗೂ ಲೇಖನ ಬರೆಯೋದಕ್ಕೆ ಅಪ್ಪಾಜಿ ಆಶೀವಾ೯ದ, ಚಿತ್ರರಂಗದ ಕೆಲವು ವಿಶಿಷ್ಟ ವಿಷಯಗಳ ಬಗ್ಗೆ ತಾನೇ ಅಲ್ಲಿ ಇಲ್ಲಿ ಸಂಶೋಧಿಸಿ, ಕೇಳಿ, ಓದಿ ತಿಳಿದ ವಿಷಯಗಳನ್ನೆಲ್ಲಾ ಒಂದೆಡೆ ಕೂಡಿಟ್ಟು, ಚಿತ್ರೋದ್ಯಮದ ಓದುಗರಿಗೆ ಹಂಚಿಕೊಳ್ಳಲಿದ್ದಾರೆ, ಚಿತ್ರ ಜಗತ್ತಿನ ಬಗ್ಗೆ ಹೆಚ್ಚಿನ ಒಲವು ಜೊತೆಗೆ ಕೈಲಾದ ಸಮಾಜ ಸೇವೆ, ಕನ್ನಡ ನಾಡಿನ ಸಂಘದಲ್ಲಿ ಸದಸ್ಯನಾಗಿ ಸೇವೆ, ಬಿಡುವಿನ ವೇಳೆಯಲ್ಲಿ ಸಮಯ ಸಿಕ್ಕಾಗ ಹಳೇ ಕಲಾವಿದರ ಭೇಟಿ ಮಾಡಿ ಅವರ ಜೀವನ ಕುರಿತು ಮಾಹಿತಿ ಕಲೆ ಹಾಕಿ ಓದುಗರಿಗೆ ತಿಳಿಸುವುದು. ಚಿತ್ರ ವಿಮರ್ಶೆ ಮಾಡಿ ಜನರಿಗೆ ತಿಳಿಸುವುದು, ಸಿನಿಮಾದಲ್ಲಿ ಹೆಚ್ಚಿನ ಆಸಕ್ತಿ, ಬೆಳ್ಳಿತೆರೆಯ ಮೇಲೆ ಬರುವ ಹಂಬಲ, ಶ್ರೀನಿವಾಸ್ ರವರು ಚಿತ್ರೋದ್ಯಮ.ಕಾಂ ಬರಹಗಾರರ ಬಹು ಮುಖ್ಯ ಸದಸ್ಯ, ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯ ಲೇಖಕರಿಗೆ ಸ್ಪೂರ್ತಿ, ಶ್ರೀನಿವಾಸ್ ರವರ ಲೇಖನಗಳಿಗೆ ನಿಮ್ಮದೊಂದು ಮೆಚ್ಚುಗೆಯಿರಲಿ. ಜೈ ಕರ್ನಾಟಕ ಜೈ ಕನ್ನಡಿಗ ಜೈ ರಾಜಣ್ಣ 🙏

Leave a Reply