ನಾವು ನೀವು ಮತ್ತು ಪೈರೆಸಿ…

ಈಗ ಅಂತರ್ಜಾಲದ ಯುಗ. ಒಂದು ಬಟನ್ ಒತ್ತಿದರೆ ಎಲ್ಲವೂ ದೊರೆಯುವಂತದ್ದು. ಆದರೆ ನಾವು ಆ ಭರದಲ್ಲಿ ಕಾನೂನು ಪಾಲನೆ ಮರೆತು ಅಡ್ಡದಾರಿಯಲ್ಲಿ ಹೊಕ್ಕು ಚಲನಚಿತ್ರಗಳನ್ನು ಕಾನೂನುಬಾಹಿರವಾಗಿ ನೋಡಬಾರದೆಂಬ ಕಳಕಳಿ ನನ್ನದು.
ಪೈರೆಸಿ ಎಂದರೆ ಚಿತ್ರತಂಡ ಮತ್ತು ಉದ್ಯಮವನ್ನು ಬೈ ಪಾಸ್ ಮಾಡಿ ಅವರಿಗೆ ಸಲ್ಲಬೇಕಾದ ಹಣ ಸಿಗದಂತೆ ಮಾಡಿ ಕದ್ದು ಮುಚ್ಚಿ ನೋಡುವುದು.
ಹಲವರಿಗೆ ಡೌನ್ ಲೋಡ್ ಎಂಬ ಪದ ಹೇಳಿದರೆ ಅದೆಲ್ಲಾ ಸರಿಯಾದ,ಅಧಿಕೃತ ಮಾರ್ಗವೇ ಎಂಬ ಭ್ರಮೆಯಿದೆ. ಹಾಗಲ್ಲ.
ಥಿಯೇಟರಿನಲ್ಲಿ ಬಿಡುಗಡೆಯಾಗಿ ಪ್ರದರ್ಶನ ಕಾಣದ ಯಾವುದೇ ಚಿತ್ರವನ್ನು ನೆಟ್ ಮೂಲಕ ಇಳಿಸಿಕೊಳ್ಳುವಾಗ ಒಂದು ಗಮನಿಸಿ.

ಓಟಿಟಿ ಎಂದು ಕರೆಯಲ್ಪಡುವ ಪ್ರೈಮ್ ವಿಡಿಯೋ,ನೆಟ್ ಫ್ಲಿಕ್ಸ್, ಸನ್ ನೆಕ್ಸ್ಟ್, ಡಿಸ್ನಿ ಹಾಟ್ ಸ್ಟಾರ್,ಝೀ ಇತ್ಯಾದಿ ಸೈಟುಗಳಲ್ಲಿ ನೀವು ಭಯ,ಹಿಂಜರಿಕೆ ಇಲ್ಲದೇ ಚಿತ್ರ ನೋಡಬಹುದು. ಇವೆಲ್ಲಾ ಅಧಿಕೃತ ಚಿತ್ರರಂಗಕ್ಕೆ ಸಂಬಂಧಿಸಿದ ತಾಣಗಳು.

ಆದರೆ ಟೊರೆಂಟ್,ಯಿಫಿ, ಟೆಲೆಗ್ರಾಮ್ ಎಂದೆಲ್ಲಾ ಸೈಟುಗಳಲ್ಲಿ ಅನಧಿಕೃತವಾಗಿ ಚಿತ್ರಗಳನ್ನು ಕಳ್ಳತನದಿಂದ ಚಿತ್ರಿಸಿ,ಮುದ್ರಿಸಿ ಹಾಕುತ್ತಾರೆ. ಹಲವು ದೇಶಗಳಲ್ಲಿ ಇದೊಂದು ಅಪರಾಧ ಸಹಾ.
ಇದಕ್ಕೆ ವಿ ಪಿ ಎನ್ ಎಂಬ ವ್ಯವಸ್ಥೆಯಲ್ಲಿ ಅವಕಾಶವಿದ್ದು ಇಲ್ಲಿ ಜನರಿಂದ ದುರುಪಯೋಗವಾಗುತ್ತಿದೆ. ನಿಷಿದ್ಧ ಮಾಫಿಯಾ ,ಸ್ಮಗಲಿಂಗ್ ಸಂಬಂಧಿಸಿದ ವೆಬ್ ತಾಣಗಳು ಇವು. ನಿಮ್ಮ ಮೊಬೈಲ್, ಪಿಸಿ ಯನ್ನು ವೈರಸ್ ಮೂಲಕ ಸಹಾ ಹಾಳು ಮಾಡಬಲ್ಲವು. ಜಾಗ್ರತೆ ವಹಿಸಿ.

ದಯವಿಟ್ಟು ನಮ್ಮದೇ ಆದ ಚಿತ್ರೋದ್ಯಮವನ್ನು ಗೌರವಿಸಿ ರಕ್ಷಿಸುವುದು ನಮ್ಮ ಕರ್ತವ್ಯ ಎಂದು ಭಾವಿಸಿ ಈ ಮನವಿ.

ನೀವು ಯಾವುದೇ ಚಿತ್ರ ವಿಮರ್ಶೆ ಮಾಡುವಾಗ ಎಲ್ಲಿ ನೋಡಿದಿರಿ ಎಂದು ಹೇಳಿದರೆ ಉತ್ತಮ ಮಾರ್ಗ, ಎಲ್ಲರಿಗೂ ಅದರ ಮೂಲ ತಿಳಿದು ಅವರೂ ನೋಡುವಂತಾಗುವುದು. ( ಚಿತ್ರ ಮಂದಿರ/ಓಟಿಟೀ ಸೈಟ್ ಹೆಸರು) ಎಂದು ಬರೆದರೆ ಸ್ಪಷ್ಟವಾಗುವುದು ನನ್ನ ಅಭಿಪ್ರಾಯ.
ಧನ್ಯವಾದಗಳು, ಸೇಫ್ ವಾಚಿಂಗ್!

Nagesh Kumar C S

Nagesh Kumar C S

ಹವ್ಯಾಸಿ ದ್ವಿಭಾಷಾ ಬರಹಗಾರ ನಾಗೇಶ್ ಕುಮಾರ್ ಸಿ.ಎಸ್‌. ಅವರು ಜನಿಸಿದ್ದು ಬೆಂಗಳೂರಿನಲ್ಲಿ ಸಿವಿಲ್ ಇಂಜಿನಿಯರಿಂಗ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಚೆನ್ನೈ ನಗರದ ಬಹುರಾಷ್ಟ್ರೀಯ ಸಂಸ್ತೆಯೊಂದರಲ್ಲಿ ಮ್ಯಾನೇಜರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರು ಬರೆದ ಸಣ್ಣ ಕತೆ, ಕಿರು ಕಾದಂಬರಿಗಳು ತರಂಗ, ತುಷಾರ ಉತ್ಥಾನ, ಸುಧಾ, ಕರ್ಮವೀರ ಸೇರಿದಂತೆ ಹಲವಾರು ನಿಯತಕಾಲಿಕೆಗಳಲ್ಲಿ ಪ್ರಕಟವಾಗಿದೆ. ರಕ್ತಚಂದನ, ನಾಳೆಯನ್ನು ಗೆದ್ದವನು, ಕರಾಳ ಗರ್ಭ, ಅಬಲೆಯ ಬಲೆ, ಹಿಮಜಾಲ, ರಹಸ್ಯಾಯನ ಇವರ ಪ್ರಮುಖ ಕೃತಿಗಳು. ‘ಕರಾಳ ಗರ್ಭ’ ಅವರ ಆಡಿಯೋ ಪುಸ್ತಕ ಇತ್ತಿಚೆಗೆ ಬಿಡುಗಡೆಗೊಂಡಿದ್ದು ಕೇಳುಗರಿಂದ ಮೆಚ್ಚುಗೆ ಪಡೆದಿದೆ. ಇವರು ಪ್ರತಿಲಿಪಿ ವೇದಿಕೆಯಲ್ಲಿ 1.5 ಲಕ್ಷ ಓದುಗರನ್ನು ಪಡೆದಿದ್ದಾರೆ. ಚಿತ್ರವಿಮರ್ಶೆಯಲ್ಲಿ ನಂಬರ್ 1 ಸ್ಥಾನದಲ್ಲಿದ್ದಾರೆ ಚಿತ್ರರಸಿಕರೂ ಆಗಿ ಹಲವಾರು ಫೇಸ್ ಬುಕ್ ಗ್ರೂಪ್ಸ್ ನಲ್ಲಿ ಸಕ್ರಿಯರಾಗಿದ್ದು.,, ಕನ್ನಡ ಹಿಂದಿ ತಮಿಳು ಇಂಗ್ಲೀಷ್ ಚಿತ್ರವಿಮರ್ಶೆಗಳನ್ನು ಬ್ಲಾಗ್ ನಲ್ಲಿ ನಡೆಸುವುದಲ್ಲದೇ IMDB website ನಲ್ಲಿ ಇಂಗ್ಲೀಶ್ ವಿಮರ್ಶಕರಾಗಿ ಭಾಗಿಯಾಗಿದ್ದಾರೆ

4 thoughts on “ನಾವು ನೀವು ಮತ್ತು ಪೈರೆಸಿ…

  1. ನಿಜವಾಗಿಯೂ ಅತ್ಯುತ್ತಮ ಮಾಹಿತಿ ಸರ್. ಚಿತ್ರೋದ್ಯಮದ ಎಲ್ಲ ಬರಹಗಾರರಲ್ಲೂ ಒಂದು ಕಳಕಳಿಯ ಮನವಿ. ಪೈರಸಿ ಗೆ ಸಂಬಂಧಿಸಿದ ಯಾವುದೇ ರೀತಿಯ ಲಿಂಕುಗಳನ್ನೂ ಹಾಕಬಾರದಂತೆ ಮನವಿ. ಚಿತ್ರೋದ್ಯಮಕ್ಕೆ ಸಪೋರ್ಟ್ ನೀಡಲು ಎಲ್ಲರೂ ಜೊತೆಗೆ ಕೈ ಜೋಡಿಸೋಣ

    – ಚಿತ್ರೋದ್ಯಮ ಅಡ್ಮಿನ್ ಟೀಮ್.

  2. ನಾಗೇಶ್ ಸರ್ ಹೇಳಿದಾಗಿನಿಂದ ಅದೆಷ್ಟೇ ಆಪ್ತರು ಹೇಳಿದರೂ ಸಹ ನಾನು ಟೆಲಿಗ್ರಾಂ ಆಗಲೀ ಮತ್ತೊಂದು ಪೈರಸಿ ವೆಬ್ಸೈಟಿನಲ್ಲಿ ಆಗಲೀ ಸಿನೆಮಾ ನೋಡುತ್ತಿಲ್ಲ. ಪ್ರೈಮ್ ಅಥವಾ ಯೂಟ್ಯೂಬ್ ಮಾತ್ರ ಬಳಸುತ್ತಿದ್ದೇನೆ.

    ಕಟ್ಟುನಿಟ್ಟಾಗಿ ಫಾಲೋ ಮಾಡ್ತಾ ಇದ್ದೀನಿ ನೋಡಿ ನಾಗೇಶ್ ಸರ್ 😁

Leave a Reply