ನಾ ಬೆಂಕಿಯಂತೆ ನಾ ಗಾಳಿಯಂತೆ – ಶಂಕರ್ ಗುರು

ಪ್ರತಿಯೊಂದು ಹಾಡುಗಳು ಕೇಳ್ತಿದ್ರೆ ಸಮಯ ಹೋಗುವುದೇ ಗೊತ್ತಾಗದು, ಅದ್ಭುತ ಚಿತ್ರ ಭರ್ಜರಿ ಪ್ರದಶ೯ನ ಕಂಡು ಗಲ್ಲಾಪೆಟ್ಟಿಗೆ ಧೂಳೀಪಟಮಾಡಿದ ಸುದಿನ, ಕಲಾ ಚಕ್ರವರ್ತಿ , ರಸಿಕರ ರಾಜ, ಡಾ. ರಾಜ್ ಕುಮಾರ್ ರವರು ತ್ರಿಪಾತ್ರದಲ್ಲಿ ವಿಭಿನ್ನ ವಿಶೇಷತೆಗಳಿಂದ ಅಭಿಮಾನಿಗಳಿಗೆ ನಟನೆಯ ಹಬ್ಬವನ್ನು ನೀಡಿದ  ಸತತ ಒಂದು ವಷ೯ ಪ್ರದಶ೯ನ ಕಂಡ ಹೆಮ್ಮೆಯ ಪಾವ೯ತಮ್ಮ ರಾಜ್ ಕುಮಾರ್ ರವರ ನಿಮಾ೯ಣದ ಅಧ್ಭುತ ಕಥೆಯನ್ನಾಧರಿಸಿದ ‘ಶಂಕರ್ ಗುರು” ಈ ಚಿತ್ರದಲ್ಲಿ ತಾರಬಳಗವೇ ತುಂಬಿದೆ ಹಿರಿಯ ನಟಿ ಕಾಂಚನ, ಪದ್ಮಪ್ರಿಯ, ಬಾಲಕೃಷ್ಣ, ಸಂಪತ್ ಕುಮಾರ್, ತೂಗುದೀಪ ಶ್ರೀನಿವಾಸ್,ವಜ್ರಮುನಿ, ಜಯಮಾಲ, ಟೈಗರ್ ಪ್ರಭಾಕರ್ ಇನ್ನೂ ಮುಂತಾದವರು.

ಈ ಚಿತ್ರದ ವಿಶೇಷತೆ ಕಾಶ್ಮೀರದ ಹೊರಾಂಗಣದಲ್ಲಿ ಚಿತ್ರೀಕರಣ,  ಅಣ್ಣ ತಮ್ಮಂದಿರ ವಿಶೇಷ ದೃಶ್ಯಗಳು, ಚಿ. ಉದಯ್ ಶಂಕರ್ ರವರ ಮನಮೋಹಕ ಸಾಹಿತ್ಯ, ಪದ್ಮಪ್ರಿಯ ಜೊತೆಗಿನ ಹಾಸ್ಯ ದೃಶ್ಯಗಳು ಇನ್ನೂ ಹಲವು…

ಈ ಚಿತ್ರ ಅಧ್ಭುತ ದಾಖಲೆ ಬರೆದು ತಮಿಳು, ತೆಲುಗು, ಹಿಂದಿ ಭಾಷೆಗಳಲ್ಲಿ ರಿಮೇಕ್  ಆದರೂ ನಮ್ಮ ಅಣ್ಣಾವ್ರ ಹಾಗೆ ನಟನೆಯಲ್ಲಿ ಮತ್ತು ಗಳಿಕೆಯಲ್ಲಿ ಯಶಸ್ಸು ಕಾಣದಿರುವುದು ನಮ್ಮ ಅಣ್ಣಾವ್ರ ನಟನಾಭಿರುಚಿ ಮತ್ತು ನಟನಾ ಪ್ರೌಢಿಮೆ ಎಂಥದು ಎಂಬುದು ಇಲ್ಲಿ ತಿಳಿಯುವುದು,

ಈ ರೀತಿ ಚಿತ್ರಗಳು ಚಲನಚಿತ್ರ ಇತಿಹಾಸದಲ್ಲಿ ಎಂದೂ ಮರೆಯಲಾಗದು 🙏

ಶ್ರೀನಿವಾಸ್ ಎ

ಶ್ರೀನಿವಾಸ್ ಎ

ಶ್ರೀನಿವಾಸ್. ಎ - ಇವರು ಬೆಂಗಳೂರಿನ ಕುರುಬರಹಳ್ಳಿ ನಿವಾಸಿಯಾಗಿದ್ದು ಪ್ರಸ್ತುತ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗ ಮಾಡುತ್ತಿದ್ದಾರೆ, ಬಿ. ಕಾಂ ಪದವೀಧರರಾಗಿದ್ದು, ಕಂಪ್ಯೂಟರೈಸ್ಡ್ ಫೈನಾನ್ಶಿಯಲ್ ಕೋರ್ಸ್ ಜೊತೆಗೆ ಡಿ. ಟಿ. ಪಿ ತರಬೇತಿ ಪಡಿದಿದ್ದಾರೆ, ಹಲವಾರು ಸಂಸ್ಥೆಯಲ್ಲಿ ಕೆಲಸ ಮಾಡಿದ ಅನುಭವ ,ಹುಟ್ಟಿನಿಂದ ಅಣ್ಣಾವ್ರ ಅಭಿಮಾನಿ, ಚಲನಚಿತ್ರಗಳು, ಹಾಡುಗಳೆಂದರೆ ಬಹಳ ಇಷ್ಟವಾದವು, ಗಾಯಕರೂ ಕೂಡ, ರಾಜ್ಯ ಮಟ್ಟದ ಗಾಯನ ಸ್ಪಧೆ೯ಯಲ್ಲಿ ಭಾಗಿ , ಗಾಯನ ಕ್ಷೇತ್ರದಲ್ಲಿ ಹಲವು ಬಾರಿ ಪ್ರಯತ್ನ ಸಫಲವಾಗಿಲ್ಲ, ಹೆಚ್ಚಾಗಿ ರಾಜವಂಶದ ಮೇಲೆ ಅಭಿಮಾನ, ನಾನು ಹಾಗೂ ಹೀಗೂ ಲೇಖನ ಬರೆಯೋದಕ್ಕೆ ಅಪ್ಪಾಜಿ ಆಶೀವಾ೯ದ, ಚಿತ್ರರಂಗದ ಕೆಲವು ವಿಶಿಷ್ಟ ವಿಷಯಗಳ ಬಗ್ಗೆ ತಾನೇ ಅಲ್ಲಿ ಇಲ್ಲಿ ಸಂಶೋಧಿಸಿ, ಕೇಳಿ, ಓದಿ ತಿಳಿದ ವಿಷಯಗಳನ್ನೆಲ್ಲಾ ಒಂದೆಡೆ ಕೂಡಿಟ್ಟು, ಚಿತ್ರೋದ್ಯಮದ ಓದುಗರಿಗೆ ಹಂಚಿಕೊಳ್ಳಲಿದ್ದಾರೆ, ಚಿತ್ರ ಜಗತ್ತಿನ ಬಗ್ಗೆ ಹೆಚ್ಚಿನ ಒಲವು ಜೊತೆಗೆ ಕೈಲಾದ ಸಮಾಜ ಸೇವೆ, ಕನ್ನಡ ನಾಡಿನ ಸಂಘದಲ್ಲಿ ಸದಸ್ಯನಾಗಿ ಸೇವೆ, ಬಿಡುವಿನ ವೇಳೆಯಲ್ಲಿ ಸಮಯ ಸಿಕ್ಕಾಗ ಹಳೇ ಕಲಾವಿದರ ಭೇಟಿ ಮಾಡಿ ಅವರ ಜೀವನ ಕುರಿತು ಮಾಹಿತಿ ಕಲೆ ಹಾಕಿ ಓದುಗರಿಗೆ ತಿಳಿಸುವುದು. ಚಿತ್ರ ವಿಮರ್ಶೆ ಮಾಡಿ ಜನರಿಗೆ ತಿಳಿಸುವುದು, ಸಿನಿಮಾದಲ್ಲಿ ಹೆಚ್ಚಿನ ಆಸಕ್ತಿ, ಬೆಳ್ಳಿತೆರೆಯ ಮೇಲೆ ಬರುವ ಹಂಬಲ, ಶ್ರೀನಿವಾಸ್ ರವರು ಚಿತ್ರೋದ್ಯಮ.ಕಾಂ ಬರಹಗಾರರ ಬಹು ಮುಖ್ಯ ಸದಸ್ಯ, ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯ ಲೇಖಕರಿಗೆ ಸ್ಪೂರ್ತಿ, ಶ್ರೀನಿವಾಸ್ ರವರ ಲೇಖನಗಳಿಗೆ ನಿಮ್ಮದೊಂದು ಮೆಚ್ಚುಗೆಯಿರಲಿ. ಜೈ ಕರ್ನಾಟಕ ಜೈ ಕನ್ನಡಿಗ ಜೈ ರಾಜಣ್ಣ 🙏

Leave a Reply