ನಿಜ ಪ್ರೀತಿಯ ಅನಾವರಣ -ಚೆಲುವೆಯೇ ನಿನ್ನೇ ನೋಡಲು

ನಿಜಕ್ಕೂ ಇಂಥ ಚಿತ್ರ ಮಾಡಿರೋ ನಿದೇ೯ಶಕರಾದ ರಘುರಾಮ್ ರವರನ್ನು ಮೆಚ್ಚಲೇಬೇಕು, ಈ ಚಿತ್ರದಲ್ಲಿ “ಶಿವಣ್ಣ“ಎಷ್ಟು ಯಂಗಾಗಿ ಕಾಣಿಸ್ತಾರೆ, ಅಭಿನಯ ತುಂಬಾ ಚೆನ್ನಾಗಿ ಮೂಡಿ ಬಂದಿದೆ, ಅದರಲ್ಲೂ ಅಣ್ಣಾವ್ರ ಜನಪ್ರಿಯ ಗೀತೆ “ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು “ ರಿಮಿಕ್ಸ್ ನಲ್ಲೂ ಪ್ರತಿಯೊಂದು ಸನ್ನಿವೇಶದಲ್ಲಿ ಅಣ್ಣಾವ್ರನ್ನು ಮತ್ತು ಶಿವಣ್ಣ ರನ್ನು ತೆರೆಯ ಮೇಲೆ ನೋಡೋದೇ ಆನಂದ, ಅಣ್ಣಾವ್ರನ್ನು ಮಧ್ಯದಲ್ಲಿ ತೋರಿಸ್ತಿದ್ರೆ ನಮಗೆ ಗೊತ್ತಿಲ್ಲದಂತೆ ಮೈ ಝುಮ್ ಮತ್ತು ಅಳು ಕೂಡ ಬರುತ್ತೆ.

ಒಬ್ಬ ಟೂರಿಸ್ಟ್ ಮ್ಯಾನೇಜರ್ ಆಗಿ ಪ್ರವಾಸಿಗರನ್ನು ತಮ್ಮ ಕುಟುಂಬದವರು ಎಂದು ತಿಳಿದು ಅಣ್ಣನಾಗಿ, ತಮ್ಮನಾಗಿ, ಗೆಳೆಯನಾಗಿ, ಮಗನಾಗಿ ಕಷ್ಟದಲ್ಲಿ ಭಾಗಿಯಾಗಿ ಯಾರಿಗೂ ನೋವಾಗದಂತೆ ನೋಡಿಕೊಳ್ಳುವ ಪಾತ್ರ ಶಿವಣ್ಣ ರವರದ್ದು, ಮದುವೆ ಆಗಿ ಜೀವಿಸುವವರು ಕ್ಷುಲ್ಲಕ ಕಾರಣಗಳಿಗೆ ಬೇರೆ ಆಗೋ ಸಂದಭ೯ವನ್ನು ಅವರ ತಪ್ಪನ್ನು ಅರಿತುಕೊಳ್ಳುವ ಸಮಯ ನೀಡಿ ಕೆಲವು ಬದಲಾವಣೆಗಳನ್ನು ತಿಳಿಸಿ ನಂತರ ಆ ದಂಪತಿಗಳು ಒಂದಾಗುವುದು, ಇಲ್ಲಿ ಹಿರಿಯ ಕಲಾವಿದರಾದ ದತ್ತಣ್ಣ ರವರ ಪಾತ್ರ ಮನಮಿಡಿಯುವಂತಿದೆ, ವಯಸ್ಸಾದ ಮೇಲೆ ಮಕ್ಕಳು ತಂದೆ ತಾಯಿ ಬಿಟ್ಟು ಅವರ ಖುಷಿಯಲ್ಲಿ ಇರೋರು ಹೆತ್ತವರ ಬಗ್ಗೆ ಕಿಂಚಿತ್ತೂ ಯೋಚಿಸದೇ ಇರೋ ಸನ್ನಿವೇಶ ಪ್ರವಾಸದಲ್ಲಿ ಬಂದಾಗ ಆಕಸ್ಮಾತಾಗಿ ಎದೆ ನೋವು ಕಾಣಿಸಿಕೊಂಡು ನರಳುವಾಗ ಶಿವಣ್ಣ ಅವರನ್ನು ಕಾಪಾಡುವ ಪ್ರಯತ್ನ ನಿದೇ೯ಶನ ಮಾಡುವ ಶೈಲಿ ಮೆಚ್ಚುವಂತದು.

ತಮಗೆ ಒಪ್ಪಿಸಿದ ಜವಾಬ್ದಾರಿಗಾಗಿ ಪ್ರೀತಿಸಿದ ಹುಡುಗಿಯನ್ನು ಪ್ರೀತಿಯನ್ನು ಕಳೆದುಕೊಳ್ಳುವ ಸನ್ನಿವೇಶ, ಕೊನೆಯಲ್ಲಿ ನಿಜವಾದ ಪ್ರೀತಿ ಗೆದ್ದೇ ಗೆಲ್ಲುವುದು ಎಂದು ಚಿತ್ರೀಕರಿಸಿದ ರೀತಿ.

“ಚೆಲುವೆ ನಿನ್ನೆ ನೋಡಲು” ಎಸ್ ಪಿ ಬಿ ರವರ ಕಂಠಸಿರಿಯಲ್ಲಿ ಫೀಲಿಂಗ್ ಸಾಂಗ್ ನಿಜವಾಗಿ ಪ್ರೀತಿಸೋ ಪ್ರತಿಯೊಬ್ಬರಿಗೂ ಒಂದು ಸಲವಾದರೂ ನೀರು ಬರುವುದು.

ಈ ಚಿತ್ರದ ಮತ್ತೊಂದು ವಿಶೇಷವೆಂದರೆ ಜೀವನದಲ್ಲಿ ನಮಗೆ ಯಾರು ಯಾರು ಸಹಾಯ, ಒಳ್ಳೆಯ ಕೆಲಸ ಮಾಡಿದಾಗ ಬೆನ್ತಟ್ಟಿ ಪ್ರೋತ್ಸಾಹ ನೀಡಿದ ಜನರಿಗೆ ಧನ್ಯವಾದಗಳು ತಿಳಿಸಿದ ಒಂದು ಹಾಡು “ಜನುಮನ ಕೊಟ್ಟ ಅಪ್ಪ ಥ್ಯಾಂಕ್ಸ್ ಅಮ್ಮ ಥ್ಯಾಂಕ್ಸ್ “ ಎನ್ನುವ ಗೀತೆ ಎಲ್ಲರಿಗೂ ಕೃತಜ್ಞತೆ ಸಲ್ಲಿಸೋದು .

ಹಾಗೇ 7 ದೇಶಗಳನ್ನು ಪ್ರಪ್ರಥಮವಾಗಿ ತೆರೆಯ ಮೇಲೆ ತೋರಿಸಿದ ಚಿತ್ರ “ಚೆಲುವೆಯೇ ನಿನ್ನೇ ನೋಡಲು “

ಶ್ರೀನಿವಾಸ್ ಎ

ಶ್ರೀನಿವಾಸ್ ಎ

ಶ್ರೀನಿವಾಸ್. ಎ - ಇವರು ಬೆಂಗಳೂರಿನ ಕುರುಬರಹಳ್ಳಿ ನಿವಾಸಿಯಾಗಿದ್ದು ಪ್ರಸ್ತುತ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗ ಮಾಡುತ್ತಿದ್ದಾರೆ, ಬಿ. ಕಾಂ ಪದವೀಧರರಾಗಿದ್ದು, ಕಂಪ್ಯೂಟರೈಸ್ಡ್ ಫೈನಾನ್ಶಿಯಲ್ ಕೋರ್ಸ್ ಜೊತೆಗೆ ಡಿ. ಟಿ. ಪಿ ತರಬೇತಿ ಪಡಿದಿದ್ದಾರೆ, ಹಲವಾರು ಸಂಸ್ಥೆಯಲ್ಲಿ ಕೆಲಸ ಮಾಡಿದ ಅನುಭವ ,ಹುಟ್ಟಿನಿಂದ ಅಣ್ಣಾವ್ರ ಅಭಿಮಾನಿ, ಚಲನಚಿತ್ರಗಳು, ಹಾಡುಗಳೆಂದರೆ ಬಹಳ ಇಷ್ಟವಾದವು, ಗಾಯಕರೂ ಕೂಡ, ರಾಜ್ಯ ಮಟ್ಟದ ಗಾಯನ ಸ್ಪಧೆ೯ಯಲ್ಲಿ ಭಾಗಿ , ಗಾಯನ ಕ್ಷೇತ್ರದಲ್ಲಿ ಹಲವು ಬಾರಿ ಪ್ರಯತ್ನ ಸಫಲವಾಗಿಲ್ಲ, ಹೆಚ್ಚಾಗಿ ರಾಜವಂಶದ ಮೇಲೆ ಅಭಿಮಾನ, ನಾನು ಹಾಗೂ ಹೀಗೂ ಲೇಖನ ಬರೆಯೋದಕ್ಕೆ ಅಪ್ಪಾಜಿ ಆಶೀವಾ೯ದ, ಚಿತ್ರರಂಗದ ಕೆಲವು ವಿಶಿಷ್ಟ ವಿಷಯಗಳ ಬಗ್ಗೆ ತಾನೇ ಅಲ್ಲಿ ಇಲ್ಲಿ ಸಂಶೋಧಿಸಿ, ಕೇಳಿ, ಓದಿ ತಿಳಿದ ವಿಷಯಗಳನ್ನೆಲ್ಲಾ ಒಂದೆಡೆ ಕೂಡಿಟ್ಟು, ಚಿತ್ರೋದ್ಯಮದ ಓದುಗರಿಗೆ ಹಂಚಿಕೊಳ್ಳಲಿದ್ದಾರೆ, ಚಿತ್ರ ಜಗತ್ತಿನ ಬಗ್ಗೆ ಹೆಚ್ಚಿನ ಒಲವು ಜೊತೆಗೆ ಕೈಲಾದ ಸಮಾಜ ಸೇವೆ, ಕನ್ನಡ ನಾಡಿನ ಸಂಘದಲ್ಲಿ ಸದಸ್ಯನಾಗಿ ಸೇವೆ, ಬಿಡುವಿನ ವೇಳೆಯಲ್ಲಿ ಸಮಯ ಸಿಕ್ಕಾಗ ಹಳೇ ಕಲಾವಿದರ ಭೇಟಿ ಮಾಡಿ ಅವರ ಜೀವನ ಕುರಿತು ಮಾಹಿತಿ ಕಲೆ ಹಾಕಿ ಓದುಗರಿಗೆ ತಿಳಿಸುವುದು. ಚಿತ್ರ ವಿಮರ್ಶೆ ಮಾಡಿ ಜನರಿಗೆ ತಿಳಿಸುವುದು, ಸಿನಿಮಾದಲ್ಲಿ ಹೆಚ್ಚಿನ ಆಸಕ್ತಿ, ಬೆಳ್ಳಿತೆರೆಯ ಮೇಲೆ ಬರುವ ಹಂಬಲ, ಶ್ರೀನಿವಾಸ್ ರವರು ಚಿತ್ರೋದ್ಯಮ.ಕಾಂ ಬರಹಗಾರರ ಬಹು ಮುಖ್ಯ ಸದಸ್ಯ, ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯ ಲೇಖಕರಿಗೆ ಸ್ಪೂರ್ತಿ, ಶ್ರೀನಿವಾಸ್ ರವರ ಲೇಖನಗಳಿಗೆ ನಿಮ್ಮದೊಂದು ಮೆಚ್ಚುಗೆಯಿರಲಿ. ಜೈ ಕರ್ನಾಟಕ ಜೈ ಕನ್ನಡಿಗ ಜೈ ರಾಜಣ್ಣ 🙏

Leave a Reply