ನಾನು (ರುದ್ರ ಪ್ರಯಾಗ್ ) ನಾಯಕ ನಟನಾಗಿ ಅಭಿನಯಿಸುತ್ತಿರುವ ಎರಡನೆಯ ಚಿತ್ರ ‘ಮೃತ್ಯುಂಜಯಂ’. ಇದು ದೈವ ಶಕ್ತಿ ಮತ್ತು ದುಷ್ಟ ಶಕ್ತಿಗಳ ನಡುವೆ ನಡೆಯುವ ಕಥೆಯನ್ನು ಹೊಂದಿರುತ್ತದೆ.
ಈ ಚಿತ್ರದ ಮಾತಿನ ಭಾಗದ ಚಿತ್ರೀಕರಣ ಪೂರ್ತಿಯಾಗಿ ಮುಗಿದಿದ್ದು, ಇತ್ತೀಚೆಗಷ್ಟೇ ಹಾಡುಗಳ ಚಿತ್ರೀಕರಣವು ಕರಾವಳಿಯ ಸುಂದರ ತಾಣದಲ್ಲಿ ಜರುಗಿತು. ಬರುವ ತಿಂಗಳಲ್ಲಿ ಹಾಡುಗಳು ಮತ್ತು ಚಿತ್ರದ ಟ್ರೈಲರ್ ಅನ್ನು ಬಿಡುಗಡೆ ಮಾಡಲು ಚಿತ್ರ ತಂಡದವರು ಕಾರ್ಯಗತವಾಗಿದ್ದರೆ, ಮೇ ಅಥವಾ ಜೂನ್ ತಿಂಗಳಲ್ಲಿ ಚಿತ್ರವು ರಾಜ್ಯಾದ್ಯಂತ ಬಿಡುಗಡೆ ಆಗುವ ನಿರೀಕ್ಷೇ ಇದೆ.
ಲೇಖಕರು : ರುದ್ರ ಪ್ರಯಾಗ್