ನನ್ನೊಬ್ಬ ಬಿಹಾರಿ ಮಿತ್ರ ನನ್ನನ್ನು ಪ್ರೇರೇಪಿಸಿದ್ದು…
ಅರೆ ಸರ್ ಏ ಕ್ಯಾ ಅಂಡ್ಬಂಡ್ ಬಾಲಿವುಡ್, ಕನ್ನಡ್ ಮೂವೀ ದೇಖ್ತೇ ರೆಹ್‌ತೇ ಹೋ..Batman Begins ,Dark Knight ದೇಖೋನಾ….ಮಸ್ತ್ ಹೆ ಸರ್…
ಅಲ್ಲಿಂದ ಸುರುವಾದದ್ದು ನೊಲಾನ್ ಪ್ರೇಮ…
ಜೋಕರ್‌ಗೆ ಅಸ್ಮಿತೆ ತಂದು ಕೊಟ್ಟದ್ದೇ Dark Knight ಎಂದರೆ ತಪ್ಪಾಗಲಿಕ್ಕಿಲ್ಲ.
ಆದ್ರೆ ಜ್ಯಾಕ್ ನಿಕಲ್ಸನ್ ಇದನ್ನು ಒಪ್ಪಲ್ಲ…ಆತನ ಪ್ರಕಾರ ಆತನೇ The Best Joker.
ಆದರೆ ಏನೇ ಹೇಳಿ..
ಆಸ್ಟ್ರೇಲಿಯನ್ ಹೀತ್ ಲೆಜರ್ ಡ್ರಗ್ಸ್ ಸೇವನೆಯಿಂದಾಗಿ ಸಾಯುವ ಮುನ್ನ ಮಾಡಿದ ಪಾತ್ರ ಅಜರಾಮರ…ತನ್ನ ಮೇಕಪ್‌ನಿಂದಾಗಿ ಬಾಯಿ ಒಣಗಿ ನಾಲಿಗೆಯಿಂದ ತುಟಿ ಸವರುವುದಿದೆಯಲ್ಲಾ..ಅದು ಹೈಲೈಟ್…scriptನಲ್ಲಿಲ್ಲದಿದ್ದರೂ…

ಇದೆರಡೂ ಕತೆಗಳು..ಮಕ್ಕಳಿಗೆ bedtime stories ಹೇಳಲಿಕ್ಕೆ ತುಂಬಾ ಸರಿ…
ನನ್ನ ಮಗಳಿಗಂತೂ ಈ ಕತೆಗಳು ತುಂಬಾ ಉತ್ಸಾಹ ಮೂಡಿಸುತ್ತದೆ.
ನೊಲಾನ್‌ನ ಇಂಟರ್‌ಸ್ಟೆಲ್ಲಾರ್…ವರ್ಮ್‌ಹೋಲ್ ಒಳಗೆ ನುಗ್ಗಿ…ಬೇರೊಂದು universe ಒಳಗೆ ಹೊಗ್ಗಿ…black Hole ತಲುಪಿ ತನ್ನ ಮಗಳೊಟ್ಟಿಗೆ communication ಮಾಡೋ ದೃಶ್ಯ ಎಷ್ಟು ಭಾವೋದ್ರೇಕ ಮಾಡುತ್ತದೆ ನೋಡಿಯೇ ತಿಳಿಯಬೇಕು.
ಪ್ರೆಸ್ಟಿಜ್ ಮತ್ತು ಇನ್ಸೆಪ್ಷನ್ ನ ಕಡೆಯ ದೃಶ್ಯ ಅರ್ಥ ಮಾಡಿಕೊಂಡವರೇ ಧನ್ಯರು….
ಏನೂ ಅರ್ಥವಾಗದವರಿಗೆ ಮಾಡಿದಂತಹಾ ಡನ್‌ಕಿರ್ಕ್…ಯುದ್ಧದ ವಿವಿಧ ಮಜಲುಗಳನ್ನು ತಿಳಿಸುವುದಲ್ಲದೇ ತನ್ನದೇ ವಿಧಾನ ಬಳಸಿ ವಿವಿಧ ಟೈಮ್ ಪಿರಿಯಡ್‌ಗಳನ್ನು ಒಂದೆಡೆ ಮಿಲಾಯಿಸುವುದಿದೆಯಲ್ಲಾ…
ನೋಲಾನ್‌ಗೆ ನೋಲಾನೇ ಸಾಟಿ.
ನನಗೇ ಇನ್ನೊಮ್ಮೆ ಎಲ್ಲಾ ನೋಡಬೇಕೆನುಸುತ್ತಿದೆ