ಕನ್ನಡ ಚಿತ್ರ : ಪರಾರಿ (೨೦೧೩)
ತಾರಾಗಣ: ಶೃಂಗ, ಶ್ರೀಶಾಂತ್, ಬುಲೆಟ್ ಪ್ರಕಾಶ್
ನಿರ್ದೇಶಕ: ಕೆ.ಎಮ್.ಚೈತನ್ಯ
ಎಡಬಿಡಂಗಿಗಳ ಕಾಮಿಡಿ ಜರ್ನಿಯೇ ಪರಾರಿ
ಈ ಚಿತ್ರದಲ್ಲಿ ಮೂವರು ನಾಯಕರಿದ್ದು ಜವಾಬ್ದಾರಿಯೇ ಇಲ್ಲದ ಕೋತಿಗಳು ಏನೋ ಮಾಡಲು ಹೋಗಿ ಮಾಡಿಕೊಳ್ಳುವ ಎಡವಟ್ಟುಗಳ ಆಧಾರದ ಮೇಲೆ ಈ ಕಥೆಯನ್ನು ರಚಿಸಲಾಗಿದೆ. ಒಬ್ಬ ಸ್ವಾಮಿಯ ಸಲಹೆಯಂತೆ ಆಂದ್ರ ಪ್ರದೇಶದ ಕಾಮಾಟಿಪುರ ಎಂಬ ಗ್ರಾಮಕ್ಕೆ ಹೋಗುತ್ತಾರೆ. ಅಲ್ಲಿಗೆ ಮಜಾ ಮಾಡಲು ಹೋದ ಈ ಮೂವರು ನಾಯಕರು ಅಲ್ಲಿಯ ಹುಡುಗಿಯರ ಪ್ರೀತಿಯಲ್ಲಿ ಬಿದ್ದು ಅವರೊಂದಿಗೆ ಅಲ್ಲಿಂದ ಪರಾರಿಯಾಗುತ್ತಾರೆ.
ಇದೇ ಸಂದರ್ಭದಲ್ಲಿ ತಗಲಿಕೊಳ್ಳುವ ಶವದಿಂದ ಇವರು ಪಡುವ ತೊಂದರೆ,ಮಾರ್ಗದ ಮಧ್ಯದಲ್ಲಿ ಪೋಲೀಸ್ ಇನ್ಸಪೆಕ್ಟರ್ ಶರತ್ ಲೋಹಿತಾಶ್ವ ಕಣ್ಣಿಗೆ ಬಿದ್ದು ಪಡಬಾರದ ತೊಂದರೆಯನ್ನು ಪಡುತ್ತಾರೆ. ಈ ಚಿತ್ರದಲ್ಲಿ ಕಾಮಿಡಿಯೇ ಪ್ಲಸ್ ಪಾಯಿಂಟ್ ಆಗಿರುವುದರಿಂದ ಮುಂದೆ ನಿರೀಕ್ಷಿಸುವಂತಹ ಕುತೂಹಲವೇನು ಇಲ್ಲ.
ಚಿತ್ರದ ಮೊದಲ ಭಾಗ ವೇಗವಾಗಿ ಸಾಗಿದರೂ ದ್ವಿತೀಯಾರ್ಧದಲ್ಲಿ ವೇಗವು ಕುಂಠಿತಗೊಂಡಿದ್ದು ಕ್ಲೈಮ್ಯಾಕ್ಸ್ ಸನ್ನಿವೇಶವನ್ನು ಅನಗತ್ಯವಾಗಿ ಎಳೆಯಲಾಗಿದೆ. ಈ ಚಿತ್ರದಲ್ಲಿ ನಟರಾದ ಶೃಂಗ,ಶೃವಂತ್ ಮತ್ತು ಬುಲೆಟ್ ಪ್ರಕಾಶ್. ಹಾಸ್ಯದ ಹೊಳೆಯನ್ನು ಹರಿಸಿದ್ದಾರೆ. ಮನೋರಂಜನೆಯ ದೃಷ್ಟಿಯಿಂದ ನಿರ್ಮಿಸಿದ್ದು ಈ ಚಿತ್ರದಲ್ಲಿ ಹಾಸ್ಯಕ್ಕೆ ಮನೋರಂಜನೆಗೆ, ಕೊರತೆಯಿಲ್ಲ.